Viral: ಹಚ್ಚೆಯ ಹುಚ್ಚು; ‘ಶೌಚಾಲಯ ಸ್ವಚ್ಛಗೊಳಿಸುವ ಕೆಲಸವೂ ಸಿಗುತ್ತಿಲ್ಲ’ ಲಂಡನ್​ ಮಹಿಳೆಯ ಅಳಲು

Tattoo Lover : ''ನನ್ನ ಮೈಮೇಲೆ ಈಗಾಗಲೇ 800 ಹಚ್ಚೆಗಳಿವೆ. ನನಗೆ ಹಚ್ಚೆ ಹಾಕಿಸಿಕೊಳ್ಳುವುದು ಒಂದು ವ್ಯಸನ. ಕೆಲಸವನ್ನು ಹುಡುಕುತ್ತಲೇ ವಾರಕ್ಕೆ ಮೂರು ಹೊಸ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಿರುತ್ತೇನೆ.''

Viral: ಹಚ್ಚೆಯ ಹುಚ್ಚು; 'ಶೌಚಾಲಯ ಸ್ವಚ್ಛಗೊಳಿಸುವ ಕೆಲಸವೂ ಸಿಗುತ್ತಿಲ್ಲ' ಲಂಡನ್​ ಮಹಿಳೆಯ ಅಳಲು
ಲಂಡನ್​ನ ಟ್ಯಾಟೂ ಮಹಿಳೆ ಮೆಲಿಸ್ಸಾ
Follow us
ಶ್ರೀದೇವಿ ಕಳಸದ
|

Updated on:Jul 06, 2023 | 12:03 PM

Tattoo : ಮನುಷ್ಯನಿಗೆ ಹುಚ್ಚು ಇರಬೇಕು, ಆದರೆ ಬದುಕನ್ನೇ ತೊಡಕು ಮಾಡಿಕೊಳ್ಳುವಷ್ಟು ಅಲ್ಲ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್​ನಲ್ಲಿರುವ ಮಹಿಳೆಯನ್ನು ಗಮನಿಸಿ. ಹಚ್ಚೆಪ್ರಿಯಳಾದ ಈಕೆ ಈತನಕ ಒಂದಲ್ಲ ಹತ್ತಲ್ಲ ಬರೋಬ್ಬರಿ 800 ಹಚ್ಚೆಗಳನ್ನು ತನ್ನ ಮೈಮುಖದ ಮೇಲೆ ಹಾಕಿಸಿಕೊಂಡಿದ್ದಾಳೆ. ಆದರೆ ಈ ‘ಹಚ್ಚೆಯ ಚಟ’ ದಿಂದಾಗಿಯೇ ಆಕೆ ನಿರುದ್ಯೋಗವನ್ನು (Jobless) ಅನುಭವಿಸುವಂತಾಗಿದೆ. ಕೆಲಸ ಕೇಳಿಕೊಂಡು ಹೋದಲ್ಲೆಲ್ಲ ಆಕೆಯ ಹಚ್ಚೆಗಳ ಬಗ್ಗೆಯೇ ಟೀಕಿಸುತ್ತಾರೆ ವಿನಾ ಯಾರೊಬ್ಬರೂ ಈಕೆಗೆ ಕೆಲಸ ಕೊಡುತ್ತಿಲ್ಲ. ಹೀಗಾಗಿ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ ಈಕೆಯ ಪರಿಸ್ಥಿತಿ.

ನ್ಯೂಯಾರ್ಕ್​ ಪೋಸ್ಟ್​ನ ವರದಿಯಂತೆ, ಲಂಡನ್​ನ ವೇಲ್ಸ್​ನಲ್ಲಿ 46 ವರ್ಷದ ಈ ಮೆಲಿಸ್ಸಾ ಸ್ಲೋನ್​ ನೆಲೆಸಿದ್ದಾಳೆ. ಈಕೆಗೆ ಎರಡು ಮುದ್ದಾದ ಹೆಣ್ಣುಮಕ್ಕಳೂ ಇವೆ. ಆದರೆ ಕೆಲಸವಿಲ್ಲದೆ ಇದೀಗ ಒದ್ಧಾಡುತ್ತಿದ್ದಾಳೆ. ”ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ನಾನು ಅರ್ಜಿ ಸಲ್ಲಿಸಿದಾಗ, ಹಚ್ಚೆಗಳನ್ನು ನೋಡಿಯೇ ನನಗೆ ಕೆಲಸ ಕೊಡಲಿಲ್ಲ ಎನ್ನುವುದು ಒಂದು ಕಡೆಯಾದರೆ, ನೀನಗೆ ಈ ಕೆಲಸದ ಅನುಭವವೇ ಇಲ್ಲ ಎನ್ನುತ್ತಿದ್ದಾರೆ. ಆದರೆ ಈ ಹಿಂದೆ ನನಗೆ ಕೆಲಸ ಮಾಡಿದ ಅನುಭವವಿದೆ, ಆದರೆ ಹೆಚ್ಚು ಕಾಲ ನಾನಲ್ಲಿ ಇರಲಿಲ್ಲ” ಎನ್ನುತ್ತಾಳೆ ಈಕೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ

20ನೇ ವಯಸ್ಸಿಗೆ ಶುರುವಾದ ಈಕೆಯ ಹಚ್ಚೆಯ ಹುಚ್ಚು 46ರಲ್ಲಿಯೂ ಮುಂದುವರೆದಿದೆ. ಕೆಲಸ ಹುಡುಕುವುದು ಅದರ ಪಾಡಿಗೆ ಅದು ನಡೆದಿರುತ್ತದೆ. ಜೊತಗೆ ವಾರಕ್ಕೆ 3 ಹೊಸ ಹಚ್ಚೆಗಳನ್ನು ಈಕೆ ಹಾಕಿಸಿಕೊಳ್ಳುತ್ತಿರುತ್ತಾಳೆ. ಮೂರು ಪದರಗಳ ಹಚ್ಚೆಗಳು ಆಕೆಯ ಮುಖದ ಮೇಲಿವೆ. ”ಈಗಾಗಲೇ ನಾನು ನೀಲಿಬಣ್ಣದಿಂದ ಆವೃತಗೊಂಡಿದ್ದೇನೆ. ನನ್ನ ಮುಖ ಸ್ಮರ್ಫ್​ (Smurf) ನಂತೆ ಕಾಣುತ್ತಿದೆ. ಜಗತ್ತಿನಲ್ಲಿಯೇ ಅತೀ ಹೆಚ್ಚು ಹಚ್ಚೆ ಹಾಕಿಸಿಕೊಂಡ ಮಹಿಳೆ ನಾನು. ಈ ಹುಚ್ಚನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಉತ್ಸಾಹದಿಂದ ಹೇಳುತ್ತಾಳೆ ಮೆಲಿಸ್ಸಾ.

ಏನಂತೀರಿ ನೀವಿದಕ್ಕೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:01 pm, Thu, 6 July 23

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ