Viral: ‘ನನ್ನ ಮಗಳನ್ನು ಬೆದರಿಸಲು ಎಷ್ಟು ಧೈರ್ಯ ನಿನಗೆ?’ ವಿಮಾನದೊಳಗೆ ಜಗಳ

Fight in Flight : ಮನುಷ್ಯ ಭೂಮಿಯ ಮೇಲಿದ್ದರೂ ಅಷ್ಟೇ. ಆಕಾಶದಲ್ಲಿ ಹಾರಾಡುತ್ತಿದ್ದರೂ ಅಷ್ಟೇ. ನೀರ ಮೇಲೆ ತೇಲುತ್ತಿದ್ದರೂ ಅಷ್ಟೇ. ಕೆಲವೊಂದು ವಿಷಯಕ್ಕೆ ತಾಳ್ಮೆ ಕಳೆದುಕೊಳ್ಳುತ್ತಾನೆ. ಕಾರಣಗಳು ನೂರಾರು. ನೋಡಿ ಈ ವಿಡಿಯೋ.

Viral: 'ನನ್ನ ಮಗಳನ್ನು ಬೆದರಿಸಲು ಎಷ್ಟು ಧೈರ್ಯ ನಿನಗೆ?' ವಿಮಾನದೊಳಗೆ ಜಗಳ
ವಿಸ್ತಾರಾ ವಿಮಾನದಲ್ಲಿ ಕ್ಯಾಬಿನ್​ ಸಿಬ್ಬಂದಿಯು ಪ್ರಯಾಣಿಕರ ಜಗಳವನ್ನು ಬಗೆಹರಿಸುತ್ತಿರುವ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Jul 04, 2023 | 6:47 PM

Mid Air Fight : ವಿಮಾನದಲ್ಲಿ ಚಿತ್ರ ಬಿಡಿಸಿದ್ದನ್ನು ನೋಡಿದ್ದೀರಿ. ಪ್ರೇಮ ನಿವೇದನೆ ಮಾಡಿಕೊಂಡಿದ್ದನ್ನೂ ನೋಡಿದ್ದೀರಿ. ಆದರೆ ವಿಮಾನದಲ್ಲಿ ಜಗಳವಾಡಿದ್ದನ್ನು ನೀವೀಗ ನೋಡಬೇಕಾಗಿದೆ. ಅಂದರೆ ವಿಮಾನದಲ್ಲಿ ಪ್ರಯಾಣಿಕರು ಪರಸ್ಪರ ಜಗಳಕ್ಕಿಳಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಜೂ. 25ರಂದು ಮುಂಬೈನಿಂದ ಡೆಹ್ರಾಡೂನ್​​​ಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನದಲ್ಲಿ (Vistara Airlines) ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ತನ್ನ ಪಕ್ಕದ ಸೀಟಿನಲ್ಲಿ ಕುಳಿತ ಪ್ರಯಾಣಿಕನಿಗೆ, ‘ನನ್ನ ಮಗಳನ್ನು ಬೆದರಿಸಲು ನಿನಗೆಷ್ಟು ಧೈರ್ಯ’ ಎಂದು ದಬಾಯಿಸುತ್ತಿದ್ದಾನೆ. ಅವರಿಬ್ಬರ ಜಗಳ ತಾರಕಕ್ಕೇರಿ ಅಕ್ಕಪಕ್ಕದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಕ್ಯಾಬಿನ್​ ಸಿಬ್ಬಂದಿ ಮಧ್ಯಪ್ರವೇಶಿಸಿ ಕ್ಯಾಪ್ಟನ್​ ಸಹಾಯವನ್ನು ಕೋರಿದರು. ಈ ಕೆಳಗಿನ ವಿಡಿಯೋದಲ್ಲಿರುವ ದೃಶ್ಯವನ್ನು ಗಮನಿಸಿ.

ನಂತರ ಕ್ಯಾಬಿನ್​ ಸಿಬ್ಬಂದಿಯ ಮಧ್ಯಸ್ಥಿಕೆಯಿಂದ ಜಗಳವು ಸಂಪನ್ನಗೊಂಡು ಪ್ರಯಾಣವು ಶಾಂತರೀತಿಯಲ್ಲಿ ಸಾಗಿತು. ಆ ನಂತರ ಈ ಘಟನೆಯ ಕುರಿತು ವಿಸ್ತಾರಾ ಫ್ಲೈಟ್​ ಸ್ಪಷ್ಟನೆಯನ್ನು ನೀಡಿತು. ಈ ಟ್ವೀಟ್​ ನೋಡಿದ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಜಗಳದಿಂದಾಗಿ ನೊಂದವರು ತಕ್ಷಣವೇ IPC 354 ಪ್ರಕಾರ ಕೇಸ್​ ಹಾಕಬಹುದಿತ್ತು. ಅಪರಾಧಿಗೆ 1ರಿಂದ 5 ವರ್ಷಗಳವರೆಗೆ ಶಿಕ್ಷೆ ಕಾದಿರುತ್ತಿತ್ತು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ”ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ” ಹೆಂಡತಿ ಗಂಡನಿಗೆ ಹೇಳಿದಾಗ…

ಇಷ್ಟು ಗಂಭೀರ ಜಗಳದ ನಡುವೆಯೂ ನೆಟ್ಟಿಗರೊಬ್ಬರಿಗೆ ತಮಾಷೆ ಮಾಡಬೇಕು ಎನ್ನಿಸಿದೆ! ಈ ವಿಡಿಯೋದಲ್ಲಿ ಮೊದಲ ಸಲ ಕೇಳಿಬಂದ ಹೆಣ್ಣಿನ ಧ್ವನಿ ಐಶ್ವರ್ಯಾ ರೈ ಧ್ವನಿಯಂತಿದೆ ಎಂದ್ದಾರೆ. ಎಲ್ಲಿ ಹೋದರೂ ಈ ಮನುಷ್ಯರ ಜಗಳಗಳಿಗೆ ಕೊನೆಯೇ ಇಲ್ಲವೆ? ಸ್ವಲ್ಪ ತಾಳ್ಮೆ ತಂದುಕೊಂಡರೆ ಪ್ರಯಾಣ ಎಷ್ಟೊಂದು ಸುಖಕರವಾಗಿರುತ್ತದೆ ಎಂದಿದ್ದಾರೆ ಅನೇಕರು. ಒಂದಿಬ್ಬರಿಂದಾಗಿ ಅನೇಕ ಪ್ರಯಾಣಿಕರ ಮೂಡ್​ ಹಾಳಾಗುತ್ತದೆ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ