ಬೆಂಗಳೂರು: ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣಕ್ಕೆ ತಳುಕು ಹಾಕಿದ ಹುಡುಗಿ ವಿಚಾರ; ಪೊಲೀಸರ ಮುಂದೆ ಕಣ್ಣೀರಾದ ವಿದ್ಯಾರ್ಥಿಗಳು

Bengaluru news: ನಾಗರಬಾವಿಯಲ್ಲಿರುವ ಖಾಸಗಿ ಕಾಲೇಜಿನ ಮುಂದೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ವೈಷಮ್ಯ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು: ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣಕ್ಕೆ ತಳುಕು ಹಾಕಿದ ಹುಡುಗಿ ವಿಚಾರ; ಪೊಲೀಸರ ಮುಂದೆ ಕಣ್ಣೀರಾದ ವಿದ್ಯಾರ್ಥಿಗಳು
ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ವೈಷಮ್ಯ ಇರುವ ವಿಚಾರ ಬೆಳಕಿಗೆ ಬಂದಿದೆ (ಸಾಂದರ್ಭಿಕ ಚಿತ್ರ)
Follow us
ರಾಚಪ್ಪಾಜಿ ನಾಯ್ಕ್
| Updated By: Rakesh Nayak Manchi

Updated on: Jun 29, 2023 | 11:28 AM

ಬೆಂಗಳೂರು: ನಗರದ ನಾಗರಾಭಾವಿ ಖಾಸಗಿ ಕಾಲೇಜು ಮುಂದೆ ವಿದ್ಯಾರ್ಥಿ ಮೇಲೆ ಲಾಂಗ್​ನಿಂದ ಹಲ್ಲೆ (Assault) ನಡೆಸಿದ ಪ್ರಕರಣದ ಹಿಂದಿನ ಅಸಲಿ ಕಾರಣ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಹಲ್ಲೆಗೊಳಗಾದ ದರ್ಶನ್ ಹಾಗೂ ಪ್ರಮುಖ ಆರೋಪಿ ಸಾಹಸ್ ಗೌಡ ಅಲಿಯಾಸ್ ಸತ್ಯ ಎಂಬವರ ನಡುವೆ ವೈಷಮ್ಯ ಇತ್ತು. ಈ ವಿಚಾರವಾಗಿಯೇ ಗಲಾಟೆಗಳು ನಡೆದಿದ್ದವು ಎಂದು ತಿಳಿದುಬಂದಿದೆ. ಅಷ್ಟಕ್ಕೂ ಹಲ್ಲೆಗೆ ಕಾರಣವೇನು? ವಿದ್ಯಾರ್ಥಿಗಳು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದು ಯಾಕೆ? ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರನ್ನೊಳಗೊಂಡ ದರ್ಶನ್ ಗುಂಪು ಮತ್ತು ಸಾಹಸ್ ಗುಂಪು ಓರ್ವ ಯುವತಿಯ ವಿಚಾರದಲ್ಲಿ ಕೆಲ ತಿಂಗಳ ಹಿಂದೆ ಜಗಳ ಮಾಡಿಕೊಂಡಿದ್ದವು. ಈ ವೇಳೆ ಸಾಹಸ್ ಗೌಡ ಹಲ್ಲೆಗೆ ಮುಂದಾದಾಗ ದರ್ಶನ್ ಸ್ಥಳದಿಂದ ಓಡಿ ಹೋಗಿದ್ದ. ನಂತರ ಸಾಹಸ್ ಮೇಲೆ ದ್ವೇಷ ಬೆಳೆಸಿಕೊಂಡ ದರ್ಶನ್, ಸಾಹಸ್​ನನ್ನು ಹೊಡೆಯುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದನು.

ಇದನ್ನೂ ಓದಿ: Video Viral: ಕೈಯಲ್ಲಿ ಮಚ್ಚು ಹಿಡಿದು ಯುವತಿಯನ್ನು ಅಟ್ಟಿಸಿಕೊಂಡು ಹೋಗಿ ಹಲ್ಲೆ ಮಾಡಿದ ವ್ಯಕ್ತಿ

ಅಲ್ಲದೆ ಗಲಾಟೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಹಸ್ ಗೌಡ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದ. ಹೀಗೆ ಬಿಟ್ಟರೆ ದರ್ಶನ್ ನನ್ನನ್ನೇ ಹೊಡಿತಾನೆ ಅಂತಾ ಯೋಚಿಸಿದ ಆರೋಪಿ, ಬೇರೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಹಾಗೂ ಹೊರಗಿನ ಮೂವರು ಹುಡುಗರನ್ನ ಕರೆತಂದು ಕಾಲೇಜು ಮುಂಭಾಗದಲ್ಲೇ ದರ್ಶನ್ ಮೇಲೆ ಲಾಂಗ್​ನಿಂದ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರ ಮುಂದೆ ಕಣ್ಣೀರಾದ ವಿದ್ಯಾರ್ಥಿಗಳು

ಹಲ್ಲೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ವಿದ್ಯಾರ್ಥಿಗಳು ಪೊಲೀಸರ ಮುಂದೆ ಕಣ್ಣೀರಿಟ್ಟ ಘಟನೆ ನಡೆದಿದೆ. ಸುಮ್ಮನೆ ಹೆದರಿಸಲು ಅಂತಾ ಕರೆದುಕೊಂಡು ಬಂದಿದ್ದ. ಆದರೆ ಸಾಹಸ್ ಲಾಂಗ್ ತಂದಿರುವುದು ಗೊತ್ತಾಗಿಲ್ಲ. ನಮ್ಮ ಜೀವನವೇ ಹಾಳಾಯಿತು ಎಂದು ವಿದ್ಯಾರ್ಥಿಗಳು ತನಿಖಾಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್