AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸ್ಪೈಡರ್​ಮ್ಯಾನ್​ನ ಮೂಗು ಮುರಿದ ಹುಡುಗಿಯ ಬಂಧನ

Spider Man : ಈ ಘಟನೆ ಅಮೆರಿದಲ್ಲಿ ನಡೆದಿದೆ. ಇವನು ನಿಜವಾದ ಸ್ಪೈಡರ್​ಮ್ಯಾನ್​ ಹೌದೆ? ಹೀಗೆಂದು ಪರೀಕ್ಷಿಸಲು ಹೋದಳೇ ಈ ಹುಡುಗಿ? ಪೋಷಕರು ಹದಿಹರೆಯದ ಮಕ್ಕಳ ಮೇಲೆ ಬಹಳಷ್ಟು ನಿಗಾ ಇಡಬೇಕೆನ್ನುತ್ತಿರುವ ನೆಟ್ಟಿಗರು.

Viral Video: ಸ್ಪೈಡರ್​ಮ್ಯಾನ್​ನ ಮೂಗು ಮುರಿದ ಹುಡುಗಿಯ ಬಂಧನ
ಸ್ಪೈಡರ್​​ಮ್ಯಾನ್​ ವೇಷ ಧರಿಸಿದ ಹುಡುಗ ಮತ್ತು ಅವನನ್ನು ಸುತ್ತುವರಿದ ದುಷ್ಕರ್ಮಿಗಳು, ಆತನ ಮೂಗು ಮುರಿದ ಹುಡುಗಿ.
ಶ್ರೀದೇವಿ ಕಳಸದ
|

Updated on: Jul 05, 2023 | 11:07 AM

Share

America : ಸ್ಪೈಡರ್​ ಮ್ಯಾನ್​ (Spider Man) ವೇಷ ಧರಿಸಿ ಅಮೆರಿಕದ ಪಾರ್ಕ್​ನಲ್ಲಿ ಓಡಾಡಿಕೊಂಡಿದ್ದ 15 ವರ್ಷದ ಹುಡುಗನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಆಘಾತಕಾರಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಗುಂಪಿನ ಹುಡುಗಿಯೊಬ್ಬಳು ವೇಷಧಾರಿ ಸ್ಪೈಡರ್​ಮ್ಯಾನ್​ನ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಆತನ ಮೂಗು ಮುರಿದಿದೆ. ಹಲ್ಲೆಗೊಳಗಾದ ಈತನ ಹೆಸರು ಐಡಿನ್ ಪೆಡೋನ್. ಇವನು ಅಮೆರಿಕದ ಹಡ್ಸನ್ ಫಾಲ್ಸ್‌ನ ಶಾಲಾ ವಿದ್ಯಾರ್ಥಿಯಾಗಿದ್ಧಾನೆ ಎಂದು ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಒಂದಿಬ್ಬರು ಓರಗೆಯ ಹುಡುಗರು ಈ ವೇಷಧಾರಿಯ ಬಳಿ ಬಂದು ಏನನ್ನೋ ಕೇಳುತ್ತಾರೆ. ಆ ನಂತರ ಅಲ್ಲಿಗೆ ಬಂದ ಇದೇ ಗುಂಪಿನ ಹುಡುಗಿಯು ಮೊದಲು ಅವನ ಮುಖಕ್ಕೆ ಹೊಡೆಯುತ್ತಾಳೆ. ಆಗ ಆ ಹೊಡೆತದಿಂದ ಐಡಿನ್ ತಪ್ಪಿಸಿಕೊಳ್ಳುತ್ತಾನೆ. ಆಗ ಆಕೆ ಮತ್ತೆ ಬಲವಾಗಿ ಅವನ ಮೂಗಿಗೆ ನೇರ ಗುದ್ದುತ್ತಾಳೆ. ನೋವಿನಿಂದ ಆತ ಒದ್ಧಾಡುತ್ತ ಮುಖಕ್ಕೆ ಹಾಕಿದ ಮಾಸ್ಕ್​ ಅನ್ನು ತೆಗೆಯುತ್ತಾನೆ. ಮೂಗು ಮುರಿದು ರಕ್ತ ಬಳಬಳನೆ ಸೋರುತ್ತಿರುತ್ತದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಟೇಕ್​ಆಫ್​ನಲ್ಲಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಲಂಡನ್ ಭೂಪ

ಹದಿಹರೆಯದ ಗುಂಪೊಂದು ಮೋಜಿಗಾಗಿ ನನ್ನ ಮಗನನ್ನು ಈ ಅವಸ್ಥೆಗೆ ತಂದಿದೆ ಎಂದು ಐಡಿನ್​ನ ತಾಯಿ ಶೆಲ್ಲೀ ಪೆಡೋನ್​ ಫೇಸ್​ಬುಕ್​ನಲ್ಲಿ ಈ ಘಟನೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕಕ್ಕೆ ಒಳಗಾಗಿದ್ದಾರೆ. ”ಪೋಷಕರು ತಮ್ಮ ಮಕ್ಕಳ ವರ್ತನೆಯನ್ನು ಗಮನಿಸುತ್ತಿದ್ದಾರೆಯೇ? ಅವರನ್ನು ಪ್ರಭಾವಿಸುತ್ತಿರುವ ಮನೋರಂಜನೆಯ ಅಂಶಗಳು ಏನು ಎನ್ನುವುದನ್ನು ತಿಳಿದಿದ್ದಾರೆಯೇ? ವಿಶೇಷವಾಗಿ ಹೈಸ್ಕೂಲಿಗೆ ಹೋಗುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಾಗಿ ನಿಗಾ ವಹಿಸಬೇಕು” ಎಂದು ನೆಟ್ಟಿಗರು ಕಾಳಜಿಯಿಂದ ವಿನಂತಿಸಿಕೊಂಡಿದ್ಧಾರೆ.

ಇದನನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ