Viral: ಹಿಂದೂ ದೇವತೆಗಳನ್ನು ಜಪಾನಿಗರು ಪೂಜಿಸುತ್ತಿದ್ದಾರೋ, ಜಪಾನಿಗರ ದೇವತೆಗಳನ್ನು ಹಿಂದೂಗಳು ಪೂಜಿಸುತ್ತಿದ್ದಾರೋ?
Deities : ಇವರು ನಮ್ಮವರು ಎಂದು ಅವರು, ಅವರು ನಮ್ಮವರೆಂದು ಇವರು. ಜಾಲತಾಣಿಗರೆಲ್ಲ ಎಷ್ಟೇ ಕೂಗಾಡಲಿ ಏನೇ ಹಾರಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲವೆಂದು ದೇವಾನುದೇವತೆಗಳೆಲ್ಲ ಸಂಪೂರ್ಣ ಧ್ಯಾನಸ್ಥ. ನೋಡಿ 10 ದೇವತೆಗಳನ್ನು.
Indian Deities : ಸರಸ್ವತಿ, ಲಕ್ಷ್ಮೀ, ಗಣಪತಿ, ಇಂದ್ರ, ವಿಷ್ಣು, ಶಿವ, ಅಗ್ನಿ, ಬ್ರಹ್ಮ, ಯಮ, ಕುಬೇರ ಇವರೆಲ್ಲರೂ ಜಪಾನ್ ಪ್ರವಾಸಕ್ಕೆ (Japan Trip) ಹೋಗಿದ್ದಾರೆಯೇ? ಜಪಾನಿಗೆ ಹೋದಮೇಲೆ ಜಪಾನಿಗರಂತೆಯೇ ಇರಬೇಕಲ್ಲ, ವೇಷಭೂಷಣದ ಜೊತೆ ಹೆಸರುಗಳನ್ನೂ ಬದಲಾಯಿಸಿಕೊಂಡುಬಿಟ್ಟರೆ? ಹೀಗೇ ಆದರೆ ಭಾರತೀಯರು ಇನ್ನು ಯಾರನ್ನು ಪೂಜಿಸಬೇಕು? ಸಮಾಧಾನ, ಗಾಬರಿಗೊಳ್ಳುವಂಥದ್ದೇನೂ ಸಂಭವಿಸಿಲ್ಲ. ಜಪಾನಿನಲ್ಲಿ ಪೂಜಿಸಲ್ಪಡುವ ಹಿಂದೂ ದೇವತೆಗಳು ಎಂಬ ಶೀರ್ಷಿಕೆಯಡಿ ಹಿಂದೂ ದೇವತೆಗಳನ್ನೇ ಹೋಲುವ ಜಪಾನಿ ದೇವತೆಗಳ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
10. Bhagwan Ganesh as Kangiten pic.twitter.com/I0XMcPYpT6
ಇದನ್ನೂ ಓದಿ— Vertigo_Warrior (@VertigoWarrior) July 4, 2023
ಮೇಲಿನ ಟ್ವೀಟ್ನಲ್ಲಿ ಇಂದ್ರ/ಟೈಶಕುಟೆನ್ (Indra as Taishakuten). ನಂತರ ಗಣೇಶ/ಕಂಗೈಟೆನ್ (Ganesh as Kangiten). ಈತನಕ ಈ ಎಲ್ಲ ಇಪ್ಪತ್ತೂ ದೇವತೆಗಳನ್ನು ಸುಮಾರು 1 ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರಲ್ಲದೆ ತಮ್ಮತಮ್ಮೊಳಗೆ ಎರಡೂ ದೇಶಗಳ ಪುರಾಣಕಾಲ, ಧರ್ಮ ಮತ್ತು ಇತಿಹಾಸದ ಕುರಿತು ಚರ್ಚಿಸುತ್ತಿದ್ದಾರೆ. ಅನೇಕರು ಸಾಮ್ಯವನ್ನು ಕಂಡು ಅಚ್ಚರಿ ಪಡುತ್ತಿದ್ದಾರೆ.
7. Yama Dev as Emmaten pic.twitter.com/E8rPRjsgQc
— Vertigo_Warrior (@VertigoWarrior) July 4, 2023
ಈ ಮೇಲಿನ ಚಿತ್ರದಲ್ಲಿರುವವರು ಬ್ರಹ್ಮ/ಬೊಂಟೆನ್ (Yama as Bonten) ನಂತರದ ಚಿತ್ರದಲ್ಲಿ ಯಮ/ಎಮ್ಮಟೆನ್ (Yama Dev as Emmaten). ಪ್ರತೀ ಹೆಸರುಗಳಲ್ಲಿಯೂ Ten ಎಂಬುದರಿಂದ ಮುಕ್ತಾಯವಾಗಿದೆಯಲ್ಲ? ಎಂದು ನೆಟ್ಟಿಗರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
5. Agni Dev as Katen pic.twitter.com/R5ikd7pqGA
— Vertigo_Warrior (@VertigoWarrior) July 4, 2023
ಲಕ್ಷ್ಮೀ/ಕಿಚಿಜೊಟೆನ್ (Lakshmi as KichijotenAgni) ಅಗ್ನಿ/ಕಟೆನ್ (Agni as Katen) ಈ ಮೇಲಿನ ಚಿತ್ರಗಳಲ್ಲಿ ಇದ್ದಾರೆ. ಓಹೋ ಈ ಟ್ವೀಟ್ ಯಶಸ್ವಿಯಾಗಿ ಹರಿದಾಡುತ್ತಿದೆ ಹಾಗಿದ್ದರೆ! ಎಂದು ಅನೇಕ ಟ್ವೀಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಈ 10 ಜಪಾನೀ ದೇವತೆಗಳು ಭಾರತದಲ್ಲಿ ಪೂಜಿಸಲ್ಪಡುತ್ತಿವೆ! ಹೌದು ತಾನೆ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.
2. Bhagwan Shiv as Daikokuten pic.twitter.com/kq0tVejQ6R
— Vertigo_Warrior (@VertigoWarrior) July 4, 2023
ಈ ಮೇಲಿನ ಚಿತ್ರಗಳಲ್ಲಿರುವವರು ಸರಸ್ವತಿ/ಬೆಂಝಾಯ್ಟೆನ್ (Saraswati as Benzaiten). ನಂತರ ಶಿವ/ಡೈಕೊಕುಟೆನ್ (Shiv as Daikokuten) ಬೌದ್ಧಧರ್ಮವು ಮೊದಲು ಹುಟ್ಟಿದ್ದು ಭಾರತದಲ್ಲಿ. ಜಪಾನ್‌ನಲ್ಲಿ ಹಿಂದೂ ಧರ್ಮವನ್ನು ಶೇ 1ರಷ್ಟು ಜನ ಆಚರಿಸುತ್ತಾರೆ. ಇಲ್ಲಿ ಗುರುತಿಸಲಾಗಿರುವ ದೇವತೆಗಳು ಜಪಾನಿನ ಬೌದ್ಧ ಸಂಸ್ಕೃತಿಯ ಭಾಗ. ಕೆಲ ಜಪಾನೀ ಬೌದ್ಧ ನಂಬಿಕೆಗಳು ಮತ್ತು ಸಂಪ್ರದಾಯಗಳು ಹಿಂದೂ ಧರ್ಮದಿಂದ ಪ್ರೇರಿತವಾಗಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ.
3. Bhagwan Vishnu as Naraenten pic.twitter.com/RifRn4AwQd
— Vertigo_Warrior (@VertigoWarrior) July 4, 2023
ವಿಷ್ಣು/ನಾರಾಯೆಂಟೆನ್ (Vishnu as Naraenten). ಹೇಳು ನಾರಾಯೆಂಟೆನ್ ನಿಮ್ಮ ಮೂಲ ಯಾವುದು? ಜಪಾನವೋ ಭಾರತವೋ? ಇದೆಲ್ಲವನ್ನು ಹೇಳಲು ಈ ದೇವಾನುದೇವತೆಗಳಂತೂ ಪ್ರತ್ಯಕ್ಷಗೊಳ್ಳುವುದಿಲ್ಲ. ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:39 pm, Wed, 5 July 23