‘ಎಂಬಿಎ ಚಾಯ್​ವಾಲಾ’ ರೂ. 90 ಲಕ್ಷದ ಮರ್ಸಿಡೀಝ್​ ಕಾರು ಖರೀದಿಸಿದ ವಿಡಿಯೋ ವೈರಲ್

MBA Chai Wala : ಪ್ರಫುಲ್​ ಬಿಲ್ಲೋರ್ 2017ರಲ್ಲಿ ಎಂಬಿಎ ಅರ್ಧಕ್ಕೆ ನಿಲ್ಲಿಸಿ ಅಹಮದಾಬಾದ್​ನ ಐಐಎಂ ಮುಂದೆ ಚಹಾ ಅಂಗಡಿ ಇಟ್ಟರು. ಇದೀಗ ಅವರು ‘ಎಂಬಿಎ ಚಾಯ್​ವಾಲಾ’ ಬ್ರ್ಯಾಂಡಿನಡಿ ಅನೇಕ ರೆಸ್ಟೋರೆಂಟ್​ಗಳನ್ನು ನಿರ್ವಹಿಸುತ್ತಿದ್ದಾರೆ.

‘ಎಂಬಿಎ ಚಾಯ್​ವಾಲಾ’ ರೂ. 90 ಲಕ್ಷದ ಮರ್ಸಿಡೀಝ್​ ಕಾರು ಖರೀದಿಸಿದ ವಿಡಿಯೋ ವೈರಲ್
ಎಂಬಿಎ ಚಾಯ್​ವಾಲಾ ಮಾಲಿಕ ಪ್ರಫುಲ್​ ಬಿಲ್ಲೋರ್​​ ಪತ್ನಿ ಮಗುವಿನೊಂದಿಗೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 16, 2023 | 3:21 PM

Viral : ಕೊರೊನಾ ಸಮಯದಲ್ಲಿ ಅನೇಕ ಜನರು ಕೆಲಸ ಕಳೆದುಕೊಂಡರು. ಇನ್ನೂ ಕೆಲವರು ಇದ್ದ ಕೆಲಸವನ್ನು ಬಿಟ್ಟು ಹೊಸದೇನಾದರೂ ಮಾಡಬೇಕೆಂಬ ತುಡಿತಕ್ಕೆ ಬಿದ್ದರು. ಓದಿಗೂ, ಅನುಭವಕ್ಕೂ, ವೃತ್ತಿಗೂ ಸಂಬಂಧವಿಲ್ಲದಂಥ ಹೊಸ ಸಾಹಸಕ್ಕೆ ಕೈಹಾಕಿದ್ದನ್ನು ನೋಡಿ ಅನೇಕರು ಗೇಲಿ ಮಾಡಿದರು. ಇನ್ನೂ ಕೆಲವರು ಹುರುಪು ತುಂಬಿದರು. ಈ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಡಿಯೋ ಟ್ವೀಟ್​ಗಳನ್ನು ಇದೇ ತಾಣದಲ್ಲಿ ಈ ಹಿಂದೆ ನೋಡಿದ್ದೀರಿ. ಇದೀಗ ವೈರಲ್ ಆಗಿರುವ ವಿಷಯ ಏನೆಂದರೆ, ಎಂಬಿಎ ಓದಿದ ವ್ಯಕ್ತಿಯೊಬ್ಬರು ಚಹಾ ಅಂಗಡಿ ಬಿಝಿನೆಸ್ ಮಾಡಿ ರೂ. 90 ಲಕ್ಷದ ಮರ್ಸಿಡೀಝ್ ಕಾರ್ ಖರೀದಿಸಿರುವುದು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Prafull Billore (@prafullmbachaiwala)

ಎಂಬಿಎ ಚಾಯ್​ವಾಲಾ ಎಂದೇ ಖ್ಯಾತಿ ಹೊಂದಿರುವ ಪ್ರಫುಲ್​ ಬಿಲ್ಲೋರ್ 2017 ರಲ್ಲಿ ಎಂಬಿಎ ಅರ್ಧಕ್ಕೆ ನಿಲ್ಲಿಸಿ ಅಹಮದಾಬಾದ್​ನ ಐಐಎಂ ಮುಂದೆ ಚಹಾ ಅಂಗಡಿ ಇಟ್ಟರು. ಮನಸ್ಸಿದ್ದಲ್ಲಿ ಮಾರ್ಗ. ಅದರಲ್ಲಿ ಅವರು ಯಶಸ್ಸನ್ನೂ ಸಾಧಿಸಿದರು. ಇದೀಗ ಅವರು ‘ಎಂಬಿಎ ಚಾಯ್​ವಾಲಾ’ ಬ್ರ್ಯಾಂಡಿನಡಿ ದೇಶದಾದ್ಯಂತ ಅನೇಕ ರೆಸ್ಟೋರೆಂಟ್​ಗಳನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ‘ಬಿ.ಟೆಕ್​​ ಚಾಯ್​ವಾಲಿ’ ಬಿಹಾರ ವಿದ್ಯಾರ್ಥಿನಿಯ ಈ ಸ್ಟಾರ್ಟ್​ಅಪ್​; ನೆಟ್ಟಿಗರಿಂದ ಶಭಾಷ್

ಸದ್ಯ ರೂ. 90 ಲಕ್ಷದ ಮರ್ಸಿಡೀಝ್​ ಕಾರನ್ನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಅನ್ನು ಅವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಮಾರು ಮೂರು ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೆಟ್ಟಿಗರೆಲ್ಲರೂ ಪ್ರಫುಲ್​ ಅವರಿಗೆ ಅಭಿನಂದನೆಗಳ ಮಳೆ ಸುರಿಸಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಶುಭ ಕೋರಿದ್ದಾರೆ.

ಇದನ್ನೂ ಓದಿ : ಫುಡ್​ ಸ್ಟಾಲೋ, ಕಾರ್ಪೊರೇಟ್​ ಉದ್ಯೋಗವೋ; ಯಾವುದು ಒಳ್ಳೆಯದು? ನೆಟ್ಟಿಗರ ಭಾರೀ ಚರ್ಚೆ

ಅನೇಕರು ಇಂಥ ಸಾಹಸಗಳಿಗೆ ಕೈಹಾಕುತ್ತಾರೆ. ಆದರೆ ನೀವು ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ವಿಗೊಳಿಸಿದ್ದೀರಿ ಎಂದಿದ್ದಾರೆ ಅನೇಕರು. ಸದ್ಯದಲ್ಲಿಯೇ ಅಮೆರಿಕದಲ್ಲಿ ಎಂಬಿಎ ಚಾಯ್​ವಾಲಾ ಗ್ರೂಪ್​ ತೆರೆಯುವ ನಿರೀಕ್ಷೆ ಇದೆ ಎಂದು ಪ್ರಫುಲ್ ಮತ್ತೊಂದು ಪೋಸ್ಟ್​ನಲ್ಲಿ ಅಪ್​ಡೇಟ್ ಮಾಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:20 pm, Thu, 16 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ