Viral: ಯಾರಲ್ಲಿ ಸ್ವಲ್ಪ ಇದನ್ನು ತೆರೆಯಿರಿ; ಶವಪೆಟ್ಟಿಗೆಯೊಳಗಿದ್ದ ಮಹಿಳೆ ತಟ್ಟಿದಾಗ
Coffin : ಸಾವು ಎಂದರೆ ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎನ್ನುವ ಶೂನ್ಯ ಸ್ಥಿತಿ ಆವರಿಸುವುದು. ಆದರೆ ಸತ್ತ ವ್ಯಕ್ತಿಗೆ ಜೀವ ಬಂದರೆ? ಅಮೆರಿಕದಲ್ಲಿ ಅಂತ್ಯಸಂಸ್ಕಾರದ ಸಮಯದಲ್ಲಿ ಈ ಅಚಾತುರ್ಯ ಸಂಭವಿಸಿದೆ.
Coffin: ಈ ಅಚಾತುರ್ಯ ದಕ್ಷಿಣ ಅಮೆರಿಕದ ಈಕ್ವೆಡರ್ನಲ್ಲಿ ನಡೆದಿದೆ. 76 ವರ್ಷದ ಬೆಲ್ಲಾ ಮೊಂಟೊಯಾ ತೀರಿಹೋಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಘೋಷಿಸಿದ ಪರಿಣಾಮ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಪ್ರಾರಂಭವಾಗಿವೆ. ಆದರೆ ಕೊನೇ ಕ್ಷಣದಲ್ಲಿ ಬೆಲ್ಲಾ ಕಾಫಿನ್ ಬಾಕ್ಸ್ ಒಳಗಿನಿಂದ ತಟ್ಟುತ್ತಿರುವ ಸದ್ದು ಕೇಳಿಬಂದಿದೆ. ಆಗ ಅಲ್ಲಿದ್ದವರಿಗೆ ಅಚ್ಚರಿ ಉಂಟಾಗಿದೆ. ವಾಸ್ತವದಲ್ಲಿ ತೀವ್ರ ನಿಗಾ ಘಟಕದಲ್ಲಿ ಏಳು ದಿನಗಳನ್ನು ಕಳೆದ ನಂತರ ಬೆಲ್ಲಾ ಪಾರ್ಶ್ವವಾಯುವಿಗೆ ಆಕೆ ತುತ್ತಾಗಿದ್ದರು ಎಂದು ಈಕ್ವೆಡಾರ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : Viral Video: ಮರಳುಗಾಡಿನಲ್ಲಿ ಕಳೆದು ಹೋದ ನಾಯಿ ಮತ್ತೆ ಮರಳಿದಾಗ
ಬೆಲ್ಲಾ ಜೂನ್ 16 ರಂದು ನಿಧನರಾದರೆಂದು ಆಸ್ಪತ್ರೆ ಘೋಷಿಸಿದೆ. ನಂತರ ಅಂತ್ಯಕ್ರಿಯೆ ನಡೆಸಲು ಸಾರ್ವಜನಿಕ ಸ್ಮಶಾನಕ್ಕೆ ಕರೆದೊಯ್ಯಲಾಗಿದೆ. ವಿಧಿವಿಧಾನಗಳು ನೆರವೇರುವ ಸಂದರ್ಭದಲ್ಲಿ ಬೆಲ್ಲಾ ಎಚ್ಚರಗೊಂಡು ಕಾಫಿನ್ ಬಾಕ್ಸ್ ತಟ್ಟಿದ್ದಾರೆ. ಅಲ್ಲಿದ್ದವರೆಲ್ಲ ಅಚ್ಚರಿ ಮತ್ತು ಬೆರಗಿನಿಂದ ಕಾಫಿನ್ ಮುಚ್ಚಳವನ್ನು ತೆರೆದಿದ್ದಾರೆ. ಬೆಲ್ಲಾ ಏದುಸಿರು ಬಿಡುತ್ತಿದ್ದುದನ್ನು ಗಮನಿಸಿದ್ದಾರೆ.
ಇದನ್ನೂ ಓದಿ : Viral Video: ವಿಶ್ವ ಗಡ್ಡ ಮತ್ತು ಮೀಸೆ ಚಾಂಪಿಯನ್ಗಳ ವಿಡಿಯೋ ವೈರಲ್
ಬೆಲ್ಲಾ ತೀರಿದ ಐದು ಗಂಟೆಯೊಳಗೆ ಮರಳಿ ಪ್ರಜ್ಞೆ ಪಡೆದಿದ್ದಾರೆ. ಬೆಲ್ಲಾ ಕ್ಯಾಟಲೆಪ್ಸಿ ಎಂಬ ಸ್ಥಿತಿಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಸಚಿವಾಲಯ ತಿಳಿಸಿದ್ದು, ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಹಂತದಲ್ಲಿದ್ದಾಗ ವ್ಯಕ್ತಿಯು ಪ್ರಜ್ಞೆ ಕಳೆದುಕೊಳ್ಳುತ್ತಾರೆ ಮತ್ತು ದೇಹವು ಬಿಗಿಗೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆ ನಂತರ ಬೆಲ್ಲಾರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ : Viral: ಈ ಬಂಧನ… ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ
ಕಾಫಿನ್ನೊಳಗಿಂದ ಆಕೆ ಉಸಿರಾಡಲು ಕಷ್ಟಪಡುತ್ತಿರುವುದು, ಸಂಬಂಧಿಕರು ಗಾಳೀ ಬೀಸುತ್ತ ಚೇತರಿಸಿಕೊಳ್ಳಲು ಸಹಾಯ ಮಾಡುತ್ತಿರುವುದು ಮತ್ತು ಆಕೆಯನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ