Viral Video: ‘ಬೆಂಗಳೂರು ಹುಡುಗಿ’ ರಾಜಧಾನಿಯ ಬಾರ್​ಗಳಿಗೆ ಕನ್ನಡದ ಅಂಗಿ ತೊಡಿಸಿದಾಗ

Kannada Reels : ಕುತಂತ್ರ ಮುದುಕಿ, ಕುಡುಕ ಅಪ್ಪ, ಸುಲಭವಾದ ಹುಲಿ, ತಲೆಸುತ್ತುವ ಕೋಣ... ಇವರೆಲ್ಲರೂ ಬೆಂಗಳೂರಲ್ಲೇ ಇದ್ದಾರೆ ಅನ್ನೋ ವಿಷಯ ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಪಾವನಾ ಸುಬ್ಬರಾವ್​ ಅವರನ್ನ ಕೇಳಿ, ಕರೆಕ್ಟಾಗಿ ಹೇಳ್ತಾರೆ!

Viral Video: 'ಬೆಂಗಳೂರು ಹುಡುಗಿ' ರಾಜಧಾನಿಯ ಬಾರ್​ಗಳಿಗೆ ಕನ್ನಡದ ಅಂಗಿ ತೊಡಿಸಿದಾಗ
ಬೆಂಗಳೂರು ಹುಡುಗಿ ಪಾವನಾ ಸುಬ್ಬರಾವ್
Follow us
ಶ್ರೀದೇವಿ ಕಳಸದ
|

Updated on:Jun 29, 2023 | 2:23 PM

Bengaluru : ಚಿಕ್ಕಂದಿನಲ್ಲಿ ಬೇಸರವಾದರೆ, ಹಠ ಮಾಡುತ್ತಿದ್ದರೆ ಅಪ್ಪ ಅಮ್ಮನೋ, ಅಜ್ಜ ಅಜ್ಜಿಯೋ, ಚಿಕ್ಕಪ್ಪ ಚಿಕ್ಕಮ್ಮನೋ, ಅತ್ತೆ ಮಾವನೋ ಅಥವಾ ಅಕ್ಕಪಕ್ಕದ ಮನೆಯವರೋ… ಹೀಗೆ ಯಾರೋ ಒಬ್ಬರು ಏನಾದರೂ ಜೋಕ್, ಒಗಟು, ಮೋಜಿನ ಗಣಿತ, ಉಪಕಥೆಗಳನ್ನು ಹೇಳಿ ನಗಿಸುತ್ತಿದ್ದರು. ಒಂದೆರಡು ನಿಮಿಷಗಳ ತನಕ ನಡೆಯುವ ಈ ಪ್ರಕ್ರಿಯೆಯಲ್ಲಿ ಮನಸ್ಸು ಹಗೂರವೆನ್ನಿಸಿ ಉತ್ಸಾಹ ಪುಟಿಯುತ್ತಿತ್ತು. ಆದರೆ ಈಗ? ಎಲ್ಲರೂ ಒಂದೊಂದು ಕಡೆ. ಅಂಗೈಯಲ್ಲಿರುವ ಮೊಬೈಲೇ ಸರ್ವಸ್ವ (Mobile) . ಹೀಗಿರುವಾಗ ದಿನವಿಡೀ ಕೆಲಸದ ಒತ್ತಡದಲ್ಲಿರುವವರಿಗೆ ಮತ್ತದೇ ಮೊಬೈಲೇ ನಗಿಸಬೇಕು, ಮೆದುಳನ್ನು ಚುರುಕಗೊಳಿಸಬೇಕು ಮನಸ್ಸನ್ನು ಆಹ್ಲಾದಗೊಳಿಸಬೇಕು. ಮತ್ತು ಏನೆಲ್ಲ ಸಮಸ್ಯೆಗಳಿಗೆ ಪರಿಹಾರವೂ ಗುರುವೂ ಗೆಳೆಯನೂ ಗೆಳತಿಯೂ ಎಲ್ಲವೂ ಅದೇ. ಇದೇ ಆಪ್ತಪರದೆಯ ಮೂಲಕವೇ ನೀವು ಈ ‘ಬೆಂಗಳೂರು ಹುಡುಗಿ’ಯನ್ನು ಭೇಟಿ ಮಾಡಬಹುದು!

ಇವರು ಡಿಜಿಟಲ್​ ಕ್ರಿಯೇಟರ್ (Digital Creator)​ ಪಾವನಾ ಸುಬ್ಬರಾವ್ (Pavana Subbarao). ಬೆಂಗಳೂರಿನವರಾದ ಇವರು ಟೆಕ್ಸಾಸ್​ನಲ್ಲಿ (Texas) ವಾಸಿಸುತ್ತಾರೆ. ಬೆಂಗಳೂರಿನಲ್ಲಿರುವ ಬಾರ್​ಗಳನ್ನು (Bngaluru Bars) ಕನ್ನಡೀಕರಿಸಿದರೆ ಹೇಗೆ ಎಂಬ ಆಲೋಚನೆ ಇವರಿಗೆ ಬಂದಿದೆ. ತಡಮಾಡದೆ ಲಿಸ್ಟ್​ ಮಾಡಿಕೊಂಡು ಒಂದೊಂದನ್ನೇ ಶಬ್ದಶಃ ಅನುವಾದಿಸಿ ಹೇಳುತ್ತಾ ಹೋಗಿದ್ದಾರೆ. ಹೊಡೆಯುವ ಮನೆಗೆ ಹೋಗೋಣ ಬಾರೋ ಎಂದು ಕರೆದರೆ ಯಾರಾದರೂ ಬರುತ್ತಾರೆಯೇ? ಅದೇ ಪಂಪ್​ ಹೌಸ್​?(Pump house)  ಎಂದರೆ ಬಂದಾರು. ಹಾಗೇನೇ ತಲೆಸುತ್ತುವ ಕೋಣ ಬೇಕೇನೋ ಎಂದರೆ ಓಡಿಹೋಗುತ್ತಾರೆ. ಅದೇ ಟಿಪ್ಸಿ ಬುಲ್ (Tipsy Bull) ಬೇಕೆನೋ ಮಗಾ ಎಂದರೆ ಓಡಿಬರುತ್ತಾರೆ. ಕುತಂತ್ರ ಮುದುಕಿ ಹತ್ರ  ಹೋಗೋಣ್ವೇನೋ ಎಂದರೆ ತಲೆಕೆಟ್ಟಿದೆಯಾ? ಅಂತ ಕೇಳ್ತಾರೆ. ಸ್ಲೈ ಗ್ರ್ಯಾನಿ? (Sly Granny) ಎಂದರೆ ಜಿಗಿದು ಬರುತ್ತಾರೆ! ಹೇಗಿದೆ ಇಂಗ್ಲಿಷ್​ನ ಮಹಾತ್ಮೆ.

ಒಂದ್​ ಕೆಲಸಾ ಮಾಡೋಣ ಹುಚ್ಚು ಹಿಡಿದ ರಾತ್ರಿಯಲ್ಲಿ ಸಿಗೋಣ ಅಂತ ಕೇಳಿನೋಡಿ ನಿಮ್ಮ ಮ್ಯಾನೇಜರ್​​ಗೆ. ಕಣ್ಣು ಕೆಂಪು ಮಾಡ್ಕೊಳ್ತಾನೆ. ಅದೇ ಕ್ರೇಝಿ ನೈಟ್ಸ್​ಗೆ (Crazy Nights) ಎನ್ನಿ. ಪ್ರಸನ್ನವದನದಿಂದ ನಿಮ್ಮನ್ನೇ ಹಿಂಬಾಲಿಸುತ್ತಾನೆ. ಹೀಗೆ ಫೋನ್​ನಲ್ಲಿ ಬೇಡ, ಅದೇ ನಮ್ಮ ಕುಡುಕ ಅಪ್ಪನಲ್ಲಿ ಕೂತು ಮಾತಾಡಿ ಒಂದು ತೀರ್ಮಾನಕ್ಕೆ ಬರೋಣ ಅಂತ ನಿಮ್ಮ ಗರ್ಲ್​ ಫ್ರೆಂಡ್​ ಹತ್ರ ಹೇಳಿನೋಡಿ. ನೇರ ಬ್ಲಾಕ್ ಭಾಗ್ಯ! ಡ್ರಂಕನ್​ ಡ್ಯಾಡಿಯಲ್ಲಿ (Drunken Daddy) ಸಿಗೋಣ್ವೇನೇ ಚಿನ್ನಾ ಅನ್ನಿ. ಛಂದ ಅಲಂಕರಿಸಿಕೊಂಡು ನಿಮಗಾಗಿ ಕಾಯ್ತಾ ಇರ್ತಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಜಾ ಬಂತಾ ಬೆಂಗಳೂರು ಹುಡುಗಿಯ ಈ ರೀಲ್ಸ್​ಗಳು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:10 pm, Thu, 29 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ