Viral Video: ಇದು ಇವರ ಖಾಸಗೀ ವಿಮಾನವಾಗಿದ್ದು ಹೇಗೆ? ಈ ವಿಡಿಯೋ ನೋಡಿ
Private Flight : ವಿಮಾನ ತಡವಾದರೆ ಪ್ರಯಾಣವನ್ನು ರದ್ದುಗೊಳಿಸುತ್ತೀರಿ ಅಥವಾ ಬೇರೊಂದು ವಿಮಾನವನ್ನೇರುತ್ತೀರಿ. ಆದರೆ 18 ಗಂಟೆ ತಡವಾಗಿ ವಿಮಾನ ಬಂದಾಗ ಈ ಗಾಯಕ ಏನು ಮಾಡಿದರು? ನೆಟ್ಮಂದಿ ಇದು ಮಜಾ ಇದೆ ಎನ್ನುತ್ತಿದ್ದಾರೆ.
Flight Delay : ಪ್ರಯಾಣವೆಂದರೆ ಆರಾಮದಾಯಕವಾಗಿರಬೇಕು, ಆದರೆ ಹಾಗಾಗುವುದೇ? ಅಕ್ಕದವರು ಜೋರಾಗಿ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಪಕ್ಕದವರು ಮನೆ, ಕಚೇರಿ ವಿಷಯ ಚರ್ಚಿಸುತ್ತಿರುತ್ತಾರೆ. ಎದುರಿನ ಮಗು ಜೋರಾಳು ಅಳುತ್ತಿರುತ್ತದೆ. ಇನ್ನ್ಯಾರೋ ಗೊರಕೆ ಹೊಡೆಯುತ್ತಿರುತ್ತಾರೆ. ಗಂಡಹೆಂಡತಿಯೋ ಸಹಪ್ರಯಾಣಿಕರೋ ಜಗಳಾಡುತ್ತಿರುತ್ತಾರೆ. ಅಬ್ಬಾ! ಎಲ್ಲಿ ಹೋದರೂ ನೆಮ್ಮದಿಯೇ ಇಲ್ಲ ಎಂದೆನ್ನಿಸಿ ಯಾವಾಗ ಈ ಪ್ರಯಾಣ (Journey) ಮುಗಿಯುತ್ತದೆಯೋ ಎನ್ನಿಸಿಬಿಡುತ್ತದೆ. ಇದು ಬಸ್ಸಿನಲ್ಲಿಯೂ, ರೈಲಿನಲ್ಲಿಯೂ, ವಿಮಾನದಲ್ಲಿಯೂ ಒಂದೇ ಥರ. ಸ್ತರ, ಪ್ರಮಾಣಗಳಷ್ಟೇ ಬೇರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಡೀ ವಿಮಾನದಲ್ಲಿ ಈ ವ್ಯಕ್ತಿ ಒಬ್ಬರೇ ಪ್ರಯಾಣಿಸಿದ್ದಾರೆ. ಇದು ನನ್ನ ಖಾಸಗೀ ವಿಮಾನದಂತೆ ಭಾಸವಾಗಿದೆ ಎಂದಿದ್ದಾರೆ. ಅದು ಹೇಗೆ? ಈ ವಿಡಿಯೋ ನೋಡಿ.
ಇದನ್ನೂ ಓದಿView this post on Instagram
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಭಾಷಣಕಾರ ಮತ್ತು ಗಾಯಕ ಫಿಲ್ ಸ್ಟ್ರಿಂಗರ್ (Phil Stringer) ನಿನ್ನೆ ವಿಮಾನ ಪ್ರಯಾಣ ಮಾಡುತ್ತಿದ್ದಾಗ ಹೀಗೆ ಇಡೀ ವಿಮಾನವೇ ಖಾಸಗಿಯಾಗಿ ರೂಪುಗೊಂಡಿದೆ. ಅರೆ ಇದು ಹೇಗೆ, ಎಂದು ಅಚ್ಚರಿಪಡುತ್ತಿದ್ದೀರಾ? ವಿಮಾನವು 18 ಗಂಟೆಗಳ ಕಾಲ ವಿಳಂಬವಾಗಿದೆ. ಎಲ್ಲ ಪ್ರಯಾಣಿಕರಿಗೂ ಕಾಯುವ ತಾಳ್ಮೆ ಇರುತ್ತದೆಯೇ? ಬೇರೆ ವಿಮಾನದ ಟಿಕೆಟ್ ತೆಗೆದುಕೊಳ್ಳುತ್ತಾರೆ ಅಥವಾ ಪ್ರಯಾಣವನ್ನೇ ರದ್ದು ಮಾಡುತ್ತಾರೆ. ಆದರೆ ಫಿಲ್ ಸ್ಟ್ರಿಂಗರ್ ಮಾತ್ರ ಅಷ್ಟು ಹೊತ್ತು ಕಾಯ್ದು ಈ ವಿಮಾನದಲ್ಲಿ ಸಿಬ್ಬಂದಿಯೊಂದಿಗೆ ಏಕೈಕ ಪ್ರಯಾಣಿಕರಾಗಿ ಪ್ರಯಾಣಿಸಿದ್ದಾರೆ. ವಿಮಾನವನ್ನು ಏರುವಾಗ ತಾನೊಬ್ಬನೇ ಪ್ರಯಾಣಿಕ ಎನ್ನುವುದು ಅರಿವಿಗೆ ಬಂದಿದೆ.
ಇದನ್ನೂ ಓದಿ : Viral Video: ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ
ಈ ಅಪರೂಪದ ಅನುಭವವನ್ನು ರೀಲ್ನಲ್ಲಿ ಹಿಡಿದಿಟ್ಟು ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ ಫಿಲ್. ಆದರೆ ಇದು ಇಷ್ಟಕ್ಕೇ ಮುಗಿದಿಲ್ಲ. ಬೆಳಗ್ಗೆ 4ಕ್ಕೆ ವಿಮಾನ ತಲುಪಬೇಕಾದ ಜಾಗಕ್ಕೆ ಬಂದಿಳಿದರೂ ವಿಮಾನ ನಿಲ್ದಾಣದಿಂದ ಅವರು ಆಚೆ ಬರಲು ಸಾಧ್ಯವಾಗಿಲ್ಲ. ಏಕೆಂದರೆ ಅವರ ಬ್ಯಾಗ್ ಕಾಣೆಯಾಗಿಬಿಟ್ಟಿದೆ! ಅಂದರೆ, ಅವರು ತಲುಪಿದರೂ ಅವರ ಬ್ಯಾಗ್ ಮಾತ್ರ ವಿಮಾನ ನಿಲ್ಧಾಣವನ್ನು ತಲುಪಿಲ್ಲ. ಈ ಬಗ್ಗೆ ನೆಟ್ಟಿಗರು ತಮಾಷೆ ಮಾಡಿದಾಗ ಪ್ರತಿಯಾಗಿ ಮತ್ತೊಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ ಫಿಲ್.
View this post on Instagram
ಖಾಸಗೀ ಜೆಟ್ ಅನ್ನು ಪಡೆಯಬಾರದೇಕೇ? ಇದು ನಿಜಕ್ಕೂ ನಂಬಲು ಅಸಾಧ್ಯವಾದಂತ ಮಜಾ ಸಂಗತಿ. ಪ್ರತೀ ವಿಮಾನವು ಹೀಗೆಯೇ ಇರಬೇಕೆಂದು ನಾನು ಬಯಸುತ್ತೇನೆ. ಕ್ಯಾಬಿನ್ ಸಿಬ್ಬಂದಿಯೊಂದಿಗೆ ನಾನು ಕೂಡ ಹೀಗೆಯೇ ಹ್ಯಾಂಗ್ ಔಟ್ ಮಾಡುತ್ತಿರುತ್ತೇನೆ, ಈ ವಿಡಿಯೋ ನಿಜಕ್ಕೂ ಅದ್ಭುತ… ಅಂತೆಲ್ಲ ಕಮೆಂಟಿಸಿದ್ದಾರೆ ನೆಟ್ಟಿಗರು. ಎರಡು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋಗೆ ಸಾಕ್ಷಿಯಾಗಿದ್ದಾರೆ. ಸಾವಿರಾರು ಜನರು ಇಷ್ಪಪಟ್ಟಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:55 am, Wed, 28 June 23