Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಕೊಟ್ಟರೂ ಸಿಗದ ಇಂಥ ಅಪೂರ್ವ ಕ್ಷಣಗಳು

Photography : ಈ ವೃದ್ಧದಂಪತಿ ಚಹಾ ಕುಡಿಯುತ್ತ ಕುಳಿತಿದ್ಧಾರೆ. ಅಪರಿಚಿತ ವ್ಯಕ್ತಿಯೊಬ್ಬ ಫೋಟೋ ತೆಗೆದು, ಫೋಟೋ ಕೈಗಿಡುವಾಗ ವೃದ್ಧೆ ಶಾಲ್​ ಹಿಡಿದು ಉಡಿಯೊಡ್ಡುತ್ತಾಳೆ. ಈ ಮುಗ್ಧ, ಭಾವುಕ ಕ್ಷಣಗಳಿಗೆ ಮನಸೋಲುತ್ತಿದ್ದಾರೆ ನೆಟ್ಟಿಗರು.

ಕೋಟಿ ಕೊಟ್ಟರೂ ಸಿಗದ ಇಂಥ ಅಪೂರ್ವ ಕ್ಷಣಗಳು
ವೃದ್ಧದಂಪತಿಯ ಫೋಟೋ ಶೂಟ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 17, 2023 | 11:43 AM

Viral Video : ಎಳೆಯರೊಂದಿಗೆ ಮಾತನಾಡಲು ವಯಸ್ಸಾದವರ ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ಎಳೆಯರಿಗೆ ಸಮಯವೆಲ್ಲಿದೆ? ಒಮ್ಮೆ ಅವರ ಬಳಿ ಕೂತು ಮಾತನಾಡಿಸಿ ನೋಡಿ. ಮಕ್ಕಳಲ್ಲಿರುವ ಮುಗ್ಧತೆ, ಕುತೂಹಲ ಅವರ ಮುಖದಲ್ಲಿ ಹೇಗೆ ಅರಳುತ್ತದೆ ಎನ್ನುವುದನ್ನು ಗಮನಿಸಿ. ನಿಮ್ಮ ಒಂದು ಸ್ಪರ್ಶ ಅವರಲ್ಲಿರುವ ಆಪ್ತತೆಯ ಸೆಲೆಯನ್ನು ಹೇಗೆ ಸ್ಫುರಣಗೊಳ್ಳುವಂತೆ ಮಾಡುತ್ತದೆಯೆಂದು ಅನುಭವಿಸಿ. ಈ ಎಲ್ಲ ಘಳಿಗೆಗಳು ನಿಮ್ಮನ್ನು ವಿನೀತರನ್ನಾಗಿಸುವ ಭಾವವನ್ನು ಅವಲೋಕಿಸಿಕೊಳ್ಳಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sutej Singh Pannu (@sutejpannu)

ಸಣ್ಣಸಣ್ಣ ಕ್ಷಣಗಳನ್ನು ಉತ್ಸಾಹದಿಂದ ಅನುಭವಿಸಲು ಸಾಧ್ಯವಾಗುವುದು ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಮಾತ್ರ. ಈ ವಿಡಿಯೋ ನೋಡಿದಿರಲ್ಲವೆ? ಛಾಯಾಗ್ರಾಹಕ ಸುತೇಜ್​ ಸಿಂಗ್​ ಪನ್ನು ಎನ್ನುವವರು ಈ ವೃದ್ಧದಂಪತಿಯ ಮನೆಯಂಗಳಕ್ಕೆ ಹೋಗಿದ್ದಾರೆ. ಇಬ್ಬರೂ ಎಳೆಬಿಸಿಲಿಗೆ ಒಡ್ಡಿಕೊಂಡು ಚಳಿಯಲ್ಲಿ ಬಿಸಿಬಿಸಿ ಚಹಾ ಕುಡಿಯುತ್ತ ಕೂತಿದ್ದಾರೆ. ನಿಮ್ಮದೊಂದು ಫೋಟೋ ತೆಗೆಯಬೇಕು  ಎಂದು ಸುತೇಜ್​ ಕೇಳಿದಾಗ ಇಬ್ಬರೂ ಉತ್ಸಾಹದಿಂದ ಪೋಸ್​ ಕೊಡುತ್ತಾ ಹೋಗುತ್ತಾರೆ.

ಇದನ್ನೂ ಓದಿ : ‘ಎಂಬಿಎ ಚಾಯ್​ವಾಲಾ’ ರೂ. 90 ಲಕ್ಷದ ಮರ್ಸಿಡೀಝ್​ ಕಾರು ಖರೀದಿಸಿದ ವಿಡಿಯೋ ವೈರಲ್

ಒಂದು ಸೆಷನ್​ ಮುಗಿದಮೇಲೆ ಫೋಟೋ ಪ್ರಿಂಟ್​ ಮಾಡಿ ಅದನ್ನು ಆ ವೃದ್ಧೆಗೆ ಕೊಡುತ್ತಿರುವಾಗ, ತಾನು ಹೊದ್ದುಕೊಂಡ ಶಾಲನ್ನು ಚಾಚಿ ಆ ಫೋಟೋ ಇಸಿದುಕೊಳ್ಳುತ್ತಾಳೆ! ಆನಂತರ ಮತ್ತಷ್ಟು ಫೋಟೋ ತೆಗೆಸಿಕೊಳ್ಳುವ ಉತ್ಸಾಹ ಈ ದಂಪತಿಯಲ್ಲಿ ಉಕ್ಕುತ್ತದೆ. ಮೈಚಳಿ ಬಿಟ್ಟು ಇಬ್ಬರೂ ಪೋಸ್ ಕೊಡಲಾರಂಭಿಸುತ್ತಾರೆ. ಈ ಭಾವಪೂರ್ಣ ಮತ್ತು ಪರಿಶುದ್ಧ ಘಳಿಗೆಗಳನ್ನು ಪದೇಪದೆ ನೋಡುತ್ತ ಕುಳಿತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು

ಈತನಕ ಈ ಪೋಸ್ಟ್ ಅನ್ನು ಸುಮಾರು ಏಳು ಮಿಲಿಯನ್​ ಜನರು ನೋಡಿದ್ದಾರೆ. ಇನ್ನೇನು ಈ ಪೋಸ್ಟ್​ ಇಷ್ಪಪಟ್ಟವರ ಸಂಖ್ಯೆ 7.5 ಲಕ್ಷಕ್ಕೆ ತಲುಪುತ್ತದೆ. ಸಾವಿರಾರು ಜನರು ಈ ವಿಡಿಯೋ ಅನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಾರೆ. ಹಿರಿಯರಿಗೆ ಹಿಡಿ ಪ್ರೀತಿಗಿಂತ ಇನ್ನೇನು ಬೇಡ ಎಂದು ಹೇಳಿದ್ದಾರೆ. ಈ ವಿಡಿಯೋ ಬಹಳ ಅಮೂಲ್ಯ, ನನ್ನನ್ನು ಇದು ವಿನೀತನನ್ನಾಗಿಸಿದೆ ಎಂದಿದ್ದಾರೆ ಒಬ್ಬರು. ಇಂಥ ಸರಳತೆ, ಸುಂದರತೆ ಜಗತ್ತಿನಲ್ಲಿ ಇನ್ನೇನು ಕೊಟ್ಟರೂ ಸಿಗಲಾರದು ಎಂದಿದ್ದಾರೆ ಮತ್ತೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:37 am, Fri, 17 February 23

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ