AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ

Kanwar Yatra : ಈ ಶ್ರದ್ಧಾವಂತನಿಗೆ ಶಕ್ತಿಯನ್ನು ದಯಪಾಲಿಸು ಎಂದು ಕೆಲವರು. ಇಲ್ಲಿ ಇಬ್ಬರೂ ಹೈರಾಣಾಗುತ್ತಿದ್ದಾರೆ, ಇದರಿಂದ ಏನು ಪ್ರಯೋಜನ ಎಂದು ಕೆಲವರು. ಇದೆಲ್ಲವೂ ನಾಟಕ ಎಂದು ಒಂದಿಷ್ಟು ಜನ. ನೀವೇನಂತೀರಿ?

Viral Video: ಆಧುನಿಕ ಶ್ರವಣಕುಮಾರ; ತಾಯಿ ಮತ್ತು ಗಂಗಾಜಲ ಹೊತ್ತೊಯ್ದ ಯುವಕ
ಹರಿದ್ವಾರದ ಕನ್ವರ್ ಯಾತ್ರಾದಲ್ಲಿ ತಾಯಿ ಮತ್ತು ಗಂಗಾಜಲವನ್ನು ಹೊತ್ತೊಯ್ಯುತ್ತಿರುವ ಯುವಕ.
ಶ್ರೀದೇವಿ ಕಳಸದ
|

Updated on:Jul 05, 2023 | 2:42 PM

Share

Haridwar : ಶ್ರಾವಣ ಬಂತೆಂದರೆ ಎಲ್ಲೆಡೆ ಯಾತ್ರೆ ಜಾತ್ರೆಗಳ ಸಂಭ್ರಮ. ಹರಿದ್ವಾರದ ಕನ್ವರ್​ ಯಾತ್ರೆ (Kanwar Yatra) ಜುಲೈ 15ರವರೆಗೆ ನಡೆಯಲಿದೆ. ಈ ವರ್ಷ ಸುಮಾರು 2 ಮಿಲಿಯನ್​ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂಬ ಅಂದಾಜಿದೆ. ಈಗಾಗಲೇ ಈ ಯಾತ್ರೆಯಲ್ಲಿ ಭಾಗಿಯಾಗಿರುವ ಅನೇಕ ಭಕ್ತರ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಪೈಕಿ ಯುವಕನೊಬ್ಬ ತನ್ನ ತಾಯಿ ಮತ್ತು ಗಂಗಾಜಲವನ್ನು ಶ್ರವಣಕುಮಾರನಂತೆ ಹೆಗಲ ಮೇಲೆ ಹೊತ್ತು ನಡೆಯುತ್ತಿರುವ ವಿಡಿಯೋ ಗಮನ ಸೆಳೆದಿದೆ. ಟ್ವೀಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ಎಂದಿನಂತೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಅನ್ನು ಜು. 4ರಂದು ಎಎನ್​ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಈತನಕ ಸುಮಾರು 62,000 ಜನರು ಈ ವಿಡಿಯೋ ನೋಡಿದ್ದಾರೆ. 2,300ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಜನರು ಹರ್​ ಹರ್ ಮಹಾದೇವ, ಜೈ ಹೋ ಎಂದು ಜೈಕಾರ ಹೇಳಿದ್ದಾರೆ.

ಇದನ್ನೂ ಓದಿ : Viral Video: ಸ್ಪೈಡರ್​ಮ್ಯಾನ್​ನ ಮೂಗು ಮುರಿದ ಹುಡುಗಿಯ ಬಂಧನ

ಈ ಯಾತ್ರೆಯು ಉತ್ತರಾಖಂಡದ ಹರಿದ್ವಾರದಲ್ಲಿ ಶುರುವಾಗುತ್ತದೆ, ಗಂಗಾಜಲವನ್ನು ಸಂಗ್ರಹಿಸಿ ತಮ್ಮ ಊರಿನ ಶಿವದೇವಾಲಯಗಳಿಗೆ ಅರ್ಪಿಸುತ್ತಾರೆ. ಈ ಯಾತ್ರೆಗೆ ಬರುವವರು ಕಾಲ್ನಡಿಗೆಯಲ್ಲಿಯೇ ಸಾಗುತ್ತಾರೆ. ವಾಪಾಸು ತಮ್ಮ ಊರು, ರಾಜ್ಯಗಳಿಗೆ ಮರಳುವಾಗ ಗೌಮುಖ, ಗಂಗೋತ್ರಿ ಮತ್ತು ಬಿಹಾರದಲ್ಲಿರುವ ಸುಲ್ತಾನ್​ಗಂಜ್​ನಂಥ ಪ್ರಮುಖ ಸ್ಥಳಗಳನ್ನ ಇವರು ಸಂದರ್ಶಿಸುತ್ತಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:41 pm, Wed, 5 July 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ