Viral Video: ಮನುಷ್ಯರೇ, ಬದುಕಿನ ಬ್ಯಾಲೆನ್ಸ್​ ಸೂತ್ರವೂ ಇದೇ; ದಂಡಿಸಿ ದೇಹವನ್ನೂ ಮನಸ್ಸನ್ನೂ

Working Dogs : ಪ್ರಾಣಿಹಿಂಸೆ ಸಲ್ಲದು ಎಂದು ಕೆಲವರು. ವಿಷಯ ಗೊತ್ತಿಲ್ಲದೇ ಮಾತನಾಡಬೇಡಿ ಎಂದು ಕೆಲವರು. ಇಬ್ಬರ ಮಧ್ಯೆ ಈ ನಾಯಿಗಳು ಮಾತ್ರ ತಮ್ಮ ಪಾಡಿಗೆ ತಾವು ಬ್ಯಾಲೆನ್ಸ್ ಮಾಡುತ್ತ ಹೊರಟಿವೆ. ಏನಿದರ ಹಕೀಕತ್ತು?

Viral Video: ಮನುಷ್ಯರೇ, ಬದುಕಿನ ಬ್ಯಾಲೆನ್ಸ್​ ಸೂತ್ರವೂ ಇದೇ; ದಂಡಿಸಿ ದೇಹವನ್ನೂ ಮನಸ್ಸನ್ನೂ
ವರ್ಕಿಂಗ್ ಡಾಗ್ಸ್​
Follow us
ಶ್ರೀದೇವಿ ಕಳಸದ
|

Updated on:Jul 06, 2023 | 3:30 PM

Dogs: ಇಲ್ಲಿ ಒಂದು ನಾಯಿ ಮೂಗು ಮತ್ತು ಹಣೆಯ ಮಧ್ಯಭಾಗದಲ್ಲಿ ಪ್ಲಾಸ್ಟಿಕ್​ ಗ್ಲಾಸಿನೊಳಗೆ ನೀರನ್ನಿಟ್ಟುಕೊಂಡು ನೆಲದ ಮೇಲೆ ನಡೆಯುತ್ತಿದೆ. ಇನ್ನೊಂದು ಹಗ್ಗದ ಮೇಲೆ ನಡೆಯುತ್ತಿದೆ. ಇದೇ ನಿಜವಾದ ಬ್ಲಾಲೆನ್ಸಿಂಗ್ ಆ್ಯಕ್ಟ್ (Balancing Act) ಎನ್ನುತ್ತಿದೆ ನೆಟ್​ ಜನತೆ. ಆದರೆ ನಾಯಿಪ್ರಿಯರು ಮಾತ್ರ ಗರಂ ಆಗಿದ್ದಾರೆ! ಎಂದಿಗೂ ನಾಯಿಗಳು ಇಂಥದೆಲ್ಲವನ್ನೂ ಮಾಡಲ ಇಚ್ಛಿಸುವುದಿಲ್ಲ. ಇದು ಅವುಗಳ ಮೂಲ ಸ್ವಭಾವವೂ ಅಲ್ಲ. ಇವುಗಳನ್ನು ಹೀಗೆ ಹಿಂಸಿಸಬೇಡಿ, ಅವುಗಳ ಪಾಡಿಗೆ ಬದುಕಲು ಬಿಟ್ಟುಬಿಡಿ ಎಂದು ಕಮೆಂಟ್​ ದಾಳಿ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಕೆಲವರು, ಇವುಗಳನ್ನು Working Dog ಎನ್ನುತ್ತಾರೆ. ಹಿನ್ನೆಲೆ ತಿಳಿಯದೇ ಅಸಭ್ಯವಾಗಿ ಪ್ರತಿಕ್ರಿಯಿಸುವುದನ್ನು ನೀವುಗಳು ನಿಲ್ಲಿಸಿ ಎಂದಿದ್ದಾರೆ. ಈ ಪೋಸ್ಟ್​ಗೆ ಉದ್ದಕ್ಕೂ ಪ್ರತಿಕ್ರಿಯೆಗೆ ಪ್ರತಿದಾಳಿ ಸಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Belgian Malinois ❤️ (@malinois.loyal)

ಮತ್ತೊಂದು ನಾಯಿ ಈ ಕೆಳಗಿನ ವಿಡಿಯೋದಲ್ಲಿ ಮೂಗು ಮತ್ತು ಹಣೆಯ ಮಧ್ಯದ ಜಾಗದಲ್ಲಿ ಪ್ಲಾಸ್ಟಿಕ್ ಗ್ಲಾಸಿನೊಳಗೆ ನೀರನ್ನಿಟ್ಟುಕೊಂಡು ಎರಡು ಹಗ್ಗಳ ಮೇಲೆ ನಡೆಯುತ್ತಿದೆ. ಬಡಪಾಯಿ ನಾಯಿಯನ್ನು ನೋಡಿ, ಎಷ್ಟೊಂದು ಹೆದರಿಕೊಂಡಿದೆ ಅದು, ಸರ್ಕಸ್ ಪ್ರಾಣಿ ಅಲ್ಲ ಇದು ಎಂದಿದ್ದಾರೆ ಒಂದಿಷ್ಟು ಜನ. ಇದರಲ್ಲಿ ಮಜಾ ಎನ್ನಿಸುವಂಥದ್ದೇನ ಇಲ್ಲ, ಇದು ಪ್ರಾಣಿಹಿಂಸೆ ಎಂದಿದ್ದಾರೆ ಕೆಲವರು. ಅತ್ಯದ್ಭುತವಾದ ನಾಯಿ ಇದು, ನಾನಿದನ್ನು ಹತ್ತಾರು ಬಾರಿ ನೋಡಿದೆ ಎಂದಿದ್ದಾರೆ ಹಲವರು. ನಾಯಿಗಳಿಗೆ ಹೀಗೆಲ್ಲ ದಂಡಿಸುವುದರಿಂದ ಅವು ಮನುಷ್ಯರನ್ನು ಕಚ್ಚುತ್ತವೆ ಎಂದಿದ್ದಾರೆ ಮತ್ತೊಂದಿಷ್ಟು ಜನ.

Working Dogs ತಳಿಗಳು ಜಗತ್ತಿನಾದ್ಯಂತ ಕಂಡುಬರುತ್ತವೆ. ಅವುಗಳ ಹೆಸರೇ ಸೂಚಿಸುವಂತೆ ಅವು ದುಡಿಯುವ ನಾಯಿಗಳು. ಈ ತಳಿಯ ನಾಯಿಗಳು ಕಠಿಣ ಪರಿಶ್ರಮಿಗಳು. ಪೊಲೀಸ್ ಇಲಾಖೆ, ಸೇನಾದಳದಲ್ಲಿ ಇವುಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅಥವಾ ಕುರಿ ಮತ್ತು ಇತರೇ ಸಾಕುಪ್ರಾಣಿಗಳ ರಕ್ಷಣೆಗೆ ಇವುಗಳನ್ನು ಸಾಕಲಾಗುತ್ತದೆ. ಇವುಗಳಿಗೆ ನಿಯಮಿತವಾದ ವ್ಯಾಯಾಮ, ತರಬೇತಿಗಳ ಮೂಲಕ ಪಳಗಿಸಲಾಗಿರುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:28 pm, Thu, 6 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ