Viral Video: ಹಲಸಿನಹಣ್ಣಿನ ವ್ಯಾಪಾರಿಯ ಜೀವನಪಾಠವನ್ನು ಒಪ್ಪದ ನೆಟ್ಟಿಗರು

Characters : ''ಚಪ್ಪಲಿ ಹೊಲಿಯೋದಾಗಿರಬಹುದು, ಪ್ರಧಾನಮಂತ್ರಿಯಾಗಿರಬಹುದು, ನಮ್ಮ ಪಾತ್ರ ನಾವು ನಿರ್ವಹಿಸಬೇಕಷ್ಟೇ. ಎಷ್ಟು ಕೋಟಿ ಇದ್ರೇನು? ಪುನೀತ್​ ರಾಜಕುಮಾರ್​ನ ಉಳಿಸ್ಕೊಳ್ಳೋಕಾಯ್ತಾ?'' ನೋಡಿ ಈ ವಿಡಿಯೋ.

Viral Video: ಹಲಸಿನಹಣ್ಣಿನ ವ್ಯಾಪಾರಿಯ ಜೀವನಪಾಠವನ್ನು ಒಪ್ಪದ ನೆಟ್ಟಿಗರು
Follow us
ಶ್ರೀದೇವಿ ಕಳಸದ
|

Updated on: Jun 30, 2023 | 1:46 PM

Life Lesson : ಒಬ್ಬೊಬ್ಬರೂ ಒಂದೊಂದು ಜೀವನ ತತ್ವವನ್ನು ಅಳವಡಿಸಿಕೊಂಡಿರುತ್ತಾರೆ. ಅವರ ಪಾಡಿಗೆ ಅವರು ಅಳವಡಿಸಿಕೊಂಡಿದ್ದರೆ ಸರಿ. ಆದರೆ ತಾವು ಅಂದುಕೊಂಡಿದ್ದೇ ಸರಿ ಮತ್ತದನ್ನು ಎಲ್ಲರೂ ಪಾಲಿಸಬೇಕು ಎನ್ನುವರ್ಥದಲ್ಲಿ ಹೇಳಹೊರಟರೆ? ಕೆಲವರು ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುತ್ತಾರೆ. ಇನ್ನೂ ಕೆಲವರು ಕಾಲು ಚಾಚುತ್ತ ಹಾಸಿಗೆಯನ್ನು ದೊಡ್ಡದು ಮಾಡಿಕೋ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಹಲಸಿನಹಣ್ಣಿನ ವ್ಯಾಪಾರಿ (Jackfruit Seller) ‘ಅವನ್ ಕಾರ್ ತಗಂಡ ನಾನ್ ತಗಣ್ಬೇಕು. ಅವನ್ ಬೈಕ್​ ತಗಂಡ ನಾ ತಗಣ್ಬೇಕು. ಇದು ಸಾರ್ ಇಂದಿನ ಸಿಚ್ಯುಯೇಶನ್. ಇದೇ ಜೀವನ ಅನ್ಕೊಂಬಿಟ್ಟಿದಾರೆ ಜನ, ಆದರೆ ಇದಲ್ಲ. ಹಾಗಿದ್ದರೆ ಮತ್ತೇನು?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by BAHADDUR.CREATION (@bahaddur.creation)

ದೇವರು ಒಬ್ಬೊಬ್ಬರಿಗೂ ಒಂದು ಪಾತ್ರವನ್ನು ಕೊಟ್ಟಿರುತ್ತಾನೆ ಅದನ್ನು ನಿರ್ವಹಿಸುತ್ತ ಹೋಗಬೇಕಷ್ಟೇ ಎನ್ನುತ್ತಾನೆ ಈ ಬೀದಿಬದಿ ವ್ಯಾಪಾರಿ. ಆದರೆ ಒಂದೇ ಪಾತ್ರವನ್ನು ಬದುಕಿನುದ್ದಕ್ಕೂ ಮಾಡಲಾದೀತೇ? ನೆಟ್ಟಿಗರೊಬ್ಬರು, ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ, ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಛೆದೆ ಇರಬೇಕೆಂದು- ಮಾಡುವ ಕೆಲಸ ಮಾಡುತ್ತಲೇ ಬೆಳೆಯಬೇಕು’ ಎಂದಿದ್ದಾರೆ. ಭಾರತೀಯರ ಜ್ಞಾನಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಸಂಪ್ರದಾಯವನ್ನು ಸೀರೆಯುಟ್ಟೇ ಮುರಿದಿದ್ದಾರೆ ಈ ಪಂಚರತ್ನೆಯರು

ಕೆಲವರು ಸರಿಯಾಗಿ ಹೇಳ್ದೆ ಗುರು! ಎಂದಿದ್ದಾರೆ ಇನ್ನೂ ಕೆಲವರು ಜೀವನದಲ್ಲಿ ಯಶಸ್ಸು ಗಳಿಸಬೇಕು, ಮೇಲ್ಮಟ್ಟಕ್ಕೆ ಏರಬೇಕು, ನಮ್ಮ ಮುಂದಿನ ಪೀಳಿಗೆ ಶಿಕ್ಷಣ ಹೊಂದಬೇಕು ಎಂದರೆ ನಾವು ತುಂಬಾ ಕಷ್ಟಪಡಲೇಬೇಕು ಎಂದಿದ್ದಾರೆ ಇನ್ನೊಬ್ಬರು. ಗುರು, ನೀ ಸ್ವಲ್ಪ ಹೊಟ್ಟೆ ಇಳಿಸಿ ನೀಟ್ ಆಗಿ ಶೇವ್ ಮಾಡ್ಕೊಂಡಿದ್ರೆ ನಿನಗೆ ಕಡಿಮೆ ಬಜೆಟ್ಟಿನ ಸಿನೆಮಾದ ಹೀರೋ ಪಾತ್ರವನ್ನೇ ಕೊಡಿಸಬಹುದಿತ್ತು ಎಂದಿದ್ಧಾರೆ ಮಗದೊಬ್ಬರು. ಇವೆಲ್ಲಾ ಹೀಗೆ ರೀಲ್​ಗಾಗಿ ಡೈಲಾಗ್​ ಹೊಡೆಯೋಕೆ ಛಂದ. ನಿಜಜೀವನದಲ್ಲಿ ಮುಂದೆ ಬರಬೇಕಂದ್ರೆ ಮಂಡಿ ನೆಲಕ್ಕೆ ಊರಲೇಬೇಕು ಎಂದಿದ್ದಾರೆ ಅನೇಕರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ