Viral: ಬೀದಿನಾಯಿಗಳಿಗೆ ‘ಆಧಾರ್’; ಮುಂಬೈನ ಶ್ವಾನಪ್ರಿಯ ಯುವಕನ ಸಂಶೋಧನೆ

Aadhaar : ನಾಯಿಗಷ್ಟೇ ಅಲ್ಲ, ಹಸು, ಮೇಕೆ ಮತ್ತು ಸಾಕುಪ್ರಾಣಿಗಳಿಗೂ ಅಳವಡಿಸಬಹುದು. ಇದರಿಂದ ಪ್ರಾಣಿಗಳ ಅಂಕಿಅಂಶ, ಪ್ರಾಣಿಗಳ ಸ್ಥಳಾಂತರ, ವೈದ್ಯಕೀಯ ಮಾಹಿತಿ ಮತ್ತು ಕಳೆದುಹೋದ ಪ್ರಾಣಿಗಳನ್ನು ಪತ್ತೆ ಹಚ್ಚಬಹುದು. 

Viral: ಬೀದಿನಾಯಿಗಳಿಗೆ 'ಆಧಾರ್'; ಮುಂಬೈನ ಶ್ವಾನಪ್ರಿಯ ಯುವಕನ ಸಂಶೋಧನೆ
ನಾಯಿಯೊಂದಿಗೆ ಮುಂಬೈನ ಯುವ ಎಂಜಿನಿಯರ್ ಅಕ್ಷಯ ರಿಡ್ಲಾನ್​
Follow us
ಶ್ರೀದೇವಿ ಕಳಸದ
|

Updated on:Jul 07, 2023 | 11:17 AM

Aadhar : ಎಷ್ಟೇ ಪ್ರೀತಿಯಿಂದ ಸಾಕಿದರೂ ನಾಯಿಗಳಿಗೂ ಸ್ವಇಚ್ಛೆ ಎನ್ನುವುದು ಇರುತ್ತದೆ. ಹಾಗಾಗಿ ಅವಕಾಶ ಸಿಕ್ಕರೆ ಸಾಕು ತಪ್ಪಿಸಿಕೊಂಡು ರೋಡಿಗಿಳಿದು ಬಿಡುತ್ತವೆ. ಇನ್ನು ಬೀದಿನಾಯಿಗಳು ಒಮ್ಮೊಮ್ಮೆ ಯಾವುದ್ಯಾವುದೋ ಕಾರಣಕ್ಕೆ ಅಲೆಯುತ್ತ ಹೋಗುವ ಸಾಧ್ಯತೆ ಇರುತ್ತದೆ. ಒಟ್ಟಾರೆಯಾಗಿ ನಾಯಿ ಪೋಷಕರಿಗೆ ಅವುಗಳನ್ನು ಹುಡುಕುವುದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇದೀಗ ಈ ಸಮಸ್ಯೆಗೆ ಪರಿಹಾರವೆಂಬಂತೆ ಮುಂಬೈ ಮೂಲದ ಯುವ ಎಂಜಿನಿಯರ್ ಅಕ್ಷಯ್​ ರಿಡ್ಲಾನ್ (Akshay Ridlan) ಬೀದಿನಾಯಿಗಳಿಗಾಗಿ QR ಕೋಡ್ ಇರುವ ಕಾಲರ್​ ಅನ್ನು ಸೃಷ್ಟಿಸಿದ್ದಾರೆ. ಕೋಡ್​ ಸ್ಕ್ಯಾನ್ ಮಾಡಿದರೆ ನಾಯಿಯ ಹೆಸರು, ವೈದ್ಯಕೀಯ ಇತಿಹಾಸ ಮತ್ತು ಅದರ ಪೋಷಕರ ಮೊಬೈಲ್​ ಸಂಖ್ಯೆ ಎಲ್ಲವೂ ಪತ್ತೆಯಾಗುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

24 ವರ್ಷದ ಅಕ್ಷಯ್ ನಾಯಿಪ್ರಿಯರು. ತಮ್ಮ ಮನೆ ಸುತ್ತಮುತ್ತಲಿನ ಬೀದಿನಾಯಿಗಳ ಮೇಲೆ ನಿಗಾ ಇಡಲು ಹೀಗೊಂದು ಪರಿಹಾರವನ್ನು ಅವರು ಸ್ವತಃ ಕಂಡುಕೊಂಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ನೊಂದಿಗಿನ (Hindustan Times) ಮಾತನಾಡಿದ ಅವರು, ”ನನ್ನ ಪ್ರೀತಿಯ ಕಾಳು ಆಗಾಗ ನಮ್ಮ ಏರಿಯಾ ಬಿಟ್ಟು ಹೋಗುತ್ತಿತ್ತು. ಆಗ ಅದೆಲ್ಲಿದೆ ಎಂದು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು. 2020ರ ಮೇನಲ್ಲಿ ಮನೆಯ ಬಳಿ ಒಂದು ಮದುವೆ ಇತ್ತು. ಆಗ ಮೆರವಣಿಗೆಯಲ್ಲಿ ಜೋರಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರು. ಆಗ ಕಾಳು ನಮ್ಮ ಏರಿಯಾ ಬಿಟ್ಟೇ ಹೋಯಿತು, ಮತ್ತೆ ವಾಪಾಸಾಗಲೇ ಇಲ್ಲ.”

ಇದನ್ನೂ ಓದಿ : Viral Video: ವಿದ್ಯಾರ್ಥಿಯ ಡೆಸ್ಕ್​ವಾದನಕ್ಕೆ ಶಿಕ್ಷಕಿಯ ಜಾನಪದ ಹಾಡಿನ ಸಾಥ್!

ಹೀಗಾದಾಗ ಯಾವ ನಾಯಿಪ್ರೇಮಿಯೂ ಸುಮ್ಮನಿರುವುದಿಲ್ಲ, ಅಕ್ಷಯ್ ನಾಯಿಯ ಹುಡುಕಾಟಕ್ಕೆ ಹೊರಟರು. “ಎಲ್ಲೆಲ್ಲಾ ಅವನನ್ನು ಹುಡುಕಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಸ್ಟ್​ ಹಾಕಿದೆ, ಏನೊಂದೂ ಪ್ರಯೋಜನವಾಗಲಿಲ್ಲ. ಬಹಳ ಬೇಸರವಾಯಿತು. ಆದರೆ ತಂತ್ರಜ್ಞಾನದ ವಿದ್ಯಾರ್ಥಿಯಾಗಿರುವ ನನಗೆ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಇಷ್ಟದ ಕೆಲಸ. ಕಾಳು ನೆನಪಿನಲ್ಲಿ ಬೀದಿನಾಯಿಗಳಿಗೆ ‘ಆಧಾರ್’ ಪರಿಹಾರವನ್ನು ಕಂಡುಕೊಂಡೆ.” ಎಂದಿದ್ದಾರೆ.

ಈ ‘ಆಧಾರ್​​’ನ ಡೇಟಾವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಅಕ್ಷಯ್. ”ಆಯಾ ಪ್ರದೇಶಗಳಲ್ಲಿರುವ ಬೀದಿನಾಯಿಗಳಿಗೆ ಲಸಿಕೆ ಮತ್ತು ಆರೋಗ್ಯ ಸ್ಥಿತಿಯನ್ನು ಪತ್ತೆ ಹಚ್ಚಲು ಇದು ಸಹಾಯವಾಗುತ್ತದೆ. ಇನ್ನು ಮೈಕ್ರೋಚಿಪ್​​ಗಳನ್ನು ಅಳವಡಿಸುವುದು ಖರ್ಚಿನ ವಿಷಯ. ಹಾಗಾಗಿ ಈ ಆಲೋಚನೆಯನ್ನು ಕೈಬಿಡಬೇಕಾಯಿತು. ಅಲ್ಲದೆ ಚಿಪ್​​ ಸ್ಕ್ಯಾನ್ ಮಾಡಲು ವಿಶೇಷ ಸ್ಕ್ಯಾನರ್​ಗಳು ಬೇಕು. ಆದರೆ ಕ್ಯೂಆರ್​ಗೆ ಹಾಗಲ್ಲ ಅದು ಎಲ್ಲೆಡೆ ಲಭ್ಯ.” ಎಂದಿದ್ದಾರೆ.

ಇದನ್ನೂ ಓದಿ : Viral Video: ಕೊರಿಯಾದ ವೇದಿಕೆಯ ಮೇಲೆ ಆರ್ಕೆಸ್ಟ್ರಾ ನಿರ್ವಹಿಸಿದ ರೋಬೋಟ್​ ಕಂಡಕ್ಟರ್​

ಈ ಟ್ಯಾಗ್​ ಕೇವಲ ನಾಯಿಗಷ್ಟೇ ಅಲ್ಲ, ಹಸು, ಮೇಕೆ ಮತ್ತು ಇನ್ನಿತರೇ ಸಾಕುಪ್ರಾಣಿಗಳಿಗೂ ಅಳವಡಿಸಬಹುದು. ಇದರಿಂದ ನಾಲ್ಕು ಪ್ರಮುಖ ಸಮಸ್ಯೆಗಳನ್ನು ನೀಗಿಸಬಹುದಾಗಿದೆ; ಪ್ರಾಣಿಗಳ ಅಂಕಿಅಂಶ, ಪ್ರಾಣಿಗಳ ಸ್ಥಳಾಂತರ, ವೈದ್ಯಕೀಯ ಮಾಹಿತಿ ಮತ್ತು ಕಳೆದುಹೋದ ಪ್ರಾಣಿಗಳನ್ನು ಪತ್ತೆ ಹಚ್ಚುವುದು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:56 am, Fri, 7 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ