Viral Video: ಹೈಸ್ಕೂಲ್​ ಕ್ರಷ್​; 60 ವರ್ಷಗಳ ನಂತರ ಪ್ರೇಮ ನಿವೇದನೆ ​

Crush : ಏರ್​ಪೋರ್ಟ್​ನಲ್ಲಿ ಜನ ತಮ್ಮ ತಮ್ಮ ಜಗತ್ತಿನಲ್ಲಿದ್ದಾರೆ. 70 ದಾಟಿದ ಡಾ. ಥಾಮಸ್​ ಅಲ್ಲಿಯೇ ತಮ್ಮ ಹೈಸ್ಕೂಲ್​ ಕ್ರಷ್​ ನ್ಯಾನ್ಸಿಗಾಗಿ ಕಾಯುತ್ತಿದ್ದಾರೆ. ಆಕೆ ಕಣ್ಣಿಗೆ ಬೀಳುತ್ತಿದ್ದಂತೆ ಎರಡೂ ತೋಳುಗಳನ್ನು ಚಾಚಿ ಭಾವುಕರಾಗುತ್ತಾರೆ. ಮುಂದೆ...

Viral Video: ಹೈಸ್ಕೂಲ್​ ಕ್ರಷ್​; 60 ವರ್ಷಗಳ ನಂತರ ಪ್ರೇಮ ನಿವೇದನೆ ​
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಾ ಥಾಮಸ್​, ನ್ಯಾನ್ಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರುವುದು.
Follow us
ಶ್ರೀದೇವಿ ಕಳಸದ
|

Updated on:Jul 08, 2023 | 11:31 AM

Love Propose : ಪ್ರೀತಿಗೆ ಹೇಗೆ ಕಣ್ಣಿಲ್ಲವೋ ಹಾಗೆ ಅದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಯಾರೂ ಯಾರನ್ನಾದರೂ ಯಾವಾಗ ಬೇಕಾದರೂ ಪ್ರೀತಿಸಬಹುದು. ಪ್ರೀತಿ ಎನ್ನುವುದು ಬದುಕಿನಲ್ಲಿ ಹೊಸ ಚೈತನ್ಯ, ಹೊಸ ಹುರುಪನ್ನು ತುಂಬುತ್ತದೆ ಎನ್ನಲು ಇದೀಗ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ. 60 ವರ್ಷದ ಹಿಂದಿನ ತನ್ನ ಸ್ಕೂಲ್​ ಕ್ರಷ್​ ನ್ಯಾನ್ಸಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport) ಮಂಡಿಯೂರಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ ಡಾ. ಥಾಮಸ್ ಟ್ಯಾಂಪಾ ಎನ್ನುವವರು. ಈ ಅಪರೂಪದ ಕ್ಷಣಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ????????? ???? (@majicallynews)

ಏರ್​ಪೋರ್ಟಿನಲ್ಲಿ ನ್ಯಾನ್ಸಿಗಾಗಿ ಡಾ. ಥಾಮಸ್ ಕಾಯುತ್ತಿರುತ್ತಾರೆ. ನ್ಯಾನ್ಸಿ ದೂರದಿಂದ ಕಂಡ ತಕ್ಷಣ ಸಂತೋಷದಿಂದ ತೋಳುಗಳನ್ನು ಚಾಚುತ್ತಾರೆ. ನಂತರ ಭಾವುಕರಾಗಿ ಪರಸ್ಪರ ತಬ್ಬಿಕೊಳ್ಳುತ್ತಾರೆ. ಈ ವಿಡಿಯೋ ಅನ್ನು ಮೊದಲು ಟಿಕ್​ಟಾಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಇನ್​ಸ್ಟಾಂ ಮೂಲಕ ಜನರ ಗಮನ ಸೆಳೇಯುತ್ತಿದೆ. ಹೃದಯಸ್ಪರ್ಶಿಯಾದ ಈ ವಿಡಿಯೋ ಅನ್ನು ನೆಟ್ಟಿಗರು ಆನಂದಿಸುತ್ತಿದ್ದಾರೆ. ಈ ವಯೋವೃದ್ಧ ಜೋಡಿಗೆ ಒಳಿತಾಗಲಿ ಎಂದು ಹಾರೈಸುತ್ತಿದ್ದಾರೆ.

ಇದನ್ನೂ ಓದಿ : Viral: ಕಾಂಡೋಮ್​ ಆರ್ಡರ್​ ಮಾಡುವಾಗ ಡೆಲಿವರಿ ಅಡ್ರೆಸ್ ಬದಲಾಯಿಸಲು ಅವನು ಮರೆತ

ನಂತರ ಆಕೆ ಆಸನದಲ್ಲಿ ಕುಳಿತುಕೊಂಡಾಗ ಆತ ಮೊಣಕಾಲನ್ನು ನೆಲದ ಮೇಲೆ ಊರಿ, ಉಂಗುರದೊಂದಿಗೆ ಒಂದು ಪತ್ರವನ್ನು ಓದಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ನ್ಯಾನ್ಸಿ ತನ್ನ ಒಪ್ಪಿಗೆ ಸೂಚಿಸುತ್ತಾಳೆ. ಎರಡು ದಿನಗಳ ಹಿಂದೆ ಮಾಡಿದ ಈ ವಿಡಯೋ ಅನ್ನು ಈತನಕ 10 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 1.8 ಲಕ್ಷ ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಮನದುಂಬಿ ಹಾರೈಸಿದ್ದಾರೆ.

ಇದನ್ನೂ ಓದಿ : Viral Video: ;”ಆಕೆಯ ನಮ್ರತೆ, ಅಧಿಕಾರಯುತ ನಡೆಯಿಂದಾಗಿ ಆತ ಇಟ್ಟ ಹೆಜ್ಜೆಯನ್ನು ಹಿಂತೆಗೆದ”

ಈ ಜೋಡಿಯು ಹೀಗೆ ಪ್ರೀತಿಯಿಂದ ಬಾಳಲಿ, ಇವರ ಬದುಕಿನುದ್ದಕ್ಕೂ ಸಂತೋಷ, ವಿನೋದ ಉಕ್ಕಿ ಹರಿಯಲಿ ಎಂದು ಅನೇಕರು ಹಾರೈಸಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:26 am, Sat, 8 July 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ