Viral: ಬೀದಿನಾಯಿ ಬೆಕ್ಕುಗಳಿಗೆ ತಾತ್ಕಾಲಿಕವಾದರೂ ಆಶ್ರಯ ಕೊಡೋಣ; ರತನ್​ ಟಾಟಾ

Ratan Tata : ''ನಿಮ್ಮ ವಾಹನಗಳಡಿ ಬೀದಿನಾಯಿ ಬೆಕ್ಕುಗಳು ಮಲಗಿರುತ್ತವೆ. ಚಲಿಸುವ ಮುನ್ನ ಒಮ್ಮೆ ಪರಿಶೀಲಿಸಿ, ಇಲ್ಲವಾದರೆ ಅವು ಅಂಗವಿಕಲವಾಗಬಹುದು ಮತ್ತು ಜೀವವನ್ನೂ ಕಳೆದುಕೊಳ್ಳಬಹುದು'' ರತನ್​ ಟಾಟಾ, ಉದ್ಯಮಿ.

Viral: ಬೀದಿನಾಯಿ ಬೆಕ್ಕುಗಳಿಗೆ ತಾತ್ಕಾಲಿಕವಾದರೂ ಆಶ್ರಯ ಕೊಡೋಣ; ರತನ್​ ಟಾಟಾ
ಪ್ರಾಣಿಪ್ರಿಯ ರತನ್ ಟಾಟಾ. ಸೌಜನ್ಯ : cartoq
Follow us
ಶ್ರೀದೇವಿ ಕಳಸದ
|

Updated on:Jul 04, 2023 | 5:24 PM

Monsoon : ನಮಗೆ ನಿಮಗೆ ಮತ್ತು ಸಾಕುಪ್ರಾಣಿಗಳಿಗೆ ಚಳಿಗಾಲ, ಮಳೆಗಾಲ ಮತ್ತು ಬೇಸಿಗೆಕಾಲಗಳಿಂದ ರಕ್ಷಿಸಿಕೊಳ್ಳಲು ಮನೆ ಇದೆ. ಆದರೆ ನೆಟ್ಟಗೆ ಒಂದು ಸೂರೂ ಇಲ್ಲದ ಮನುಷ್ಯರು ಮತ್ತು ಪ್ರಾಣಿಗಳು ಏನು ಮಾಡಬೇಕು? ತಾತ್ಕಾಲಿಕ ಸೂರುಗಳನ್ನು ಹುಡುಕಿಕೊಂಡು ಹೋಗಬೇಕು. ಹೀಗಿರುವಾಗ ಎಲ್ಲೆಂದರಲ್ಲಿ ಮಲಗುವ ಮತ್ತು ವಿಶ್ರಾಂತಿಗೆ ಒಡ್ಡಿಕೊಳ್ಳುವ ಈ ಜೀವಗಳು ಅರಿವಿಲ್ಲದೆಯೇ ಅಪಾಯಕ್ಕೆ ಒಡ್ಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇದೀಗ ವೈರಲ್ ಆಗಿರುವ ಈ ಇನ್​ಸ್ಟಾ ಪೋಸ್ಟ್​ ಗಮನಿಸಿ. ಖ್ಯಾತ ಉದ್ಯಮಿ ರತನ್​ ಟಾಟಾ (Ratan Tata) ವಾಹನ ಸವಾರರಿಗೆ ಈ ಕುರಿತು ಹೀಗೊಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Ratan Tata (@ratantata)

ಜು. 4ರಂದು ರತನ್​ ಟಾಟಾ Instagram ನಲ್ಲಿ ಹಂಚಿಕೊಂಡ ಈ ಪೋಸ್ಟ್​ನ ಸಾರಾಂಶ ಹೀಗಿದೆ; ಮತ್ತೆ ಮಳೆಗಾಲ ಬಂದಿದೆ. ಬೀದಿಬೆಕ್ಕುಗಳು, ನಾಯಿಗಳು ಕಾರಿನ ಕೆಳಗೆ ಆಶ್ರಯ ಪಡೆದುಕೊಂಡಿರುತ್ತವೆ. ದಿಕ್ಕೆಟ್ಟ ಪ್ರಾಣಿಗಳು ಗಾಯಗೊಳ್ಳದಂತೆ ಅಥವಾ ಜೀವ ಕಳೆದುಕೊಳ್ಳದಂತೆ ಜಾಗ್ರತೆಯಿಂದ ನೋಡಿಕೊಳ್ಳಿ, ಅದಕ್ಕಾಗಿ ನೀವು ಕಾರ್​ ಚಲಿಸುವ ಮುನ್ನ ಒಮ್ಮೆ ಮರೆಯದೇ ಕಾರಿನಡಿಯನ್ನು ಪರಿಶೀಲಿಸಿ. ಮಳೆಗಾಲದಲ್ಲಿಯಾದರೂ ನಾವೆಲ್ಲರೂ ಅವುಗಳಿಗೆ ತಾತ್ಕಾಲಿಕ ಆಶ್ರಯವನ್ನಾದರೂ ನೀಡಬಹುದು”.

ಇದನ್ನೂ ಓದಿ : Viral: ಅಮೆರಿಕದ ”ಫ್ರೆಂಡ್ಸ್” ಮೋನಿಕಾ ಮತ್ತು ಚಾಂಡ್ಲರ್ ಭಾರತಕ್ಕೆ ಏಕೆ ಬಂದಿದ್ದಾರೆ? 

ಟಾಟಾ ಅವರ ಹೃದಯಪೂರ್ವಕ ಪೋಸ್ಟ್​ ಅನ್ನು ನೋಡಿದ ನೆಟ್ಟಿಗರು ಅವರನ್ನು ಲೆಜೆಂಡ್​ ಎಂದು ಕರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭಾರತರತನ್​ಗೆ ಗೌರವ ಎಂದಿದ್ದಾರೆ ಒಬ್ಬರು. ರೆಸ್ಪೆಕ್ಟ್​ ಬಟನ್​ ಫಾರ್​ ದಿಸ್ ಟ್ರ್ಯೂ ಲೆಜೆಂಡ್ ಎಂದು ಇನ್ನೊಬ್ಬರು ಹೇಳಿದ್ದಾರೆ. ಧ್ವನಿ ಕಳೆದುಕೊಂಡ ಸಮಾಜವನ್ನು ಸಾಂಕೇತಿಸುವ ರತ್ನ ಇವರು, ಮಿಲಿಯನ್​ನಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ ಮತ್ತೊಬ್ಬರು. ಇಷ್ಟು ಸಹಾನುಭೂತಿ ತೋರಿದ್ದಕ್ಕೆ ನಿಮಗೆ ಧನ್ಯವಾದ ಸರ್ ಎಂದು ಅನೇಕರು ಈ ಪೋಸ್ಟ್​ ಅನ್ನು ಮರುಹಂಚಿಕೊಂಡಿದ್ದಾರೆ. ಇದಕ್ಕಾಗಿ ನೀವು ವಾಹನದ ಎಂಜಿನ್​ ಶುರು ಮಾಡಿದ ನಂತರ 20-30 ಸೆಕೆಂಡ್​ ಕಾಯುವುದು ಒಳ್ಳೆಯದು ಎಂಬ ಸಲಹೆ ನೀಡಿದ್ದಾರೆ ನೆಟ್ಟಿಗರೊಬ್ಬರು.

ನೀವೂ ಕೂಡ ಪ್ರಾಣಿಗಳಿಗಾಗಿ ಈ ನಡೆಯನ್ನು ಅನುಸರಿಸುತ್ತೀರಿ ಅಲ್ಲವೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:20 pm, Tue, 4 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ