Viral: ಒಂದೇ ಕ್ಷಣ ತಡವಾಗಿದ್ದರೂ ಆತ ಹುಡುಗಿಯನ್ನು ಇರಿದೇ ಬಿಡುತ್ತಿದ್ದ!

Crime : ಲೆಷ್ಪಾಲ್ ನಿಜವಾದ ದೇಶಭಕ್ತ. ಬೇರೊಬ್ಬರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಧರ್ಮದ ಕಾರಣಕ್ಕಾಗಿ ಕೊಲೆಗೈದು ಓಡಿಹೋಗುವ ಮತಾಂಧ ಭಕ್ತರಂತೆ ಇವರು ಹೇಡಿಯಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

Viral: ಒಂದೇ ಕ್ಷಣ ತಡವಾಗಿದ್ದರೂ ಆತ ಹುಡುಗಿಯನ್ನು ಇರಿದೇ ಬಿಡುತ್ತಿದ್ದ!
ಹುಡುಗಿಯನ್ನು ರಕ್ಷಿಸಿದ ಲೆಷ್ಪಾಲ್​ ಖಿಬಾಗೆ
Follow us
ಶ್ರೀದೇವಿ ಕಳಸದ
|

Updated on:Jun 28, 2023 | 2:12 PM

Pune: ಪುಣೆಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ಈ ಹುಡುಗಿಯ ಹಿಂದೆ ಚಾಕುವಿನಿಂದ ಇರಿಯಲು ಓಡುತ್ತಿದ್ದಾನೆ. ಆಗ ಅಲ್ಲಿಯೇ ಇದ್ದ ಲೆಶ್ಪಾಲ್ ​ಖಿಬಾಗೆ (Leshpal Khibage) ಎಂಬ ವ್ಯಕ್ತಿ ಮಧ್ಯಪ್ರವೇಶಿಸಿ, ಆರೋಪಿಯನ್ನು ಬೆನ್ನಟ್ಟಿ ಹುಡುಗಿಯ ಜೀವ ಉಳಿಸಿದ್ದಾರೆ. ಅಷ್ಟೇ ಅಲ್ಲ ಆರೋಪಿ ಶಂತನು ಜಾಧವ್ ತಪ್ಪಿಸಿಕೊಳ್ಳದಂತೆ ಹಿಡಿದಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದ ದಾರಿಹೋಕರು ಲೆಶ್ಪಾಲ್​ರೊಂದಿಗೆ ಕೈಜೋಡಿಸಿದ್ಧಾರೆ. ಪೊಲೀಸರು ಆರೋಪಿ ಶಂತನುವನ್ನು ಕೂಡಲೇ ಬಂಧಿಸಿದ್ದಾರೆ- ಈ ಟ್ವೀಟ್​ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರು ಲೆಶ್ಪಾಲ್​ನ ಸಾಹಸ ಮತ್ತು ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸುತ್ತಿದ್ದಾರೆ.

ಮೇಲಿನ ಮತ್ತು ಕೆಳಗಿನ ಟ್ವೀಟ್​ ಒಂದೇ ಪ್ರಕರಣಕ್ಕೆ ಸಂಬಂಧಿಸಿದವು. ಆರೋಪಿಯ ಹೆಸರನ್ನು ಯಾಕೆ ಬಹಿರಂಗಗೊಳಿಸಿಲ್ಲ ಎಂದು ಈ ಕೆಳಗಿನ ಟ್ವೀಟ್​ನಲ್ಲಿ ಕೇಳುತ್ತಿದ್ದಾರೆ ನೆಟ್ಟಿಗರು. ಈ ಟ್ವೀಟ್​ನ ಸಾರಾಂಶ ಹೀಗಿದೆ. ”ಮಹಾರಾಷ್ಟ್ರದ ಸದಾಶಿವ ಪೇಟೆಯ ಪೆರುಗೇಟ್​ನಲ್ಲಿ 19 ವರ್ಷದ ಯುವತಿಯ ಮೇಲೆ 21 ವರ್ಷದ ಯುವಕ  ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ಮತ್ತು ಯುವತಿ ಮಾಜಿ ಸಹಪಾಠಿಗಳು. ಈ ಯುವತಿ  ತನ್ನ ಸ್ನೇಹಿತನೊಂದಿಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ಆರೋಪಿಯೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ. ಆಗ ಈ ದುರ್ಘಟನೆ ನಡೆದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ತನಿಖೆ ನಡೆಯುತ್ತಿದೆ.- ಸಂದೀಪ್ ಗಿಲ್, ಪೊಲೀಸ್ ಅಧಿಕಾರಿ ಪುಣೆ.”

ನೆಟ್ಟಿಗರು ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಟ್ವೀಟ್ ಮಾಡುತ್ತಿದ್ದಾರೆ. ”ಭಾರತಜೋಡೋಯಾತ್ರಾದಲ್ಲಿ (BharathJodoYatra) ನಮ್ಮೊಂದಿಗೆ ಪಾಲ್ಗೊಂಡ ಲೇಶ್ಪಾಲ್​ ಇವರೇ ಎಂದು ಗುರುತಿಸುತ್ತಿದ್ದಾರೆ. ಇವರೊಂದಿಗೆ ತೆಗೆಸಿಕೊಂಡ ಛಾಯಾಚಿತ್ರಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಇವರು ನಿಜವಾದ ದೇಶಭಕ್ತ. ಸಾಮಾಜಿಕ ಮಾಧ್ಯಮದಲ್ಲಿ ಶಾಂತಿ, ಪ್ರೀತಿ ಮತ್ತು ಜಾತ್ಯತೀತತೆ ಕುರಿತು ಪ್ರಚಾರ ಮಾಡುತ್ತಿರುತ್ತಾರೆ. ಇದೀಗ ಬೇರೊಬ್ಬರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಧರ್ಮದ ಕಾರಣಕ್ಕಾಗಿ ಯಾರನ್ನೋ ಕೊಲೆಗೈದು ಓಡಿಹೋಗುವ ಮತಾಂಧ ಭಕ್ತರಂತೆ ಇವರು ಹೇಡಿಯಲ್ಲ” ಎಂದಿದ್ದಾರೆ ಕೆಲವರು.

ದೆಹಲಿ ಮಂದಿಯಂತೆ ನಮ್ಮೂರಿನ ಜನ ಕೈಕಟ್ಟಿ ಕುಳಿತುಕೊಂಡಿಲ್ಲ. ನಡೆಯುವ ಘೋರ ಅಪರಾಧವನ್ನು ತಪ್ಪಿಸಿದ್ದಾರೆ ಎಂದು ಪುಣೆ ಮಂದಿ ಟ್ವೀಟ್ ಮಾಡುತ್ತಿದೆ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:41 pm, Wed, 28 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್