AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್​, ಝುಕರ್​ಬರ್ಗ್​?

Artificial Intelligence : ನಿಮ್ಮ ಈ ಎಐ ಕಲಾಕೃತಿಗಳು ಬಹಳ ಆಕರ್ಷಕವಾಗಿವೆ. ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ನನ್ನ ತಂದೆತಾಯಿಯರ ಫೋಟೋ ಕೂಡ ಹೀಗೆ ಸೃಷ್ಟಿಸಿಕೊಡಬಹುದೆ? ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ.

Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್​, ಝುಕರ್​ಬರ್ಗ್​?
ಮುಕೇಶ್ ಅಂಬಾನಿ, ಎಲಾನ್ ಮಸ್ಕ್, ಮಾರ್ಕ್ ಝುಕರ್​ಬರ್ಗ್
TV9 Web
| Edited By: |

Updated on:Jun 19, 2023 | 3:43 PM

Share

AI : ಎಲಾನ್ ಮಸ್ಕ್​, ಮುಕೇಶ್ ಅಂಬಾನಿ, ಝುಕರ್​ಬರ್ಗ್​ ವೃಂದಾವನದಲ್ಲಿ ಹೋಳಿ ಆಡುತ್ತಿದ್ದಾರೆಯೇ… ಎಂದು ಅಚ್ಚರಿಯಾಗುತ್ತಿದೆಯಾ? ಇವರಷ್ಟೇ ಅಲ್ಲ ಇವರೊಂದಿಗೆ ಮೈಕ್ರೋಸಾಫ್ಟ್​ನ (Microsoft) ಸ್ಟೀವ್​ ಬಲ್​ಮರ್​, ಆನಂದ ಮಹೀಂದ್ರಾ, ಜೆಫ್​ ಬೆಜೋಸ್​, ಗೌtಮ್ ಅದಾನಿ, ವಾರೆನ್​ ಬಫೆಟ್​, ಬಿಲ್​ಗೇಟ್ಸ್​ ಮುಂತಾದವರೂ ಇದ್ದಾರೆ. ಇದೇನು ಅಡ್ಡಮಳೆಯಂತೆ ಅಡ್ಡಹೋಳಿ ಎಂದು ಹುಬ್ಬೇರಿಸುತ್ತಿದ್ದೀರಾ? ಹೌದು ಈ ಹೋಳಿಯನ್ನು ಸೃಷ್ಟಿಸಿರುವುದು AI ಕಲಾವಿದರು. ಜಗತ್ತಿನ ಕೋಟ್ಯಾಧಿಪತಿಗಳನ್ನು ಹೀಗೆ ವೃಂದಾವನದ ಬೀದಿಯಲ್ಲಿ ಹೋಳಿಯ ಬಣ್ಣಗಳಲ್ಲಿ ಮುಳುಗೇಳಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಡೋನಾಲ್ಡ್​ ಟ್ರಂಪ್​, ರಿಚರ್ಡ್​ ಬ್ರ್ಯಾನ್ಸರ್​ ಎಲ್ಲಿ ಕಾಣೆಯಾಗಿದ್ದಾರೆ ಎಂದು ಒಬ್ಬರು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಾಕುವ ಪೋಸ್ಟ್​ನಲ್ಲಿ ಅವರಿಬ್ಬರೂ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಚಿತ್ರಗಳನ್ನು ಪೋಸ್ಟ್ ಮಾಡಿದ ವೈಲ್ಡ್​ ಟ್ರಾನ್ಸ್​ ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಉತ್ತರಿಸಿದ್ದಾರೆ. ವೃಂದಾವನಕ್ಕೆ ನಡೆಯಿರಿ ಎಲ್ಲರೂ ಇವರೊಂದಿಗೆ ರಾಧೆಯನ್ನು ಜಪಿಸೋಣ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ: Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ

ದಯವಿಟ್ಟು, AI ಸಹಾಯದಿಂದ ಹೀಗೆಯೇ ನನ್ನ ತಂದೆತಾಯಿಯ ಫೋಟೋ ಸೃಷ್ಟಿಸಿ ಕೊಡಿ. ಏಕೆಂದರೆ ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಆದರೆ ಇಬ್ಬರೂ ನನಗೆ ಬೇಕು ಎಂದಿದ್ದಾರೆ ಒಬ್ಬರು. ಆಗಲಿ ಮೆಸೇಜ್ ಮಾಡಿ ಎಂದಿದ್ದಾರೆ AI ಕಲಾವಿದರು. ಹೀಗೆ ಕಣ್ಣಾಡಿಸುವಾಗ ನೀವು ಮಾಡಿದ ಚಿತ್ರಗಳನ್ನು ಗಮನಿಸಿದೆ. ನಾನು ಖರೀದಿಸಲು ಇವುಗಳಲ್ಲಿ ಕೆಲವನ್ನು ಖರೀದಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.

ಇದನ್ನೂ ಓದಿ : Viral Video: ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್​ಗಳ ವಿಡಿಯೋ ವೈರಲ್

ಅಂತೂ ಇತ್ತೀಚಿನ ದಿನಗಳಲ್ಲಿ ಎಐ ಕಲಾವಿದರು ಮಾರುಕಟ್ಟೆ ಸೃಷ್ಟಿಸಲು ಹೀಗೆ ಈ ಪ್ರಸಿದ್ಧ ವ್ಯಕ್ತಿಗಳಿಗೆಲ್ಲ ವೇಷ ಹಾಕಿಸುತ್ತಿದ್ದಾರೆ. ಈ ಇನ್​ಸ್ಟಾ ಖಾತೆಯಲ್ಲಿ ಹೀಗೆ ಇನ್ನೂ ಹಲವಾರು ಪ್ರಚಲಿತ ವ್ಯಕ್ತಿಗಳ ಎಐ ಸೃಷ್ಟಿಯನ್ನು ನೋಡಬಹುದಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:40 pm, Mon, 19 June 23

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ