AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ; ಸಚಿವ ರಾಮಲಿಂಗಾ ರೆಡ್ಡಿಗೆ ಸಿಬ್ಬಂದಿಯಿಂದ ಮನವಿ

ಕೆಲವು ಆರೋಪಿಗಳ ವಿರುದ್ಧ ಎಫ್​ಐಆರ್ ಆಗಿದ್ದರೂ ದೌರ್ಜನ್ಯ ನಿಂತಿಲ್ಲ. ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಸಾರಿಗೆ ನೌಕರರ ಒಕ್ಕೂಟ ಉಲ್ಲೇಖಿಸಿದೆ.

ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ; ಸಚಿವ ರಾಮಲಿಂಗಾ ರೆಡ್ಡಿಗೆ ಸಿಬ್ಬಂದಿಯಿಂದ ಮನವಿ
ರಾಮಲಿಂಗಾ ರೆಡ್ಡಿ
ಗಣಪತಿ ಶರ್ಮಾ
|

Updated on: Jun 27, 2023 | 4:21 PM

Share

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರಿಗೆ ನೌಕರರ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರಿಗೆ ಸಾರಿಗೆ ನೌಕರರ ಒಕ್ಕೂಟ ಮನವಿ ಸಲ್ಲಿಸಿದೆ. ಮಾರಣಾಂತಿಕ ಹಲ್ಲೆ ತಡೆಯಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಶಕ್ತಿ ಯೋಜನೆ ಜಾರಿ ಬಳಿಕ ನಿಗಮಗಳ ಆದಾಯ ಹೆಚ್ಚಳವಾಗುತ್ತಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಬಸ್, ಸಿಬ್ಬಂದಿ ಇಲ್ಲ. ಈಗಿರುವ ಬಸ್​ಗಳಲ್ಲಿ ಹೆಚ್ಚಿನ ಸಂಖ್ಯೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಎಲ್ಲಾ ಒತ್ತಡ ಸಹಿಸಿಕೊಂಡು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ಕೆಲವೆಡೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಾರಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಭಯಪಡುವಂತಹ ಸ್ಥಿತಿಯಿದೆ. ಕೆಲವು ಆರೋಪಿಗಳ ವಿರುದ್ಧ ಎಫ್​ಐಆರ್ ಆಗಿದ್ದರೂ ದೌರ್ಜನ್ಯ ನಿಂತಿಲ್ಲ. ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒಕ್ಕೂಟ ಉಲ್ಲೇಖಿಸಿದೆ.

ಇದನ್ನೂ ಓದಿ: ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ಮಾಡಿರಬಹುದು: ರಾಮಲಿಂಗಾರೆಡ್ಡಿ

ಸಾರಿಗೆ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವಿನ ಗಲಾಟೆ ಪ್ರಕರಣಗಳಿಗೆ ಸಂಬಂಧಿಸಿ ಎರಡು ದಿನ ಹಿಂದಷ್ಟೇ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದರು. ಪ್ರಯಾಣಿಕರು ತಪ್ಪು ಕಲ್ಪನೆಯಿಂದ ಹಲ್ಲೆ ನಡೆಸಿರಬಹುದು. ನಮ್ಮ ಸಿಬ್ಬಂದಿ ಕೂಡ ಕೆಲವು ಸಲ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಿದೆ. ಕೆಲವು ಬಾರಿ ಪ್ರಯಾಣಿಕರೂ ಹಲ್ಲೆ ಮಾಡಿರಬಹುದು. ಇಂಥ ಸಣ್ಣಪುಟ್ಟ ಘಟನೆಗಳು ನಡೆಯುತ್ತಿರುತ್ತವೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೋರಮಂಗಲದಲ್ಲಿ 13 ಟನ್ ಹಸಿ ಕಸದಿಂದ ಇಂಧನ ಉತ್ಪಾದನೆ
ಕೋರಮಂಗಲದಲ್ಲಿ 13 ಟನ್ ಹಸಿ ಕಸದಿಂದ ಇಂಧನ ಉತ್ಪಾದನೆ
ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು; ಸಿಸಿಟಿವಿಯಲ್ಲಿ ಖತರ್ನಾಕ್ ಕೃತ್ಯ ಸೆರೆ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪಶುವೈದ್ಯೆ ಸಾವು: ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ; ಸಮೀಕ್ಷಾ ರೆಡ್ಡಿ ಮಾವ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಪ್ರವಾಹದಿಂದ ಬಿಹಾರದ ವಿಕ್ರಮಶಿಲಾ ಸೇತುವೆಯ ಕಂಬಕ್ಕೆ ಹಾನಿ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ಡಿಕೆಶಿ​​​ನ್ನ ಸಿಎಂ ಮಾಡಿ ಎಂದಿದ್ದಕ್ಕೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರೂಮಿನಲ್ಲಿ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದ ಪ್ರಿನ್ಸಿಪಾಲ್!
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!
IPLಗೆ ಚಿನ್ನಸ್ವಾಮಿ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!