Viral Video: 5 ಗಂಟೆ ಓಡಿಸಿದರೂ ಕೇವಲ ರೂ. 40 ಸಂಪಾದನೆ; ಕಣ್ಣೀರಿಟ್ಟ ಆಟೋ ಚಾಲಕ
Auto Driver: ಮೋದಿ ಆಡಳಿತದಲ್ಲಿ ಮೀನುಗಾರರು, ರೈತರಿಗೆ ಸಿಗುವ ಸಹಾನುಭೂತಿ ಕಾಂಗ್ರೆಸ್ ಆಡಳಿತದಲ್ಲಿ ಆಟೋ ಚಾಲಕರಿಗೆ ಸಿಗುತ್ತಿಲ್ಲ ಎಂದು ಒಬ್ಬರು. ಲೂಟಿಗೆ ಅವಕಾಶ ಸಿಕ್ಕಾಗ ಆಟೋ ಚಾಲಕರ ವರ್ತನೆ ಭಿನ್ನವಾಗಿರುತ್ತದೆ ಎಂದು ಮತ್ತೊಬ್ಬರು.
Bengaluru: ಬೆಳಗ್ಗೆ ಎಂಟಕ್ಕೆ ಮನೆ ಬಿಟ್ಟಿದ್ದು. ಇಷ್ಟೊತ್ತಿಗೆ 500ರಿಂದ 600 ರೂಪಾಯಿ ಗಳಿಸುತ್ತಿದ್ದೆ. ಆದರೆ 5 ತಾಸಾದರೂ ಬರೀ 40 ರೂಪಾಯಿ ಸಂಪಾದಿಸಿದ್ದೇನೆ. ಈ ಕೆಲಸ ಬಿಟ್ಟು ಬೇರೆ ಕೆಲಸ ಮಾಡಬೇಕಷ್ಟೇ. ಕರೆಂಟ್ ಬಿಲ್ (Electricity Bill) ಕೂಡ ಜಾಸ್ತಿ ಬಂದಿದೆ’ ಎಂದು ಕಣ್ಣೀರು ಹಾಕಿದ್ದಾನೆ ಈ ಆಟೋ ಡ್ರೈವರ್. ಕರ್ನಾಟಕದಲ್ಲಿ ಕಾಂಗ್ರೆಸ್ (Congress Government) ಸರಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ತಂದಾಗಿನಿಂದ ಆಟೋವಾಲಾಗಳ ಪರಿಸ್ಥಿತಿ ಹೀಗಾಗಿದೆ ಎಂಬುದನ್ನು ಈ ವಿಡಿಯೋ ಬಿಂಬಿಸುತ್ತಿದೆ. ಈ ವಿಡಿಯೋ ಎಲ್ಲಿ ಯಾವಾಗ ಯಾವ ಸ್ಥಳದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬ ಬಗ್ಗೆ ವಿವರಗಳಿಲ್ಲ. ಆದರೆ ಇದೀಗ ಇದು ಸಾಮಾಜಿಕ ಜಾಲತಾಣಗಳಲ್ಲಿ ಶರವೇಗದಲ್ಲಿ ವೈರಲ್ ಆಗುತ್ತಿದೆ.
A Bengaluru auto driver in tears after collecting just Rs 40/- from 8 am to 1 pm. This is the result of free bus rides given by the new Cong govt in Karnataka. Pushing people into poverty. pic.twitter.com/2RZEjA9pw8
— Zavier (@ZavierIndia) June 25, 2023
ಸ್ಥಳೀಯ ಸುದ್ದಿವಾಹಿನಿಯೊಂದು ಈತನ ಬೈಟ್ ತೆಗೆದುಕೊಂಡಿದೆ. ಕೆಲವರು ಈತನ ಬಗ್ಗೆ ಅನುಕಂಪ ತೋರಿದರೆ ಇನ್ನುಳಿದವರು ಆಟೋವಾಲಾಗಳು ಮೀಟರ್ ಹೊರತಾಗಿಯೂ ಮನಬಂದಂತೆ ಹಣ ಕೇಳುತ್ತಾರೆ ಎಂದು ಟೀಕಿಸಿದ್ಧಾರೆ. ಒಟ್ಟಾರೆಯಾಗಿ ಈ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮತ ಹಾಕಿ ಕಾಂಗ್ರೆಸ್ ಅನ್ನು ಗೆಲ್ಲಿಸಿದವರು ಈಗ ಅನುಭವಿಸಿ. ಇದು ನೇರ ಮತ್ತು ಪರೋಕ್ಷವಾದ ಪರಿಣಾಮಗಳನ್ನು ಹೊಂದಿದೆ ಎಂದಿದ್ದಾರೆ ಕೆಲವರು. ಅದು ಹೇಗೆ ಸಾಧ್ಯ? ಹೆಣ್ಣುಮಕ್ಕಳೆಲ್ಲಾ ಉಚಿತ ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವಾಗ ಗಂಡಸರೆಲ್ಲಾ ತಮ್ಮಷ್ಟಕ್ಕೆ ತಾವು ಮನೆಯ ಒಳಚಿಲಕ ಹಾಕಿಕೊಂಡು ಕುಳಿತಿದ್ಧಾರಾ ಏನು? ಎಂದು ಪ್ರಶ್ನಿಸಿದ್ಧಾರೆ ಕೆಲವರು.
ಇದನ್ನೂ ಓದಿ : Viral: ಆಸ್ಟ್ರೇಲಿಯಾದ ಈ ಪ್ರಸಿದ್ಧ ರೆಸ್ಟೋರೆಂಟ್ನಲ್ಲಿ ಸಸ್ಯಜನ್ಯ ಆಹಾರ ನಿಷೇಧ
‘ಕಳೆದ ವಾರ ಜಯದೇವ ಹೃದ್ರೋಗಾಲಯದಿಂದ ಮಲ್ಲೇಶ್ವರಕ್ಕೆ ಹೋಗಲು ಒಬ್ಬ ಆಟೋ ಚಾಲಕ ದುಪ್ಪಟ್ಟು ಹಣ ಕೇಳಿದ. ಇವರಿಗೆ ಕರುಣೆಯೇ ಇಲ್ಲ. ನಂತರ ಬಸ್ಸು ಹತ್ತಿದೆ. ಈ ಊಬರ್, ಓಲಾದವರೂ ವಂಚಿಸುತ್ತಿದ್ದಾರೆ’ ಎಂದಿದ್ದಾರೆ ಒಬ್ಬರು. ‘ಐಟಿನಗರದಲ್ಲಿ ಬಹಳ ಮಜಾಮಜಾ ಕಥೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಮಾರ್ಚ್ನಲ್ಲಿ ನಾನು ಊಬರ್ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಅವನು ಯೂಟ್ಯೂಬ್ ಇನ್ಫ್ಲ್ಯೂಯೆನ್ಸರ್ ಆಗಲು ಪರ್ಸನಲ್ ಫೈನಾನ್ಸ್ ಕುರಿತು ವಿಡಿಯೋಗಳನ್ನು ಮಾಡುತ್ತಿದ್ದ ವಿಷಯ ತಿಳಿಯಿತು. ತನ್ನ ಆಟೋದೊಳಗೆ ಹಾಕಿದ್ದ ಬ್ಯಾನರ್ನ ಫೋಟೋವನ್ನು ಟ್ವೀಟ್ ಕೂಡ ಮಾಡಿದ್ದ. Gold Janardhan Investor ಎಂಬ ಯೂಟ್ಯೂಬ್ ಚಾನೆಲ್ನ ಜಾಹೀರಾತು ಅದಾಗಿತ್ತು’ ಎಂದಿದ್ದಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:57 pm, Wed, 28 June 23