Viral Video: ‘ಐ ಕೇಮ್​ ಫ್ರಂ ಹನೇಹಳ್ಳಿ’; ಈ ಅಪ್ಪಟ ಅವಿದ್ಯಾವಂತನ ಗಂಟಲೋಳ್​ ಇಳಿದ ಇಂಗ್ಲಿಷ್

English : ''ನಾವು ಬದುಕಿನಲ್ಲಿ ಬಹುಮುಖ್ಯವಾಗಿ ಜ್ಞಾನವನ್ನು ಗಳಿಸಬೇಕಿದೆ. ಅದು ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕಲಿಸುವ ಇಂಗ್ಲಿಷ್​ನಿಂದ ಬರುವಂಥದ್ದಲ್ಲ, ಇಂಗ್ಲಿಷ್​ ಎನ್ನುವುದು ಒಂದು ಭಾಷೆ ಮಾತ್ರ. ಅದನ್ನಿವರು ಸಾಬೀತು ಮಾಡಿದ್ದಾರೆ.''

Viral Video: 'ಐ ಕೇಮ್​ ಫ್ರಂ ಹನೇಹಳ್ಳಿ'; ಈ ಅಪ್ಪಟ ಅವಿದ್ಯಾವಂತನ ಗಂಟಲೋಳ್​ ಇಳಿದ ಇಂಗ್ಲಿಷ್
ಇಂಗ್ಲಿಷ್​ ಮಾತನಾಡುವ ಉತ್ತರ ಕನ್ನಡದ ಹನೇಹಳ್ಳಿಯ ವ್ಯಕ್ತಿ
Follow us
ಶ್ರೀದೇವಿ ಕಳಸದ
|

Updated on:Jul 06, 2023 | 2:26 PM

Uttara Kannada : ಹನೇಹಳ್ಳಿ ಎಂದ ತಕ್ಷಣ ಸಾಹಿತ್ಯಾಸಕ್ತರಿಗೆ ಸಾಹಿತಿ ಯಶವಂತ ಚಿತ್ತಾಲರ (Yashwant Chittal) ಕಥೆ, ಕಾದಂಬರಿಗಳು ಮತ್ತು ಅದರೊಳಗೆ ಅಡಕಗೊಂಡಿರುವ ಹನೇಹಳ್ಳಿಯ (Hanehalli) ಪರಿಸರ ಮತ್ತು ಪಾತ್ರಗಳು ಥಟ್ಟನೆ ನೆನಪಿಗೆ ಬರುತ್ತದೆ. ಆದರೆ ಇ-ಕಾಲದ ನೆಟ್ಟಿಗರಿಗೆ ಬಹುಶಃ ಹನೇಹಳ್ಳಿ ಎಂದರೆ ಈ ಪ್ರಸ್ತುತ ವಿಡಿಯೋದಲ್ಲಿರುವ ಈ ವ್ಯಕ್ತಿ ನೆನಪಿನಲ್ಲಿ ಉಳಿಯಬಹುದೇನೋ. ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದನೋ ಅಥವಾ ಮನೆಯಿಂದ ಕೆಲಸಕ್ಕೆ ಹೊರಡುತ್ತಿದ್ದನೋ ಅಂತೂ ಇವನು ಇವರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಮುಂದಿನದನ್ನು ಈ ವ್ಯಕ್ತಿಯ ಮಾತಿನಲ್ಲಿಯೇ ಕೇಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ʜEAʀT вєαт..?BGM…. lover ? (@music_beats_05)

ನೀವು ಎಲ್ಲಿಂದ ಬಂದಿದ್ದೀರಿ ಎಂದು ಇತ್ತಕಡೆಯಿಂದ ಧ್ವನಿ ಕೇಳುತ್ತದೆ. ನಾನು ಹನೇನಳ್ಳಿಯಿಂದ ಬಂದಿದ್ದೇನೆ ಎನ್ನುತ್ತಾರೆ ಈ ವ್ಯಕ್ತಿ. ಹನೇನಳ್ಳಿ ಎಲ್ಲಿದೆ ಎಂದಾಗ ಊರಕೆರೆಯ ಬಳಿ. ನಿಮ್ಮ ವಿದ್ಯಾರ್ಹತೆ? ಏನೂ ಇಲ್ಲ. ನಾನೊಬ್ಬ ಅವಿದ್ಯಾವಂತ, ಪೂರ್ತಿ ಅನಕ್ಷರಸ್ಥ. ಹಾಗಿದ್ದರೆ ಇಂಗ್ಲಿಷ್​ ಹೇಗೆ ಮಾತನಾಡುತ್ತಿರುವಿರಿ? , ಇದೆಲ್ಲವನ್ನೂ ನಾನು ಜನರಿಂದಲೇ ಕಲಿತಿದ್ದೇನೆ. ಪ್ರಕೃತಿಯೇ ಶಿಕ್ಷಕ, ಜಗತ್ತೇ ವಿಶ್ವವಿದ್ಯಾಲಯ. ಹಾಗಾಗಿ ನಾನು ಯಾವುದೇ ಶಿಕ್ಷಕರನ್ನು ಭೇಟಿಮಾಡಿಲ್ಲ ಮತ್ತು ವಿಶ್ವವಿದ್ಯಾಲಯಕ್ಕೆ ಹೋಗಿಲ್ಲ ಎನ್ನುತ್ತಾರೆ ಇವರು.

ಇದನ್ನೂ ಓದಿ : Viral: 1975ರಲ್ಲಿ ಈ ನೋಟ್​ ಬರೆದ ಮಹಿಳೆಯನ್ನು ಪತ್ತೆ ಹಚ್ಚಿದ ವ್ಯಕ್ತಿ 

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಾನು ಶಾಲೆಗೆ ಹೋಗಿದ್ದೇನೆ, ಇಂಗ್ಲಿಷ್​ ಅನ್ನು ಕಲಿತಿದ್ದೇನೆ ಆದರೆ ನನಗೆ ಈತನಕವೂ ಇಂಗ್ಲಿಷ್​ ಮಾತನಾಡಲು ಬರುವುದಿಲ್ಲ, ನೀವು ಗ್ರೇಟ್​ ಎಂದಿದ್ದಾರೆ ಒಬ್ಬರು. ಹನೇಹಳ್ಳಿಗೆ ಬಂದು ನಿಮ್ಮನ್ನೊಮ್ಮೆ ಭೇಟಿ ಮಾಡುವೆ ಎಂದಿದ್ದಾರೆ ಮತ್ತೊಬ್ಬರು. ಅವಿದ್ಯಾವಂತರಿಗೆ ನೀವು ಮಾದರಿ ಸರ್ ಎಂದು ಮಗದೊಬ್ಬರು ಹೇಳಿದ್ದಾರೆ. ನಮ್ಮ ರೈತರೆಂದರೆ ಸುಮ್ಮನೇನಾ? ಎಂದು ಕೇಳಿದ್ದಾರೆ ಇನ್ನೂ ಒಬ್ಬರು.

ಭಾಷೆಗಿಂತ ಜ್ಞಾನ ಮುಖ್ಯ. ಜ್ಞಾನ ಎನ್ನುವುದು ಅಧ್ಯಯನದಿಂದಷ್ಟೇ ಅಲ್ಲ ಪರಿಸರ ಮತ್ತು ಒಡನಾಟದಿಂದಲೂ ಬರುವಂಥದ್ದು. ಅರಿವು ಎನ್ನುವುದೇ ಗುರು. ಆದರೆ ಈ ವ್ಯಕ್ತಿಗೆ ಪ್ರಕೃತಿಯೇ ಗುರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:19 pm, Thu, 6 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ