AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ’; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು

Love Proposal : ಈ ಜೋಡಿಯ ಬದುಕಿನ ಮಹತ್ತರ ನಿರ್ಧಾರಕ್ಕೆ ದೇವರೇ ಸುಮ್ಮನಿದ್ದಾನೆ. ಆದರೆ ಅಂತರ್ಜಾಲದ 'ನೀತಿ ಶಿಕ್ಷಕರು' ಇಲ್ಲಿಯೂ ಬಂದು ಈ ಸುಂದರ ಕ್ಷಣಗಳ ನಡುವೆ ದೂಳೆಬ್ಬಿಸಿ ಹೋಗಿದ್ದಾರೆ. ಏನಂತೀರಿ ನೀವು ಇದಕ್ಕೆ?

Viral Video: 'ಕೇದಾರನಾಥನೇ, ನಮ್ಮ ಪ್ರೀತಿಗೆ ನೀನೇ ಸಾಕ್ಷಿ'; ದಾಳಿಯಿಟ್ಟ ಸಂಸ್ಕೃತಿ ರಕ್ಷಕರು
ಕೇದಾರನಾಥ ದೇವಸ್ಥಾನದ ಎದುರು ಸಂಗಾಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡ ಯೂಟ್ಯೂಬರ್​​
Follow us
ಶ್ರೀದೇವಿ ಕಳಸದ
|

Updated on:Jul 04, 2023 | 3:13 PM

Kedarnath : ಕೇದಾರನಾಥ ದೇವಸ್ಥಾನ ಮಂಜಿನಿಂದ ಆವೃತವಾಗಿದೆ. ಅಂಗಳ ಒದ್ದೆಯಾಗಿದೆ. ಅಲ್ಲಿದ್ದವರೆಲ್ಲ ದರ್ಶನ ಪಡೆಯುವಲ್ಲಿ ನಿರತರಾಗಿದ್ದಾರೆ. ಈ ಎಲ್ಲದರ ಮಧ್ಯೆ ಹಳದಿ ಉಡುಪು (Yellow Dress) ಧರಿಸಿದ ಜೋಡಿಯೊಂದು ಗಮನ ಸೆಳೆಯುವಂತಿದೆ. ಇಬ್ಬರೂ ಕೈಮುಗಿದು ದೇವರ ಬಳಿ ಏನನ್ನೋ ಕೇಳಿಕೊಳ್ಳುತ್ತಿದ್ಧಾರೆ. ಅಷ್ಟರಲ್ಲಿ ಆ ಯುವತಿ ಹಿಂದೆ ಕೈಸನ್ನೆ ಮಾಡುತ್ತಾಳೆ. ಅವಳ ಕೈಗೆ ಪುಟ್ಟ ಡಬ್ಬಿಯೊಂದನ್ನು ಯಾರೋ ರವಾನಿಸುತ್ತಾರೆ. ಮುಂದೇನಾಗುತ್ತದೆ ಎಂದು ನೀವೇ ಈ ವಿಡಿಯೋದಲ್ಲಿ ನೋಡಿಬಿಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Vishakha Fulsunge || India?? (@ridergirlvishakha)

ಅವನು ದೇವರ ಬಳಿ ತನ್ನ ಪ್ರೇಮ ಫಲಿಸುವಂತೆ ಬೇಡಿಕೊಳ್ಳುತ್ತಿದ್ದನೋ ಏನೋ, ಅವ ತಿರುಗಿ ಕಣ್ಣು ಬಿಡುವುದರೊಳಗೆ ಅವನ ಹುಡುಗಿ (Vishakha Fulsunge) ಮಂಡಿಯೂರಿ ಕೈಯಲ್ಲಿ ಉಂಗುರವನ್ನು ಹಿಡಿದು ಪ್ರತ್ಯಕ್ಷ! ಅವನಿಗೆ ಅಚ್ಚರಿ ಪುಳಕ ಎಲ್ಲವೂ ಏಕಕಾಲಕ್ಕೆ! ”ನನ್ನ ಕನಸು ನನಸಾದ ದಿನವಿದು. ನಾನು ಒಂದು ತಿಂಗಳಿನಿಂದ ಈ ದಿನಕ್ಕಾಗಿ ತಯಾರಿ ನಡೆಸಿದ್ದೆ. ಸಮುದ್ರ ಮಟ್ಟದಿಂದ 11,750 ಅಡಿ ಎತ್ತರದಲ್ಲಿರುವ ಕೇದಾರನಾಥನ ಸನ್ನಿಧಿಯಲ್ಲಿ ನಾನು ಮೊಣಕಾಲುಗಳನ್ನೂರಿ ನನ್ನ ಸಂಗಾತಿಯೆದುರು ಅಧಿಕೃತವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದೇನೆ. ಈ ಸ್ಥಳವು ಶುದ್ಧವೂ ಮತ್ತು ಮಾಂತ್ರಿಕತೆಯಿಂದ ಕೂಡಿದೆ. ಬೋಲೇನಾಥನ ಆಶೀರ್ವಾದದೊಂದಿಗೆ” ಎಂದು ಯೂಟ್ಯೂಬರ್ ಆಗಿರುವ ಈ ಯುವತಿ ತನ್ನ ಪೋಸ್ಟ್​ಗೆ ಒಕ್ಕಣೆ ಬರೆದುಕೊಂಡಿದ್ದಾಳೆ.

ಇದನ್ನೂ ಓದಿ : Viral: ಅಮೆರಿಕದ ”ಫ್ರೆಂಡ್ಸ್”; ಮೋನಿಕಾ ಮತ್ತು ಚಾಂಡ್ಲರ್ ಭಾರತಕ್ಕೆ ಏಕೆ ಬಂದಿದ್ದಾರೆ?

ಈ ಜೋಡಿ ಹೀಗೆ ಸಾರ್ಥಕ ಕ್ಷಣಗಳಲ್ಲಿ ಸಂಭ್ರಮಿಸಿದರೆ, ನೆಟ್ಟಿಗರು ಮಾತ್ರ ಮನಬಂದಂತೆ ಪ್ರತಿಕ್ರಿಯಿಸಿದ್ದಾರೆ. ಇಂಥ ಚಟುವಟಿಕೆಗಳಿಂದಾಗಿ ಕೇದಾರನಾಥ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ. ನಾನು ಕೇದಾರನಾಥದಿಂದಲೇ ಇಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ಎಲ್ಲಾ ಮುಖ್ಯ ದೇವಾಲಯಗಳಲ್ಲಿ ಸ್ಮಾರ್ಟ್​​​ಫೋನ್​ ನಿಷೇಧಿಸುವುದು ಇದೇ ಕಾರಣಕ್ಕೇ. 20 ಕಿ.ಮೀ ಅಂತರದಲ್ಲಿ ಬೇಸಿಕ್​ ಮೊಬೈಲ್​ ಬಳಸಲಷ್ಟೇ ಅವಕಾಶ ಕೊಟ್ಟರೆ ಜನಸಂದಣಿ ಸಮಸ್ಯೆಯನ್ನು ನಿವಾರಿಸಬಹುದು ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಮಸ್ಕ್ ಚಾಟ್ ಭಂಡಾರ್, ಮೆಸ್ಸೀಸ್​ ಆಂಧ್ರಾ ಮೆಸ್, ಆಸ್ಕರ್​ ಚಾಯ್​ವಾಲಾ; ಬಂದರು ನೋಡಿ ಝೊಮ್ಯಾಟೋ ಬಾಣಸಿಗರು

ಈ ವಿಡಿಯೋದಲ್ಲಿ ನನಗೇನೂ ತಪ್ಪು ಕಾಣಲಿಲ್ಲ, ಬದಲಾಗಿ ಇದು ಬಹಳ ಸುಂದರವಾಗಿದ ಎನ್ನಿಸಿತು. ಭಾರತದ ದೇವಾಲಯಗಳಲ್ಲಿ ಮದುವೆಗಳು ನಡೆಯುವುದು ಸಹಜ. ಈ ಜೋಡಿ ಕೇದಾರನಾಥನ ಸನ್ನಿಧಿಯಲ್ಲಿ ಮದುವೆಗೆ ನಿರ್ಧರಿಸಿದೆ. ಅಲ್ಲದೆ ದೇವಸ್ಥಾನದ ವಸ್ತ್ರಸಂಹಿತೆಯನ್ನು ಇವರು ಪಾಲಿಸಿದ್ದಾರೆ. ಈಗಿನ ಕಾಲಮಾನದವರು ಹಿಂದೂ ದೇವರುಗಳಲ್ಲಿ ನಂಬಿಕೆ ಇಟ್ಟಿರುವುದು ಇನ್ನೂ ಸುಂದರ ಅಲ್ಲವೆ? ಎಂದು ಕೇಳಿದ್ದಾರೆ.

ಇದನ್ನೂ ಓದಿ : viral video: ಕಥಕ್​ನಲ್ಲಿ”ಬೇಬಿ ಕಾಮ್​ ಡೌನ್” ಇಂಥ ಪ್ರಯೋಗಗಳು ನಡೆಯಲಿ ಎನ್ನುತ್ತಿರುವ ನೆಟ್ಟಿಗರು

ಈ ಒಣವಾವನ್ನೆಲ್ಲಾ ಬಿಟ್ಟು ಇವರಿಬ್ಬರಿಗೂ ಆಶೀರ್ವದಿಸಿ, ಮಹಾದೇವನು ಇವರಿಗೆ ಒಳ್ಳೇಯದನ್ನು ಮಾಡಲಿ, ಇವರು ಆನಂದದ ಕ್ಷಣಗಳನ್ನು ಅನುಭವಿಸಲಿ ಎಂದು ಮಗದೊಬ್ಬರು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:10 pm, Tue, 4 July 23

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್