Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಆಕೆಯ ನಮ್ರತೆ, ಅಧಿಕಾರಯುತ ನಡೆಯಿಂದಾಗಿ ಆತ ಇಟ್ಟ ಹೆಜ್ಜೆಯನ್ನು ಹಿಂತೆಗೆದ’

Woman : ಈ ಇರಾನಿ ಮಹಿಳೆ ಸಾರ್ವಜನಿಕವಾಗಿ ಹಾಡಿ ದಿಟ್ಟತನ ಪ್ರದರ್ಶಿಸಿದ್ದಾಳೆ. 'ಇಂಥ ಕೆಚ್ಚೆದೆಯ ಮಹಿಳೆಯರು ಒಂದು ದಿನ ಇಲ್ಲಿನ ಮಹಿಳಾ ವಿರೋಧಿ ಆಡಳಿತವನ್ನು ಖಂಡಿತ ಉರುಳಿಸುತ್ತಾರೆ' ಎಂದಿದ್ದಾರೆ ಇರಾನಿ ಪತ್ರಕರ್ತೆಯೊಬ್ಬರು.

Viral Video: 'ಆಕೆಯ ನಮ್ರತೆ, ಅಧಿಕಾರಯುತ ನಡೆಯಿಂದಾಗಿ ಆತ ಇಟ್ಟ ಹೆಜ್ಜೆಯನ್ನು ಹಿಂತೆಗೆದ'
ಇರಾನಿನ ಮಸೀದಿಯಲ್ಲಿ ಮಹಿಳೆಯೊಬ್ಬಳು ಹಾಡುತ್ತಿರುವುದನ್ನು ಸೆಕ್ಯೂರಿಟಿ ಗಾರ್ಡ್​ ತಡೆಯಲು ಬಂದಾಗ..
Follow us
ಶ್ರೀದೇವಿ ಕಳಸದ
|

Updated on:Jul 07, 2023 | 6:18 PM

Iran : ”ಇರಾನಿನಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಈಕೆ ಎಸ್ಫಹಾನ್​ನಲ್ಲಿರುವ (Esphahan) ಐತಿಹಾಸಿಕ ಮಸೀದಿಯೊಂದರಲ್ಲಿ ಧೈರ್ಯದಿಂದ ಹಾಡುತ್ತಿದ್ದಾರೆ. ಸೆಕ್ಯೂರಿಟಿ ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಅವನಿಗೆ ಸುಮ್ಮನಿರುವಂತೆ ಸೂಚಿಸಿ ತನ್ನದೇ ಗಂಭೀರ ಲಹರಿಯಲ್ಲಿ ತೇಲಿದ್ದಾಳೆ. ಇರಾನಿನ ಇಂಥ ಕೆಚ್ಚೆದೆಯ ಮಹಿಳೆಯರು ಒಂದಿಲ್ಲಾ ಒಂದು ದಿನ ಮಹಿಳಾ ವಿರೋಧಿ ಆಡಳಿತವನ್ನು ಖಂಡಿತ ಉರುಳಿಸುತ್ತಾರೆ” ಎಂದು ಇರಾನಿನ ಪತ್ರಕರ್ತೆ ಮಾಸಿಹ್ ಅಲಿನೆಜಡ್ (Masih Alinejad) ಟ್ವೀಟ್​ ಮಾಡಿದ್ದಾರೆ.

ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಈ ಮಹಿಳೆಯ ಧೈರ್ಯವನ್ನು ಮೆಚ್ಚುತ್ತಿದ್ದಾರೆ. ”ಆಕೆಯ ನಮ್ರತೆ ಮತ್ತು ಅಧಿಕಾರಯುತ ನಡೆ ಆ ಸೆಕ್ಯುರಿಟಿಯವನು ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯುವಂತೆ ಮಾಡಿತು, ಇದು ಅದ್ಭುತ’ ಎಂದಿದ್ದಾರೆ ಒಬ್ಬರು. ಆದರೆ ಈ ವಿಡಿಯೋದ ವಸ್ತುಸ್ಥಿತಿಯನ್ನೇ ಗ್ರಹಿಸದ ಒಬ್ಬರು, ‘ಆಕೆ ಮಸೀದಿಯಲ್ಲಿ ಬೂಟುಗಳನ್ನು ಏಕೆ ಧರಿಸಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ! ಈಕೆಯದು ಜಾದೂಕಂಠ, ಈಕೆಯ ಧೈರ್ಯಕ್ಕೆ ನನ್ನ ಸಲಾಮ್​ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ”ಬಡವನು ತನ್ನ ಛತ್ರಿಯನ್ನು ತಾನೇ ಹಿಡಿದುಕೊಂಡು ರಾಜನಂತೆ ನಡೆಯಬೇಕು”

ನಮ್ಮ ಧರ್ಮಗಳು ಸಾರಿದ ಬೋಧನೆಯನ್ನು ಮರುಪರಿಶೀಲಿಸಬೇಕು. ಇದರಲ್ಲಿ ತೊಡಗಿಕೊಂಡರೆ ಕೆಲವೊಂದಿಷ್ಟು ಕಹಿ ಘಟನೆಗಳು ನಡೆಯುತ್ತವೆ, ಅಷ್ಟೇ ಏಕೆ ಯುದ್ಧಗಳೂ. ಆದರೆ ಅಂತಿಮ ಫಲಿತಾಂಶ ಉತ್ತಮವಾಗಿರುತ್ತದೆ. ನಮ್ಮ ಆಧುನಿಕ ಮಾರ್ಗವು ಇದನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ನನಗೆ ಇದರಲ್ಲಿ ಸಂಪೂರ್ಣ ನಂಬಿಕೆ ಇದೆ. ಇದಕ್ಕೆ ಸಾವಿರ ವರ್ಷಗಳೇ ಬೇಕಾಗಬಹುದು. ಆದರೂ ನಾವು ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಾರೆಯಾಗಿ ಇರಾನ್​ ಸರ್ಕಾರವು ಮಹಿಳೆಯರ ಮೇಲೆ ಹೇರಿದ ನಿಷೇಧಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಅನೇಕ ನೆಟ್ಟಿಗರು ಒತ್ತಾಯಿಸಿದ್ದಾರೆ.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:16 pm, Fri, 7 July 23