Viral: ‘ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ’ ಹೆಂಡತಿ ಗಂಡನಿಗೆ ಹೇಳಿದಾಗ…

Husband and Wife : ''ನೀನು ಕಳೆದುಕೊಂಡಿದ್ದನ್ನೆಲ್ಲ ಪಡೆಯುತ್ತೀ'' ಆಹಾ! ಈ ಒಂದು ವಾಕ್ಯ ನನ್ನನ್ನು ಕಾಡುತ್ತಿದೆ ಮತ್ತು ಭರವಸೆಯನ್ನು ಹುಟ್ಟುಹಾಕುತ್ತಿದೆ ಎಂದಿದ್ಧಾರೆ ಒಬ್ಬ ಟ್ವೀಟಿಗರು. ಈತನಕ 7.8 ಮಿಲಿಯನ್ ಜನರು ಈ ಟ್ವೀಟ್ ನೋಡಿದ್ದಾರೆ.

Viral: 'ಚಿಕ್ಕವಳಿದ್ದಾಗ ಬಾರ್ಬಿಯನ್ನು ಕಳೆದುಕೊಂಡೆ' ಹೆಂಡತಿ ಗಂಡನಿಗೆ ಹೇಳಿದಾಗ...
ಗಂಡ ಹೆಂಡತಿಗೆ ತಂದುಕೊಟ್ಟ ಬಾರ್ಬಿ
Follow us
ಶ್ರೀದೇವಿ ಕಳಸದ
|

Updated on:Jul 04, 2023 | 6:18 PM

Barbie : ನಗರದ ಪುಟ್ಟ ಹೆಣ್ಣುಮಕ್ಕಳಿಗೆ ಬಾರ್ಬಿ (Barbie) ಎಂದರೆ ಆಪ್ತಗೆಳತಿಯಿದ್ದಂತೆ. ಆಕೆ 24 ಗಂಟೆಗಳ ಕಾಲವೂ ತನ್ನೊಂದಿಗೇ ಇರಬೇಕೆನ್ನುವ ಇಚ್ಛೆ. ಹೀಗಿದ್ದಾಗ ಆಕೆ ಇದ್ದಕ್ಕಿದ್ದ ಹಾಕೆ ಕಣ್ಮರೆಯಾದರೆ? ಆ ಮಕ್ಕಳಿಗಾಗುವ ದುಃಖ ಸಣ್ಣದಲ್ಲ. ಜೀವನಪರ್ಯಂತೆ ಅದು ಅವುಗಳ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ತಾನು ಚಿಕ್ಕವಳಿದ್ಧಾಗ ನನ್ನ ಬಾರ್ಬಿಯನ್ನು ಕಳೆದುಕೊಂಡೆ ಎಂದು ತನ್ನ ಗಂಡನಿಗೆ ಹೇಳಿದ್ದಾಳೆ. ಆಗ ಆತ, ನೀನೀಗ ದೊಡ್ಡವಳಾಗಿದ್ದೀಯಲ್ಲವೇ? ಎಂದು ಪ್ರಶ್ನಿಸಿಲ್ಲ. ಚಿಕ್ಕಮಗುವಿನಂತೆ ನಿನಗೆ ಈಗಲೂ ಬಾರ್ಬೀ ಬೇಕಾ? ಎಂದು ಕೇಳಿಲ್ಲ. ಬದಲಾಗಿ ಹೊಸ ಬಾರ್ಬಿಯೊಂದನ್ನು ಆಕೆಗೆ ಉಡುಗೊರೆಯಾಗಿ ನೀಡಿದ್ದಾನೆ.

“ನನ್ನ ಪ್ರೀತಿಯ ಹೆಂಡತಿ ಆಯಿಷಾ, ಬದುಕಿನಲ್ಲಿ ನೀನು ಎಂಥ ಚಿಕ್ಕಪುಟ್ಟದ್ದನ್ನು ಎಷ್ಟೋ ವರ್ಷಗಳ ಹಿಂದೆ ಕಳೆದುಕೊಂಡಿದ್ದರೂ ಅದು ನಿನಗೆ ವಾಪಾಸು ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯನ್ನು ನಾನು ಕೊಡುತ್ತೇನೆ. ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. – ಇಂತಿ ನಿನ್ನ ಗಂಡ.” ಇದು ಇಲ್ಲಿರುವ ಪತ್ರದ ಸಾರಾಂಶ. ಜೂ. 29 ರಂದು ಮಾಡಿದ ಈ ಟ್ವೀಟ್​ ಇದೀಗ 7.8 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ. ಅನೇಕರು ಬಾರ್ಬಿಯೊಂದಿಗಿನ ತಮ್ಮ ನೆನಪುಗಳನ್ನು ಕೆದಕುತ್ತಿದ್ದಾರೆ.

ಇದನ್ನೂ ಓದಿ : Viral: ಬೀದಿನಾಯಿ ಬೆಕ್ಕುಗಳಿಗೆ ತಾತ್ಕಾಲಿಕವಾದರೂ ಆಶ್ರಯ ಕೊಡೋಣ; ರತನ್​ ಟಾಟಾ

ನಾನು ಬಾರ್ಬಿಯ ಅಪ್ಪಟ ಅಭಿಮಾನಿ. ಈತನಕ ಎಲ್ಲಾ ರೀತಿಯ ಬಾರ್ಬಿಯ ಸಂಗ್ರಹ ಮತ್ತು ನೆನಪುಗಳು ನನ್ನಲ್ಲಿ ಬೆಚ್ಚಗೆ ಇವೆ. ಆದರೆ ಈ ಟ್ವೀಟ್ ನನ್ನನ್ನು ಭಾವುಕಗೊಳಿಸಿದೆ ಎಂದು ಒಬ್ಬರು ಹೇಳಿದ್ದಾರೆ. ”ನೀನು ಕಳೆದುಕೊಂಡಿದ್ದನ್ನೆಲ್ಲ ಪಡೆಯುತ್ತೀ” ಆಹಾ ಈ ಒಂದು ವಾಕ್ಯ ನನ್ನನ್ನು ಬಹಳ ಇಷ್ಟವಾಯಿತು ಮತ್ತು ಕಾಡುತ್ತಿದೆ, ನೀವು ಅದೃಷ್ಟವಂತರು ಎಂದಿದ್ಧಾರೆ ಮತ್ತೊಬ್ಬರು. ಇಂಥ ಚಿಕ್ಕಚಿಕ್ಕ ಸಂಗತಿಗಳಡಿಯೇ ಬಾಂಧವ್ಯ ಎನ್ನುವುದು ಗಟ್ಟಿಯಾಗಿ ನಿಂತಿರುತ್ತದೆ. ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:15 pm, Tue, 4 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ