Viral Video: ಪ್ರವಾಹದಿಂದಾಗಿ ಈಜುಗೊಳವಾದ ಮುಂಬೈವೊಂದರ ರೈಲುನಿಲ್ದಾಣ
Mumbai Rains : ಇನ್ನೂ ನಿರ್ಮಾಣ ಹಂತದಲ್ಲಿರುವ ನವೀ ಮುಂಬೈನ ಉರಾನ್ ರೈಲು ನಿಲ್ದಾಣದ ಕಟ್ಟಡದ ಈ ದುರವಸ್ಥೆಯನ್ನು ಕಂಡು ನೆಟ್ಟಿಗರು ಬೇಸರಿಸುತ್ತಿದ್ದಾರೆ.
Navi Mumbai : ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿಕೊಳ್ಳುತ್ತಿವೆ. ಇನ್ನೂ ನಿರ್ಮಾಣ ಹಂತದಲ್ಲಿರುವ ನವೀ ಮುಂಬೈನ ಉರಾನ್ ರೈಲು ನಿಲ್ದಾಣದೊಳಗೆ ಮಳೆನೀರು ನುಗ್ಗಿದ ಪರಿಣಾಮ, ಸ್ಥಳೀಯರು ಇದನ್ನು ಈಜುಗೊಳವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮಳೆ ವಿಡಿಯೋಗಳ ಪೈಕಿ ಈ ವಿಡಿಯೋ ಇದೀಗ ಬಹುವಾಗಿ ಗಮನ ಸೆಳೆದಿದ್ದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕೆಲ ಯುವಕರು ಥೇಟ್ ಈಜುಗೊಳಕ್ಕೆ ಧುಮುಕಿದಂತೆ ಈ ಮಳೆನೀರಿನಲ್ಲಿ ಧುಮುಕಿ ಈಜಾಡುತ್ತಿದ್ದಾರೆ. ನೆಟ್ಟಿಗರು ಈ ಅವಸ್ಥೆಯನ್ನು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
नवीन नेरूळ – उरण लोकल रेल्वे स्टेशन बोकडविरा @CMOMaharashtra @PMOIndia @AshwiniVaishnaw @Dev_Fadnavis @mieknathshinde #uran_local_navi_mumbai pic.twitter.com/mb0Wp5fF1j
ಇದನ್ನೂ ಓದಿ— Jeetendra N. Thale (@JeetendraThale) July 4, 2023
ನಿರ್ಮಾಣ ಹಂತದಲ್ಲಿರುವ ಉರಾನ್ ರೈಲು ನಿಲ್ದಾಣ ಕಟ್ಟಡವೊಂದರಲ್ಲಿ ಭಾಗಶಃ ನೀರು ನುಗ್ಗಿ ಒಂದು ಸಣ್ಣ ಕೊಳದಂತೆ ಮಾರ್ಪಟ್ಟಿದೆ. ಸ್ಥಳೀಯ ಯುವಕರೇನೋ ಲೀಲಾಜಾಲವಾಗಿ ಈಜಾಡುತ್ತ ತಮಾಷೆ ಮಾಡುತ್ತಿದ್ದಾರೆ. ಆದರೆ ನೆಟ್ಟಿಗರು, ಕಳಪೆ ಒಳಚರಂಡಿ ವ್ಯವಸ್ಥೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರಿಗೆ ಅರಿವೇ ಇಲ್ಲವಲ್ಲ ಎಂದು ಬೇಸರಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಆಕೆಯ ನಮ್ರತೆ, ಅಧಿಕಾರಯುತ ನಡೆಯಿಂದಾಗಿ ಆತ ಇಟ್ಟ ಹೆಜ್ಜೆಯನ್ನು ಹಿಂತೆಗೆದ
ಈ ವಿಡಿಯೋ ಅನ್ನು ಟ್ವೀಟ್ ಮಾಡಿದ ಜಿತೇಂದ್ರ ಥಾಲೆ ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿ ಗಮನ ಸೆಳೆದಿದ್ದಾರೆ. ಈತನಕ ಈ ವಿಡಿಯೋ ಅನ್ನು 213 ಜನ ನೋಡಿದ್ದಾರೆ. 3 ಜನ ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ದೆಹಲಿ ಮೆಟ್ರೋದಲ್ಲಿ ಮತ್ತೆ ರೀಲಿಗರ ಹಾವಳಿ; ನಗಬೇಕೋ ಅಳಬೇಕೋ
ಮಕ್ಕಳಿಗಾದರೆ ಬೈದು ಹೇಳಬಹುದು. ಆದರೆ ಬೆಳೆದ ಈ ಯುವಕರಿಗೆ ಏನು ಹೇಳುವುದು? ಸ್ಥಳೀಯ ಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡಲ್ಲಿ ಉತ್ತಮ. ಈ ವಿಡಿಯೋ ನೋಡಿದ ನೀವು ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ