Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಬಡವನು ತನ್ನ ಛತ್ರಿಯನ್ನು ತಾನೇ ಹಿಡಿದುಕೊಂಡು ರಾಜನಂತೆ ನಡೆಯಬೇಕು’

Umbrella : ''ನಿಮ್ಮೂರಲ್ಲಿ ಎಂಥಾ ಬಿಸಿಲು ಮಾರಾಯಾ? ಸುಮ್ನೆ ನಮ್ಮೂರಿಗೇ ಬಂದ್ಬಿಡು. ಬರುವಾಗ ನನಗೂ ಒಂದು ಛತ್ರಿ ತಗೊಂಡು ಬಾ. ಸಿಗಲಿಲ್ಲ ಅಂದ್ರೆ ಪರವಾಗಿಲ್ಲ ಇಲ್ಲೇ ಬಾಬಾ ರಾಮದೇವನ ಬಳಿ ತಗೊಂಡ್ರಾಯ್ತು.''

Viral Video: 'ಬಡವನು ತನ್ನ ಛತ್ರಿಯನ್ನು ತಾನೇ ಹಿಡಿದುಕೊಂಡು ರಾಜನಂತೆ ನಡೆಯಬೇಕು'
ನಕಲಿಯೋ ಅಸಲಿಯೋ ನೋಡಲಂತೂ ಛಂದ
Follow us
ಶ್ರೀದೇವಿ ಕಳಸದ
|

Updated on: Jul 07, 2023 | 2:08 PM

Lion: ಕಾಡಿನ ರಾಜರಿಗೆ ಒಂದು ಕೊಡೆಗೂ ಗತಿ ಇಲ್ಲವೆ? ಛೆ, ಇದೆಂಥ ಅನ್ಯಾಯ. ಪಾಪ ನೆತ್ತಿ ಸುಡುವಂಥ ಬಿಸಿಲು,  ಸನ್​ಸ್ಕ್ರೀನ್​ ಆರ್ಡರ್ ಮಾಡೋದಲ್ವಾ? ಕೊಡೆ ಕೊಟ್ಟರೆ ಮುಗಿಯಿತೇ, ಹಿಡಿಯಲು ಸೇವಕರು ಕಳಿಸಬೇಡವೆ? ಕಳಿಸಿ ನೋಡಿ ಸೇವಕರನ್ನೂ, ಸನ್​ಸ್ಕ್ರೀನನ್ನೂ ಮತ್ತು ಕೊಡೆಯನ್ನೂ. ಹೇಗಿರುತ್ತದೆ ವಾಸ್ತವ! ಇದೀಗ ಈ ವಿಡಿಯೋ ಟ್ವಿಟರ್​ನಲ್ಲಿ (Twitter) ಹರಿದಾಡುತ್ತಿದೆ. ಸಿಂಹವೊಂದು ಬಾಯಿಯಲ್ಲಿ ದೊಡ್ಡ ಎಲೆಯನ್ನು ಛತ್ರಿಯಂತೆ ಹಿಡಿದುಕೊಂಡು ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಿದೆ.

ಬಡವನು ತನ್ನ ಛತ್ರಿಯನ್ನು ತಾನೇ ಹಿಡಿದುಕೊಂಡು ರಾಜನಂತೆ ನಡೆಯಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನೀವು ಇಂಥ ನಕಲಿ ವಿಡಿಯೋಗಳಿಗೆ ಹೆಚ್ಚು ಮಾರು ಹೋಗುತ್ತೀರಿ, ಅದನ್ನು ಹಂಚಿಕೊಳ್ಳುತ್ತೀರಿ ಮತ್ತು ಆ ಬಗ್ಗೆ ಚರ್ಚಿಸಿ ವೈರಲ್ ಮಾಡುತ್ತೀರಿ ಎಂದೇ ಇಂಥವನ್ನು ಕೆಲವರು ಸೃಷ್ಟಿಸುತ್ತಾರೆ. ಅಂಥವರಿಗೆ ಈಡಾಗಬೇಡಿ, ಉಪಯೋಗವಿರುವ ಮತ್ತು ಜ್ಞಾನಕ್ಕೆ ಪೂರಕವಾದಂಥ ವಿಷಯಗಳೆಡೆ ಆಸಕ್ತಿ ತೋರಿಸಿ ಇಂಥದಕ್ಕೆಲ್ಲ ಕಾಲಹರಣ ಮಾಡಬೇಡಿ ಎಂದು ಒಬ್ಬರು ಪಾಠ ಮಾಡಿದ್ದಾರೆ.

ಇದನ್ನೂ ನೋಡಿ : Viral Video: ಮೋಜಿನ ವಿಜ್ಞಾನ; ಮೊಬೈಲ್​ ದೂರವಿಟ್ಟು ಮಕ್ಕಳನ್ನು ಹತ್ತಿರಕ್ಕೆಳೆದುಕೊಳ್ಳಿ

ತಲೆಹೋಗುವಂಥ ಗಂಭೀರ ಕೆಲಸಗಳಿಂದ ಬಿಡುವು ಪಡೆಯಲೆಂದೇ ಇಂಥ ವಿಡಿಯೋಗಳನ್ನು ನೋಡುವುದು ಎಂದು ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಧೀಮಂತರ ಜೀವನ ಶೈಲಿ ಅತ್ಯಂತ ಸರಳತೆಯಿಂದ ಕೂಡಿರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಎಐ ಕಲಾವಿದರು ಸೃಷ್ಟಿಸಿದ್ದು ಎಂದು ಒಂದಿಷ್ಟು ಜನ. ಇದು ಎಡಿಟೆಡ್​ ವಿಡಿಯೋ ಎಂದು ಮತ್ತೊಂದಿಷ್ಟು ಜನ. ಒಟ್ಟಾರೆಯಾಗಿ ಇದು ವೈರಲ್ ಆಗುತ್ತಲೇ ಇದೆ. ಈತನಕ ಸುಮಾರು 40,000 ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಇದನ್ನು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ವಿದ್ಯಾರ್ಥಿಯ ಡೆಸ್ಕ್​ವಾದನಕ್ಕೆ ಶಿಕ್ಷಕಿಯ ಜಾನಪದ ಹಾಡಿನ ಸಾಥ್!

ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಕೆಲಸದ ಮಧ್ಯೆ ಮನಸಿಗೆ, ಮೆದುಳಿಗೆ, ಕಣ್ಣುಗಳಿಗೆ ವಿಶ್ರಾಂತಿಗಾಗಿ ಇಂಥ ವಿಡಿಯೋಗಳನ್ನು ಸಾಕಷ್ಟು ಜನ ನೋಡುತ್ತಾರೆ. ಇದು ನಿಜವೋ ಸುಳ್ಳೋ ಎಂದು ಚರ್ಚಿಸುವುದಕ್ಕಿಂತ ಇಂಥದೊಂದು ಸೃಜನಶೀಲತೆ, ಆಲೋ ಆಲೋಚನೆ ಹೊಳೆದಿದ್ದಾದರೂ ಹೇಗೆ? ಇದನ್ನು ತಂತ್ರಜ್ಞಾನದ ಮೂಲಕ ಹೇಗೆ ಸೃಷ್ಟಿಸಿದ್ದಾರೆ? ಹೀಗಲ್ಲವೆ ಯೋಚಿಸಬೇಕಿರುವುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ