Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ

Beachcomber : ಬೀಚ್​ಕಾಂಬರ್​ ಕೈಗೆ ಇದು ಸಿಕ್ಕಿದೆ. ಈ ಸಂದೇಶ ಬರೆದು ನೀರಿಗೆಸೆದಿದ್ದ ವ್ಯಕ್ತಿ ಯಾರೆಂಬುದನ್ನೂ ಅವನು ಪತ್ತೆ ಹಚ್ಚಿದ್ದಾನೆ. ನಂತರ ಅವನ ಮನೆಗೆ ಹೋಗಿದ್ದಾನೆ. ಆದರೆ ಆ ವ್ಯಕ್ತಿ ಎರಡು ವರ್ಷಗಳ ಹಿಂದೆ...

Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ
ಬೀಚ್​ಬಳಿ ಸಿಕ್ಕ ಬಾಟಲಿ ಮತ್ತದರೊಳಗಿನ ಸಂದೇಶ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 20, 2023 | 10:27 AM

Letter: ಇ-ಯುಗದಲ್ಲಿಯೂ ಅನೇಕರ ಮನೆಗಳಲ್ಲಿ ಹಳೆಯ ಪತ್ರಗಳನ್ನು ಕಾಪಿಟ್ಟುಕೊಂಡಿರಬಹುದು ಅಥವಾ ಪುಸ್ತಕಗಳೊಳಗೆ ಕೈಬರಹದ ಸಂದೇಶ ಅಥವಾ ಪತ್ರಗಳು ಬೆಚ್ಚಗೆ ಅವಿತಿರಬಹುದು. ಎಷ್ಟೋ ವರ್ಷಗಳ ನಂತರ ಅವು ಅಲ್ಲಿಂದ ಪುಳಕ್ಕನೇ ಜಾರಿ ಬಿದ್ದಾಗ ಉಂಟಾಗುವ ಪುಳಕ ಅಷ್ಟಿಷ್ಟಲ್ಲ. ಇದೀಗ ವೈರಲ್ ಆಗಿರುವ ಈ ಫೇಸ್​ಬುಕ್​ ಪೋಸ್ಟ್ ನೋಡಿ. 1980ರಲ್ಲಿ ಬರೆದ ಸಂದೇಶವೊಂದು ಸಿಕ್ಕಿದೆ. ಬಾಟಲಿಯೊಳಗೆ ಇದನ್ನು ಅಡಗಿಸಿಡಲಾದ ಈ ಸಂದೇಶ 34 ವರ್ಷದಷ್ಟು ಹಳೆಯದಾಗಿದೆ. ಇತ್ತೀಚೆಗೆ ಕೆನಡಾದ ವ್ಯಕ್ತಿಯೊಬ್ಬರಿಗೆ ಇದು ಸಿಕ್ಕಿದೆ.

ಹಳೆಯ ಕಲಾಕೃತಿಗಳು, ಪತ್ರಗಳು, ಸಾಮಾನುಗಳನ್ನು ಹುಡುಕುವುದು ಅವುಗಳ ಬಗ್ಗೆ ತಿಳಿಯುವುದು ಯಾವಾಗಲೂ ಕುತೂಹಲಕರ ವಿಷಯ. ಅಪರೂಪದ ಮಾಹಿತಿ ಏನಾದರೂ ಸಿಕ್ಕರೆ ಆಗುವ ರೋಮಾಂಚನ ಹೇಳತೀರದು. ಟ್ರೂಡಿ ಶಾಟ್ಲರ್​ ಮೆಕಿನ್ನನ್​ ಎನ್ನುವವರು ತಮ್ಮ ಫೇಸ್​ಬುಕ್​ನಲ್ಲಿ ಮೇಲಿನ ಫೋಟೋ ಮತ್ತು ನೋಟ್​ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ

”ನಾನೊಬ್ಬ Beachcomber (ಸಮುದ್ರದ ದಂಡೆಯ ಮೇಲಿರುವ ಅಮೂಲ್ಯ ಮತ್ತು ಆಸಕ್ತಿಕರ ವಸ್ತುಗಳನ್ನು ಸಂಗ್ರಹಿಸುವವ). ಸಂದೇಶವುಳ್ಳ ಇಂಥ ಬಾಟಲಿಗಳ ಹುಡುಕಾಟದಲ್ಲಿ ಇರುತ್ತೇನೆ. ಈಸಲ ನನಗೆ ಈ ಬಾಟಲಿ ಸಿಕ್ಕಿದೆ. ಫೋಕ್ಸ್​ ಪಾಯಿಂಟ್​ ನಲ್ಲಿ 10 ಮೈಲಿಗಳಷ್ಟು ದೂರದ ನೀರಿನಲ್ಲಿ ಇದನ್ನು ಕೈಬಿಡಲಾಗಿದೆ ಎಂಬ ಸಂದೇಶ ಇದರೊಳಗಿದೆ. ಈ ನೋಟ್​ ಬರೆದದ್ದು 1989ರ ಮೇ 29ರಂದು.”

ಇದನ್ನೂ ಓದಿ : Viral: ವೃಂದಾವನದ ಹೋಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ, ಎಲಾನ್​, ಝುಕರ್​ಬರ್ಗ್​?

”ಈ ಬಾಟಲಿ ಯಾರಿಗೆ ಸೇರಿದ್ದು ಎನ್ನುವುದನ್ನೂ ಕಂಡುಕೊಂಡಿದ್ದೇನೆ. ಇದು ಪೋರ್ಟ್​ ಆಕ್ಸ್​ ಚಾಯ್ಸ್​ ಎನ್​ಎಫ್​ಎಲ್​ಡಿಯ ಗಿಲ್ಬರ್ಟ್ ಹ್ಯಾಮ್ಲಿನ್ ಎನ್ನುವವರದು. ಎರಡು ವರ್ಷಗಳ ಹಿಂದೆ ಅವರು ನಿಧನರಾದರು. ಅವರ ಮಗ ಇದು ತಂದೆಯದೇ ಸಂದೇಶವೆಂದು ಖಚಿತಪಡಿಸಿದರು. ಈ ಬಾಟಲಿಯನ್ನು ನಾನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ.” ಎಂದಿದ್ದಾರೆ ಟ್ರೂಡಿ ಶಾಟ್ಲರ್​ ಮೆಕಿನ್ನನ್.

ಜಾಲತಾಣಿಗರು ಈ ಪೋಸ್ಟ್​ ನೋಡಿ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ಧಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:26 am, Tue, 20 June 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ