AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಳ್​ಬೆಳಗ್ಗೆ ಬಿಳೀ ಮೊಟ್ಟೆ ಬದಲಾಗಿ ಗುಲ್​ಗುಲಾಬಿ ಮೊಟ್ಟೆ ತಿನ್ನಿ

Pink Egg: ಕೋಳಿಗಳು ಕಾಳು ತಿನ್ನೋದು ಬಿಟ್ಟು ಗುಲಾಬಿ ಹೂ ತಿನ್ನೋದಕ್ಕೆ ಶುರು ಮಾಡಿವೆಯೋ ಏನು? ಮೊಟ್ಟೆಗೆ ಗುಲಾಬಿ ಬಣ್ಣ ಬಂದಿದ್ದಾರೂ ಹೇಗೆ? ಹೋಗಲಿ ಈ ಮೊಟ್ಟೆಗಳು ಸಿಗೋದಾದರೂ ಎಲ್ಲಿ? ಇವುಗಳನ್ನು ತಿಂದರೆ ಏನು ಪ್ರಯೋಜನ? 

Viral Video: ಬೆಳ್​ಬೆಳಗ್ಗೆ ಬಿಳೀ ಮೊಟ್ಟೆ ಬದಲಾಗಿ ಗುಲ್​ಗುಲಾಬಿ ಮೊಟ್ಟೆ ತಿನ್ನಿ
ಗುಲಾಬಿ ಮೊಟ್ಟೆ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 05, 2023 | 1:26 PM

Share

Egg : ವೆಜ್​ ಎಗ್​ ಆಯ್ತು, ವೇಗನ್ ಎಗ್​ ಆಯ್ತು, ಇದೀಗ ಪಿಂಕ್​ ಎಗ್​ (Pink Egg)! ಈ ಗುಲಾಬಿ ಮೊಟ್ಟೆ ಹೇಗೆ ಸೃಷ್ಟಿಯಾಯಿತು, ಇವುಗಳನ್ನು ತಿನ್ನಬಹುದಾ? ಇವು ಕೋಳಿಯದೇ ಮೊಟ್ಟೆಗಳಾ ಅಥವಾ…  ಇನ್ನುಮುಂದೆ  ಒಂದೊಂದಾಗಿ ಬಣ್ಣಬಣ್ಣದ ಮೊಟ್ಟೆಗಳು ಮಾರ್ಕೆಟ್​ಗೆ ಬರುತ್ತಾವಾ? ಒಳ್ಳೆಯದಾಯಿತು ಮಕ್ಕಳು ದಿನಾ ಬಿಳೀ ಮೊಟ್ಟೆ ತಿನ್ನೋದಕ್ಕೆ ರಗಳೆ ಮಾಡ್ತಿದ್ದವು. ಈ ಗುಲಾಬಿ ಮೊಟ್ಟೆ (Egg) ನೋಡಿದರೆ ಖಂಡಿತ ಖುಷಿಪಡ್ತಾವೆ. ನೋಡೋಣ ಈ ಮೊಟ್ಟೆಗಳು ಅಂಗಡಿಯಲ್ಲೋ ಅಥವಾ ಆನ್​ಲೈನ್​​ ಶಾಪಿಂಗ್​ನಲ್ಲೋ ಸಿಗಬಹುದು ಎಂದು ನೀವು ಹುಡುಕಲು ಹೊರಟಿರಬಹುದು. ಅದಕ್ಕಿಂಥ ಮೊದಲು ಒಮ್ಮೆ ಈ ವಿಡಿಯೋ ನೋಡಿಬಿಡಿ!

ಗೊತ್ತಾಯ್ತಾ ಗುಲಾಬಿ ಮೊಟ್ಟೆಯ ಹಿಂದಿನ ರಹಸ್ಯ! ಹೌದು Slurrp ಎಂಬ ಫೇಸ್​ಬುಕ್​ ಪುಟದಲ್ಲಿ ಈ ರೆಸಿಪಿ ಪೋಸ್ಟ್ ಮಾಡಲಾಗಿದೆ. ಬೆಳಗಿನ ತಿಂಡಿಗಾಗಿ ಮಕ್ಕಳಿಗೆ ಇದನ್ನು ಖಂಡಿತ ಕೊಡಬಹುದು. ಮಕ್ಕಳು ಈ ಗುಲಾಬಿ ಮೊಟ್ಟೆ ನೋಡಿ ಅಚ್ಚರಿಗೆ ಒಳಗಾಗ್ತಾರೆ. ಇದು ಪೌಷ್ಠಿಕ ಆಹಾರ ಕೂಡ ಎಂದಿದ್ದಾರೆ ಇದನ್ನು ಪೋಸ್ಟ್ ಮಾಡಿದ ಚೆಫ್ ಆ್ಯಲಿಸನ್.  ಈ ವಿಡಿಯೋ ಅನ್ನು ಈಗಾಗಲೇ 1 ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 1 ಸಾವಿರ ಜನರು ಇಷ್ಟಪಟ್ಟಿದ್ಧಾರೆ. ಸುಮಾರು 500 ಜನರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಉಸ್ತಾದ್​ ಸ್ಪೈಡರ್​​ಖಾನ್​; ಖಂಡಿತ ಇದು ಜಗತ್ತಿನ ಶಾಂತಿಗಾಗಿ ಅಲ್ಲ!

ಗುಲಾಬಿ ಮೊಟ್ಟೆ : ಮೂರು ಮಧ್ಯಮ ಗಾತ್ರದ ಕುದಿಸಿದ ಬೀಟ್​ರೂಟ್​. 6-7 ಮೊಟ್ಟೆಗಳು. ಚಿಟಿಕೆ ಮೆಣಸುಕಾಳಿನ ಪುಡಿ, ಉಪ್ಪು ಮತ್ತು ಒಂದೆರಡು ಎಸಳು ಈರುಳ್ಳಿ ಸೊಪ್ಪು. ಮಾಡುವ ವಿಧಾನ ಮೇಲಿನ ವಿಡಿಯೋದಲ್ಲಿ ಗಮನಿಸಿದ್ದೀರಿ.

ಅನೇಕರು ಈ ವಿಡಿಯೋ ನೋಡಿ ಇದು ಬಹಳ ಮಜವಾದ ಐಡಿಯಾ! ನನ್ನ ಮಕ್ಕಳಿಗೆ ಮಾಡಿಕೊಡುವೆ ಎಂದಿದ್ದಾರೆ ಅನೇಕರು. ಪಾರ್ಟಿ ಟೈಮ್​ ಅನ್ನು ಇದು ರಂಗೇರಿಸುತ್ತದೆ ಎಂದಿದ್ದಾರೆ ಕೆಲವರು. ಯಾರನ್ನಾದರೂ ಮೂರ್ಖರನ್ನಾಗಿಸಲು ಈ ಐಡಿಯಾ ಬಹಳ ಉತ್ತಮವಾಗಿದೆ ಎಂದಿದ್ದಾರೆ ಇನ್ನೂ ಕೆಲವರು. ನೀವೇನಂತೀರಿ?  ಬಣ್ಣಬಣ್ಣದ ತರಕಾರಿ ಮತ್ತು ಸೊಪ್ಪುಗಳನ್ನು ಬಳಸಿ ಹೀಗೇ ಬಣ್ಣಬಣ್ಣದ ಮೊಟ್ಟೆಗಳನ್ನು ಮಾಡಬಹುದಾ? ಯೋಚಿಸಿ ಮತ್ತು ಪ್ರಯೋಗ ಮಾಡಿನೋಡಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:25 pm, Wed, 5 July 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ