AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಈ ಬಂಧನ… ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ

Dowry : ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಧೋರಣೆಯಲ್ಲಿ ಸಾಲಂಕೃತ ವರ ತಲೆಯೆತ್ತಿ ಸ್ಥಿತಪ್ರಜ್ಞತೆಯಿಂದ ನಿಂತಿದ್ದಾನೆ. “ಈ ಮುಸುಡಿಗೆ ಹೆಣ್ಣು ಸಿಕ್ಕಿದ್ದೇ ಹೆಚ್ಚು, ವರದಕ್ಷಿಣೆ ಬೇರೆ ಕೇಡು,” ಎಂದಿದ್ದಾರೆ ಕೆಲವರು.

Viral: ಈ ಬಂಧನ… ವರದಕ್ಷಿಣೆ ಕೇಳಿದ ವರನಿಗೆ ಹಗ್ಗದ ಅನುಬಂಧನ
ಉತ್ತರಪ್ರದೇಶದಲ್ಲಿ ವರದಕ್ಷಿಣೆ ಕೇಳಿದ ವರನನ್ನು ಮರಕ್ಕೆ ಕಟ್ಟಿ ಹಾಕಿರುವುದು
TV9 Web
| Updated By: ಶ್ರೀದೇವಿ ಕಳಸದ|

Updated on: Jun 16, 2023 | 4:41 PM

Share

Uttar Pradesh : ಇನ್ನೇನು ಪರಸ್ಪರ ಮಾಲೆ ಹಾಕಿ ವಧೂವರರು ವಿವಾಹ ಬಂಧನಕ್ಕೊಳಪಡಬೇಕು… ಅಷ್ಟರಲ್ಲಿ ವರಮಹಾಶಯನಿಗೆ ವರದಕ್ಷಿಣೆಯ ನೆನಪಾಗಿದೆ. ಕೊಡದ ಹೊರತು ಮಾಲೆ ಹಾಕಲೊಲ್ಲೆ ಎಂದು ಪಟ್ಟುಹಿಡಿದ ವರನಿಗೆ ಪಾಠ ಕಲಿಸಬೇಕೆಂದು ಹೆಣ್ಣಿನ (Bride) ಕಡೆಯವರು ಅವನನ್ನು ಮರಕ್ಕೆ ಕಟ್ಟಿ ಹಾಕಿ ಅಕ್ಷರಶಃ ಬಂಧಿಸಿದ್ದಾರೆ. ಎರಡೂ ಕಡೆಯವರು ಒಪ್ಪಂದಕ್ಕೆ ಬರಲಾಗದೇ ಜಗಳಕ್ಕಿಳಿದಿದ್ದಾರೆ. ಪೋಲೀಸರು ಪ್ರವೇಶಿಸುವ ತನಕವೂ “ವರೋಪಚಾರ” ಮಾಡಿಸಿಕೊಳ್ಳುತ್ತ ಮರಕ್ಕಂಟಿಕೊಂಡು ನಿಂತಿದ್ದನಂತೆ ಈ ಭೂಪತಿ ಗಂಡು.

ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋನಲ್ಲಿ ವರನ ಸುತ್ತ ಹಗ್ಗ ಬಿಗಿದು ಗಂಟುಹಾಕುತ್ತಿರುವುದನ್ನು ಕಾಣಬಹುದು. ಈ ಪ್ರಸಂಗವನ್ನು ಮೊದಲೇ ಊಹಿಸಿ ಹಗ್ಗದ ಕಟ್ಟನ್ನು ತಂದಿಟ್ಟುಕೊಂಡಿದ್ದರೋ ಎನ್ನಿಸುವಂತಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಧೋರಣೆಯಲ್ಲಿ ಸಾಲಂಕೃತ ವರ ತಲೆಯೆತ್ತಿ ಸ್ಥಿತಪ್ರಜ್ಞತೆಯಿಂದ ನಿಂತಿದ್ದಾನೆ. “ಈ ಮುಸುಡಿಗೆ ಹೆಣ್ಣು ಸಿಕ್ಕಿದ್ದೇ ಹೆಚ್ಚು, ವರದಕ್ಷಿಣೆ ಬೇರೆ ಕೇಡು,” ಎಂದಿದ್ದಾರೆ ಕೆಲವರು. “ಎರಡೂ ಪಕ್ಷದ ಮಂದಿ ಪೊಲೀಸ್ ಠಾಣೆಯಲ್ಲಿದ್ದಾರೆ. ಅವರು ರಾಜಿಯಾಗಿ ಯಾವುದೇ ಒಪ್ಪಂದಕ್ಕೆ ಬಂದಿಲ್ಲ. ಇನ್ನೂ ಮಂತ್ರಾಲೋಚನೆ ನಡೆದಿದೆ,” ಎಂದು ಪೋಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Viral: ಈ ದೇಶ ಬಿಟ್ಟು ಇನ್ನೊಂದೆಡೆ ಹೋಗುತ್ತೀರಾ? ಹಾಗಿದ್ದರೆ ರೂ 70 ಲಕ್ಷ ಕೊಡುತ್ತೇವೆ!

“ವರನ ಗೆಳೆಯರು ಕೆಟ್ಟದಾಗಿ ವರ್ತಿಸುತ್ತಿದ್ದರು. ಇದರಿಂದ ಜಗಳ ಶುರುವಾಯಿತು. ಇದರ ನಡುವೆಯೇ ಇವನು ವರದಕ್ಷಿಣೆ ಬೇರೆ ಕೇಳತೊಡಗಿದ. ಇದರಿಂದ ಕುಪಿತರಾದ ವಧುವಿನ ಕಡೆಯವರು ಅವನನ್ನು ಕಟ್ಟಿಹಾಕಿದರು,” ಎಂದೂ ಕೆಲವರು ಹೇಳುತ್ತಿದ್ದಾರೆ. ಇದು “ತಾಲೀಬಾನೀ ಶಿಕ್ಷೆ” ಎಂದು ಒಕ್ಕಣೆಯಿರುವ ಟ್ವೀಟ್ ಒಂದು ಹರಿದಾಡುತ್ತಿದೆ. ಇದೇನು ಮದುವೆಯೋ ಬೀದಿ ಕಾಳಗವೋ ತಿಳಿಯದೇ ಗೊಂದಲದಿಂದ ಹಣೆ ಚಚ್ಚಿಕೊಳ್ಳಬೇಕಷ್ಟೇ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ