Viral Video: ವಾರಕರಿಗಳು ಪಂಢರಪುರಕ್ಕೆ ಹೊರಟಿದ್ಧಾರೆ; ನೀವೂ ಬರ್ತೀರೇನು?

Pandharpur : ಟೊಂಕದ ಮ್ಯಾಲೆ ಕೈ ಇಟ್ಟಾನ, ಭಕ್ತಿ ಸುಂಕಾ ಬೇಡತಾನ, ಅಂಕ ಇಲ್ಲ ಡೊಂಕ ಇಲ್ಲ ಅಭಂಗ ಪದದವಗ... ಬೇಂದ್ರೆಯವರ ಈ ಕವನವನ್ನು ನೆನೆಯುತ್ತ ನಡೆಯಿರಿ ಯಾತ್ರೆಗೆ. ಮಕ್ಕಳ ಹೆಜ್ಜೆ ಅನುಸರಿಸಿದವರಿಗೆ ಖಂಡಿತ ಒಳ್ಳೆಯದಾಗುತ್ತದೆ.

Viral Video: ವಾರಕರಿಗಳು ಪಂಢರಪುರಕ್ಕೆ ಹೊರಟಿದ್ಧಾರೆ; ನೀವೂ ಬರ್ತೀರೇನು?
ಪುಟಾಣಿ ವಾರಕರಿ
Follow us
ಶ್ರೀದೇವಿ ಕಳಸದ
|

Updated on:Jun 30, 2023 | 12:21 PM

Warkari : ಕೇಸರಿಬಣ್ಣದ ಕಚ್ಚೆಸೀರೆಯುಟ್ಟು, ಹಸಿರು ಗಾಜಿನ ಬಳೆ ಧರಿಸಿ, ಮುಡಿಗೆ ಮಲ್ಲಿಗೆ ದಂಡೆ ಸುತ್ತಿ, ಕೊರಳಲ್ಲಿ ಆಭರಣ ಧರಿಸಿ, ಎರಡೂ ಕೈಯಿಂದ ವಿಠ್ಠಲ ರುಕ್ಮಾಯಿಯ ಮೂರ್ತಿ ಹಿಡಿದುಕೊಂಡು ಹೆಜ್ಜೆ ಹಾಕುವ ಈ ವಾರಕರಿ ಪೋರಿ ವಾಟ್ಸಾಪ್ಪಿನಲ್ಲಿ (WhatsApp) ಭಲೇ ಓಡಾಡುತ್ತಿದ್ದಾಳೆ. ಮುಸುಕು ಹಾಕಿದ ಮುಗಿಲು ಮಬ್ಬು ಹಿಡಿಸಿರುವ ಈ ಹೊತ್ತಿನಲ್ಲಿ ಈ ಬಟ್ಟಲುಗಣ್ಣಿನ ಹೆಣ್ಣುಮಗು ನೋಡಿದವರೆಲ್ಲರಲ್ಲಿಯೂ ಚೈತನ್ಯ ತಾನಾಗಿಯೇ ಮೂಡುತ್ತದೆ. ಮಹಾರಾಷ್ಟ್ರದ ಪಂಢರಪುರಕ್ಕೊಮ್ಮೆ ಹೋಗಬೇಕು ಎಂದೇನಾದರೂ ನೀವಂದುಕೊಂಡಿದ್ದರೆ ಈಗಿದು ಸೂಕ್ತ ಸಮಯ. ಈ ಪೋರಿಯ ಹಸಿರು ಸೆರಗಿನ ಚುಂಗನ್ನು ಹಿಡಿಯಿರಿ. ಕಣ್ಣುಮುಚ್ಚಿ ಭಜನೆಯಲ್ಲಿ ಮುಳುಗಿ; ಮಕ್ಕಳ ಹೆಜ್ಜೆ ಅನುಸರಿಸಿದವರಿಗೆ ಖಂಡಿತ ಒಳ್ಳೆಯದಾಗುತ್ತದೆ.

ವಾರಕರಿ ಇದು ಭಕ್ತಿ ಪಂಥಗಳಲ್ಲೊಂದು. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇದು ಚಾಲ್ತಿಯಲ್ಲಿರುವ ಭಕ್ತಿಮಾರ್ಗಗಳ ಒಂದು ಎಸಳು. ವಾರಕರಿ ಎಂಬ ಪದ ಮರಾಠಿ ಮೂಲದ್ದು. ಇದರ ಅರ್ಥ ಮತ್ತೆ ಮತ್ತೆ ಯಾತ್ರೆಗೈಯ್ಯುವರು. ಈ ಪಂಥವನ್ನು ಅನುಸರಿಸುವವರು ವರ್ಷಕ್ಕೆ ಎರಡು ಸಲ ಪಂಢರಪುರಕ್ಕೆ ಯಾತ್ರೆ ಕೈಗೊಳ್ಳುತ್ತಾರೆ. ಒಂದು ಬಾರಿ ಆಷಾಢ ಮತ್ತು ಇನ್ನೊಂದು ಬಾರಿ ಕಾರ್ತೀಕದಲ್ಲಿ. ಈ ಎರಡೂ ಮಾಸಗಳ ಶುಕ್ಲಪಕ್ಷದ ಏಕಾದಶಿಯಂದು ಗುಂಪಾಗಿ ನೂರಾರು ಮೈಲಿ ನಡೆದುಕೊಂಡು ಜನರು ಯಾತ್ರೆ ಹೊರಟುಬಿಡುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಸಂದರ್ಭದಲ್ಲಿ ಅನೇಕರು ಮಕ್ಕಳಿಗೆ ವಾರಕರಿ ವೇಷ ಹಾಕಿ ಸಂಭ್ರಮಿಸುತ್ತಾರೆ. ಭಜನೆಗಳನ್ನು ಕಲಿಸಿಕೊಡುತ್ತಾರೆ. ಈ ಮೇಲಿನ ಪೋಸ್ಟ್​ನಲ್ಲಿರುವ ಮಗು ಮಹಾರಾಷ್ಟ್ರದ ಗಾಯಕಿ ಪ್ರಿಯಾಂಕಾ ಬಾರ್ವೆ (Priyanka Barve) ಮತ್ತು ಸರೋದ್​ ವಾದಕ ಸಾರಂಗ್​ ಅವರ ಮಗ. ವಾರಕರಿ ವೇಷದಲ್ಲಿ ಮುದ್ದಾಗಿ ಕಾಣುತ್ತಿರುವ ಈ ಮಗುವಿಗೆ ಅನೇಕರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : Viral: ಲೂಯೀಸ್ ವ್ಯೂಟ್ಟನ್; ಅಕ್ಕಿಕಾಳಿಗಿಂತಲೂ ಚಿಕ್ಕ ಚೀಲ, ರೂ. 51 ಲಕ್ಷಕ್ಕೆ ಮಾರಾಟ

ಆಷಾಢ ಏಕಾದಶಿಯಿಂದ ಮೂರು ವಾರಗಳವರೆಗೆ ಪ್ರತೀ ವರ್ಷ ನಡೆಯುವ ಈ ಪಂಢರಪುರ ಯಾತ್ರೆಯಲ್ಲಿ ಸುಮಾರು 20 ಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಾಂಕ್ರಾಮಿಕ ರೋಗಗಳು ಅನೇಕರನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಪೊಲೀಸರು ಯಾತ್ರಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸುಮಾರು 5.5 ಲಕ್ಷ ಯಾತ್ರಾರ್ಥಿಗಳ ಆರೋಗ್ಯ ತಪಾಸಣೆಯು ಈಗಾಗಲೇ ಪೂರ್ಣಗೊಂಡಿದ್ದು  ಉಳಿದವರ ತಪಾಸಣೆ ನಡೆಯುತ್ತಿದೆ.

ನೀವೂ ಹೊರಡುತ್ತೀರೋ ಪುರಂದರ, ತುಕಾರಾಮ, ಜ್ಞಾನೇಶ್ವರರ ವಿಠೋಬನ ದರ್ಶನಕ್ಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:53 am, Fri, 30 June 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ