Viral Post: ಕಾರನ್ನು ಇಲ್ಲಿ ನಿಲ್ಲಿಸಬೇಡಿ ಎಂದು ಕಾರಿನ ಗ್ಲಾಸ್​​ಗೆ ಅಂಟಿಸಿದ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ಜನ

ತಮ್ಮ ಮನೆಯ ಮುಂದೆ ಕಾರು ಪಾರ್ಕಿಂಗ್ ಮಾಡಬೇಡಿ ಎಂದು ಸಮಾಧಾನದಿಂದ ಮನವಿ ಮಾಡಿಕೊಳ್ಳುವ ನೋಟಿಸ್​​​ ವೈರಲ್​ ಆಗಿದೆ.

Viral Post: ಕಾರನ್ನು ಇಲ್ಲಿ ನಿಲ್ಲಿಸಬೇಡಿ ಎಂದು ಕಾರಿನ ಗ್ಲಾಸ್​​ಗೆ ಅಂಟಿಸಿದ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ಜನ
ವೈರಲ್​ ಫೋಟೋ
Follow us
|

Updated on:Jun 29, 2023 | 1:44 PM

ಬೆಂಗಳೂರು: ಈ ಬೆಂಗಳೂರಿನಲ್ಲಿ ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್ ಮಾಡುವ ಜನರೇ ಇರುವುದು, ಇಲ್ಲಿ ಪಾರ್ಕಿಂಗ್ ಮಾಡಬೇಡಿ ಎಂದು ಬೋರ್ಡ್​ ಹಾಕಿದ್ರು, ಇದನ್ನು ಗಮನಿಸುವುದಿಲ್ಲ. ಅದು ಅನೇಕ ಬಾರಿ ಜಗಳಕ್ಕೂ ಕಾರಣವಾಗಿ, ಕೆಲವೊಂದು ಕಡೆ ಕೊಲೆಯೆ ಆಗಿದೆ. ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಡುವ ಜನರೇ ಹೆಚ್ಚು, ಒಂದು ಬಾರಿ ಯೋಚಿಸಿ, ತಮ್ಮ ಮನೆಯ ಮುಂದೆ ಹೀಗೆ ಪಾರ್ಕಿಂಗ್​​ ಮಾಡಬೇಡಿ ಎಂದು ಸಮಾಧಾನದಿಂದ ಹೇಳುವ ತಾಳ್ಮೆ ಈ ಬೆಂಗಳೂರಿನಲ್ಲಿ ಅನೇಕ ಜನರಿಗೆ ಇಲ್ಲ. ಈ ಕಾರಣಕ್ಕೆ ಜಗಳಕ್ಕೆ ಕಾರಣವಾಗುವುದು. ಪಾರ್ಕಿಂಗ್ ಮಾಡಿದ ವ್ಯಕ್ತಿ ನಮ್ಮ ಮುಂದೆ ಮಾತಾನಾಡಲು ಸಿಕ್ಕಿಲ್ಲ ಅಥವಾ ಮಾತನಾಡಲು ಮುಜುಗರ ಎಂದೆನಿಸಿದರೆ, ಒಂದು ವೇಳೆ ಮುಖಾಮುಖಿಯಾಗಿ ಅದು ಜಗಳಕ್ಕೆ ಕಾರಣವಾದರೆ ಎಂಬ ಆತಂಕವಿದ್ದರೆ ಹೀಗೆ ಮಾಡುಬಹುದು. ಅದು ಹೇಗೆ? ಇಲ್ಲಿದೆ ನೋಡಿ,  ಒಂದು ಟ್ವಿಟರ್​ ಪೋಸ್ಟ್, ಎಲ್ಲ ಕಡೆ ವೈರಲ್​​ ಆಗಿದೆ. ಇದಕ್ಕೆ ನೆಟ್ಟಿಗರು ಕೂಡ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯ ಮುಂದೆ ಕಾರು ಪಾರ್ಕಿಂಗ್ ಮಾಡಬೇಡಿ ಎಂದು ಸಮಾಧಾನದಿಂದ ಮನವಿ ಮಾಡಿಕೊಳ್ಳುವ ನೋಟಿಸ್​​​ ವೈರಲ್​ ಆಗಿದೆ.

ನಮ್ಮ ಪಾರ್ಕಿಂಗ್ ಸ್ಥಳದಲ್ಲಿ ನಿಮ್ಮ ವಾಹನ ನಿಲ್ಲಿಸಬೇಡಿ ಎಂದು ಬೆಂಗಳೂರಿನ ನಿವಾಸಿಯೊಬ್ಬರಿಗೆ ನೆರೆಯವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. DevOps ಇಂಜಿನಿಯರ್ ಆಗಿರುವ ಸುಭಾಸಿಸ್ ದಾಸ್ ಅವರು ತಮ್ಮ ಕಾರಿನ ಗ್ಲಾಸ್​​ಗೆ ಅಂಟಿಸಿರುವ ನೋಟಿನ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.​

ಈ ಫೋಟೋ ಕೋರಮಂಗಲದಲ್ಲಿ ಕಂಡುಬಂದಿದೆ. ಬೆಂಗಳೂರು ಮಹಾಕಾವ್ಯದ ನಗರದ್ದು ಎಂದು ಸುಭಾಸಿಸ್ ದಾಸ್ ಟ್ವೀಟ್ ಮಾಡಿದ್ದಾರೆ. ಟ್ವಿಟರ್​ನಲ್ಲಿ ವೈರಲ್​​ ಆಗಿರುವ ನೋಟಿಸ್​​ನಲ್ಲಿ ಹೀಗೆ ಬರೆಯಲಾಗಿದೆ, ಹಾಯ್, ದಯವಿಟ್ಟು ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸಬೇಡಿ! ನಾವು ಈ ಹಿಂದೆ ಇಲ್ಲಿ ಪಾರ್ಕಿಂಗ್ ಮಾಡಬೇಡಿ ಎಂದು ನಿಮ್ಮನ್ನು ವಿನಂತಿಸಿದ್ದೇವೆ. 2000ನೇ ಇಸವಿಯಿಂದ ನಾವು ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮಲ್ಲೂ 2 ಕಾರುಗಳು ಇದೆ, ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆದ್ದರಿಂದ, ನಮಗೆ ಉತ್ತಮ ಪ್ರಮಾಣದ ಪಾರ್ಕಿಂಗ್ ಸ್ಥಳದ ಅಗತ್ಯವಿದೆ. ದಯವಿಟ್ಟು ನೀವು ಈ ಹಿಂದೆ ಪಾರ್ಕಿಂಗ್​​ ಮಾಡುತ್ತಿದ್ದ ಸ್ಪಾಟ್​​ನಲ್ಲಿಯೇ ಮಾಡಿ. ನಾವು ಒಳ್ಳೆಯವರಾಗಿರೋಣ ಮತ್ತು ಉತ್ತಮ ನೆರೆಹೊರೆಯವರಾಗಿರೋಣ ಧನ್ಯವಾದಗಳು, ಇಂತೀ ನಿಮ್ಮ ನೆರೆಹೊರೆಯವರು.

ಇದನ್ನೂ ಓದಿ: Mysore News: ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಬಾಲಕಿ ಆತ್ಮಹತ್ಯೆ

ಈ ಬಗ್ಗೆ ಟ್ವಿಟರ್​ನಲ್ಲಿ​​ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್​​ ಕೂಡ ಮಾಡಿದ್ದಾರೆ. ಇಲ್ಲಿ ಅನೇಕರ ಪಾರ್ಕಿಂಗ್​​ನಿಂದ ಅನುಭವಿಸಿದ ಕಿರಿಕಿರಿಯ ಬಗ್ಗೆ ಹಂಚಿಕೊಂಡಿದ್ದಾರೆ. ಕನಿಕಾ ಚೌಧರಿ ಬೆಂಗಳೂರು ಎಂಬುವವರು ಇದೊಂದು ಉತ್ತಮವಾಗಿದೆ ಎಂದು ಕಮೆಂಟ್​​ ಮಾಡಿದ್ದಾರೆ. ಇನ್ನೊಬ್ಬ ಟ್ವಿಟರ್​ ಬಳಕೆದಾರರಾದ ಅಂಕಿತ್ ಬೆರ್ರಿ ಅವರು ಇದೇ ರೀತಿಯ ಸಮಸ್ಯೆಯನ್ನು ನಾನು ಎದುರಿಸಿದೆ ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:34 pm, Thu, 29 June 23

ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ