Viral Video: ಮಸ್ಕ್ ಚಾಟ್ ಭಂಡಾರ್, ಮೆಸ್ಸೀಸ್ ಆಂಧ್ರಾ ಮೆಸ್, ಆಸ್ಕರ್ ಚಾಯ್ವಾಲಾ; ಬಂದರು ನೋಡಿ ಝೊಮ್ಯಾಟೋ ಬಾಣಸಿಗರು
Zomato : ಜಗತ್ತಿನ ವಿದ್ಯಮಾನಗಳಿಗೆ ಚುರುಕಾಗಿ ಸ್ಪಂದಿಸಲು ಶುರುವಿಟ್ಟಿದ್ದಾರೆ ಎಐ ಕಲಾವಿದರು. ಇದೀಗ ಝೊಮ್ಯಾಟೋ ಸಾಮಾಜಿಕ ಜಾಲತಾಣದ ತಮ್ಮ ಅನುಯಾಯಿಗಳನ್ನು ರಂಜಿಸಲು ಹೊಸ ಎಐ ವಿಡಿಯೋ ಬಿಡುಗಡೆ ಮಾಡಿದೆ.

Artificial Intelligence : ಇತ್ತೀಚಿನ ದಿನಮಾನಗಳ್ಲಿ ಜಗತ್ತಿನಾದ್ಯಂತ ಇರುವ ಸೆಲೆಬ್ರಿಟಿಗಳೆಲ್ಲಾ ಎಐ ಕಲಾವಿದರ ಕೈಗೂಸುಗಳಾಗಿಬಿಟ್ಟಿದ್ದಾರೆ. ಚಿತ್ರರೂಪದಲ್ಲಿ ಮೂಡಿಬರುತ್ತಿದ್ದ ಅವರೆಲ್ಲರನ್ನೂ ನೀವು ನಿತ್ಯವೂ ನೋಡುತ್ತಿದ್ದೀರಿ. ಈಗ ಝೊಮ್ಯಾಟೋ (Zomato) ವಿಡಿಯೋ ರೂಪದಲ್ಲಿ ಒಂದಿಷ್ಟು ಸೆಲೆಬ್ರಿಟಿಗಳಿಗೆ ತಮ್ಮ ಫುಡ್ ಸ್ಟಾಲ್ನಲ್ಲಿ ಮುಖ್ಯ ಬಾಣಸಿಗರ ಕೆಲಸಕ್ಕೆ ನೇಮಿಸಿಕೊಂಡಿದೆ. ಮಸ್ಕ್ ಚಾಯ್ ಭಂಡಾರಕ್ಕೆ ಹೋದರೆ ನಿಮಗೆ ಎಲಾನ್ ಮಸ್ಕ್ (Elon Musk) ಸ್ವಾಗತಿಸುತ್ತಾರೆ. ಮೆಸ್ಸೀಸ್ ಆಂಧ್ರಾ ಮೆಸ್ನಲ್ಲಿ ಲಿಯೋನಲ್ ಮೆಸ್ಸಿ (Lionel Messi) ಸಿಗುತ್ತಾರೆ. ಆಸ್ಕರ್ ಚಾಯ್ ವಾಲಾನಲ್ಲಿ ಲಿಯೋನಾರ್ಡೋ ಡಿಕ್ಯಾಪ್ರಿಯೋ (Leonardo DiCaprio) ಇದ್ದಾರೆ. ಬನ್ನಿ ಮಾತಾಡಿಸಿಕೊಂಡು ಬರೋಣ. ಸಾಧ್ಯವಾದರೆ ಅವರು ತಯಾರಿಸಿದ ಖಾದ್ಯಗಳನ್ನೂ ವರ್ಚ್ಯುವಲಿ ಸವಿಯೋಣ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಗಳ ಗಮನ ಸೆಳೆಯಲು ಝೊಮ್ಯಾಟೋ ಹೀಗೆ ಎಐ ವಿಡಿಯೋಗಳನ್ನು ಅಪ್ಲೋಡ್ ಮಾಡಿದೆ. ‘ಮಾ ಮೇರಿ ಶಕ್ತಿಯೋ ಕಾ ಗಲತ್ ಇಸ್ತೇಮಾಲ್ ಹುವಾ ಹೈ’ ಹೃತಿಕ್ ರೋಷನ್ ಅಭಿನಯದ ಕ್ರಿಶ್ ಚಿತ್ರದ ಈ ಸಂಭಾಷಣೆಯನ್ನು ಒಕ್ಕಣೆಯಾಗಿ ಈ ವಿಡಿಯೋಗೆ ನೀಡಲಾಗಿದೆ.
ಇದನ್ನೂ ಓದಿ : Viral: ‘ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?’
ಮಸ್ಕ್, ಒಂದು ಬನ್ ಕೊಡಪ್ಪಾ. ಚಹಾದಲ್ಲಿ ಸ್ವಲ್ಪ ಚೀಸ್ ಹಾಕಿ ಕೊಡಿ. ಮೋಮೋವಾಲಾ ಝುಕರ್ಬರ್ಗ್ ಎಲ್ಲಿ? ಖುಲ್ಛೆವಾಲೇ ವಿರಾಟ್ ಕೊಹ್ಲಿ ಎಲ್ಲಿ? ಸುಂದರ್ ಪಿಚೈ ಕಾರ್ನರ್ ಎಲ್ಲಿದೆ, ಹುಡುಕುತ್ತಾ ಇದ್ದೇನೆ. ಈ ವಿಡಿಯೋ ನೋಡಿದರೆ ಮಸ್ಕ್ ಗ್ಯಾರಂಟೀ ಝೊಮ್ಯಾಟೋ ಖರೀದಿಸಿಬಿಡುತ್ತಾನೆ… ನೆಟ್ಟಿಗರು ಹೀಗೆಲ್ಲ ತಮಾಷೆ ಮಾಡಿ ಮಜಾ ಉಡಾಯಿಸಿದ್ದಾರೆ. ಜಗತ್ತಿನ ವಿದ್ಯಮಾನ ಮತ್ತು ರಾಜಕೀಯ ಬೆಳವಣಿಗೆಗಳು ಏನೇ ಇರಲಿ. ಅಂತೂ ಎಐ (AI) ಕಲಾವಿದರು ದಿನದಿಂದ ದಿನಕ್ಕೆ ಸೃಜನಶೀಲರಾಗುತ್ತಿದ್ದಾರೆ ಎನ್ನುವುದೇ ಖುಷಿ ತರುವ ವಿಷಯ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ








