100 ವರ್ಷಗಳ ನಂತರ ಲಂಡನ್​ ವಿಳಾಸಕ್ಕೆ ತಲುಪಿದ ಈ ಪತ್ರ

Letter : ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಪತ್ರವನ್ನು ರವಾನಿಸಲಾಗಿದೆ. ಆದರೆ ಇದು ತಲುಪಿದ್ದು ಮಾತ್ರ ನೂರು ವರ್ಷಗಳ ನಂತರ ಎನ್ನುವುದು ಅಚ್ಚರಿ ಮತ್ತು ವಿಸ್ಮಯ. ಆಗ ಕಿಂಗ್​ ಜಾರ್ಜ್​ v ಆಡಳಿತವಿತ್ತು.

100 ವರ್ಷಗಳ ನಂತರ ಲಂಡನ್​ ವಿಳಾಸಕ್ಕೆ ತಲುಪಿದ ಈ ಪತ್ರ
ನೂರು ವರ್ಷಗಳ ನಂತರ ಲಂಡನ್​ನ ವಿಳಾಸಕ್ಕೆ ಬಂದು ತಲುಪಿದ ಪತ್ರ. ಇದು ಬಾತ್​ ಪೋಸ್ಟ್ ಮಾರ್ಕ್​ ಮತ್ತು ಕಿಂಗ್ ಜಾರ್ಜ್​ ಸ್ಟ್ಯಾಂಪ್​ ಹೊಂದಿದೆ
Follow us
| Edited By: TV9 Digital Desk

Updated on:Feb 17, 2023 | 2:54 PM

Viral News : ಇಮೇಲ್​ಗಳ ಈ ಜಮಾನಾದಲ್ಲಿ ಪತ್ರಗಳ ಲೋಕವನ್ನು ಮರೆತೇ ಬಿಟ್ಟಿದ್ದೇವೆ. ಪುಟ್ಟ ಕೆಂಪುಡಬ್ಬಿಯೊಳಗಿನ ಒಂದು ಹಾಳೆಯೊಳಗೆ ಅದೆಷ್ಟು ಅಗಾಧ ವಿಸ್ಮಯ, ಖುಷಿ, ಕುತೂಹಲ ತುಂಬಿಕೊಂಡಿರುತ್ತಿತ್ತು. ನಮ್ಮ ಜೀವಂತಿಕೆಗೆ ಸಾಕ್ಷಿ ಎಂಬಂತೆ ಆ ಪತ್ರಪ್ರಪಂಚ. ಇದೀಗ ಇದೇ ಲೋಕಕ್ಕೆ ಸಂಬಂಧಿಸಿದ ಒಂದು ಅಚ್ಚರಿಯ ಸುದ್ದಿ ನಿಮಗಾಗಿ. ಇಲ್ಲಿರುವ ಈ ಪತ್ರವೊಂದನ್ನು 1916ರಲ್ಲಿ ಇಂಗ್ಲೆಂಡ್​ನ ಬಾತ್​ನಿಂದ ಪೋಸ್ಟ್ ಮಾಡಲಾಗಿದೆ. ಈ ಪತ್ರದ ಮೇಲೆ ಕಿಂಗ್ ಜಾರ್ಜ್ v​ ಸ್ಟ್ಯಾಂಪ್​ ಇದೆ. ಆದರೆ ಈ ಪತ್ರ ತಲುಪಬೇಕಾದ ವಿಳಾಸವನ್ನು ತಲುಪಿದ್ದು 100 ವರ್ಷಗಳ ಬಳಿಕ!

2021ರಲ್ಲಿ ದಕ್ಷಿಣ ಲಂಡನ್​ನಲ್ಲಿರುವ ಗ್ಲೆನ್​ ಮತ್ತು ಆತನ ಗೆಳತಿ ವಾಸವಾಗಿದ್ದ ಫ್ಲ್ಯಾಟ್​ಗೆ ಇದು ತಲುಪಿದೆ. ಈ ಪತ್ರ ಇವರಿಬ್ಬರಲ್ಲಿ ಅಚ್ಚರಿ ತಂದಿದೆ. ಗ್ಲೆನ್​, ಈ ಪತ್ರವನ್ನು ಸ್ಥಳೀಯ ಐತಿಹಾಸಿಕ ಸಂಶೋಧನಾ ಕೇಂದ್ರಕ್ಕೆ ಈ ಪತ್ರವನ್ನು ತಲುಪಿಸಿದ್ದಾರೆ.

ಇದನ್ನೂ ಓದಿ : 67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಂಶೋಧನೆಯ ಮೂಲಕ ತಿಳಿದು ಬಂದಿರುವುದೇನೆಂದರೆ, ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಕಟೀ ಮಾರ್ಶ್​ ಎನ್ನುವವರು ಬಾತ್​​ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದ ಕ್ರಿಸ್ಟಾಬೆಲ್​ ಮೆನ್ನೆಲ್ ಎನ್ನುವವರಿಗೆ ಬರೆದ ಪತ್ರವು ಇದಾಗಿದೆ. ಇವರಿಬ್ಬರೂ ಸ್ನೇಹಿತೆಯರಾಗಿದ್ದರು.

ಇದನ್ನೂ ಓದಿ : ‘ಎಂಬಿಎ ಚಾಯ್​ವಾಲಾ’ ರೂ. 90 ಲಕ್ಷದ ಮರ್ಸಿಡೀಝ್​ ಕಾರು ಖರೀದಿಸಿದ ವಿಡಿಯೋ ವೈರಲ್

ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಪತ್ರವನ್ನು ರವಾನಿಸಲಾಗಿದೆ. ಆ ಸಂದರ್ಭದಲ್ಲಿ ಕಿಂಗ್​ ಜಾರ್ಜ್​ v ಆಡಳಿತವಿತ್ತು. ಆದರೆ ಇದು ತಲುಪಿದ್ದು ಮಾತ್ರ ನೂರು ವರ್ಷಗಳ ನಂತರ ಎನ್ನುವುದು ಅಚ್ಚರಿ ಮತ್ತು ವಿಸ್ಮಯ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:54 pm, Fri, 17 February 23

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ