AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು

Euro : ಅರೆ ವ್ಹಾ! ರೂ. 20 ಆಟೋ ರೈಡ್​ಗೆ ರೂ. 88 ವಾಪಸ್ ಎಂದು ಒಬ್ಬರು. ಇದೇ ಆಟೋವಾಲಾ ಪಾನವಾಡಿ ಘಾಟ್​ನಲ್ಲಿ ಒಂದು ಕಟ್ ಬೀಡಿಗೆ 100 ಡಾಲರ್​ ಕೊಡುತ್ತಿದ್ದುದನ್ನು ನೋಡಿದೆ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.

ಆಟೋ ಅಂಕಲ್​ ರೂ. 5ರ ಬದಲಿಗೆ 1 ಯೂರೋ ಕೊಟ್ಟರೆ? ಇದು ವಿಶ್ವಗುರು ಮೂಮೆಂಟ್​ ಎಂದ ನೆಟ್ಟಿಗರು
1 ಯೂರೋ ನಾಣ್ಯ
TV9 Web
| Edited By: |

Updated on: Feb 17, 2023 | 10:23 AM

Share

Viral News :  ಯುವತಿಯೊಬ್ಬರು ರಿಕ್ಷಾ ಇಳಿದು ಆಟೋ ಡ್ರೈವರ್​ನಿಂದ ಚಿಲ್ಲರೆ ಇಸಿದುಕೊಳ್ಳುವಾಗ ಆತ ಐದು ರೂಪಾಯಿ ನಾಣ್ಯದ ಬದಲಿಗೆ 1 ಯೂರೋ ನಾಣ್ಯವನ್ನು ಕೊಟ್ಟಿದ್ದಾನೆ. ಐದು ರೂಪಾಯಿ ಮತ್ತು 1 ಯೂರೋ ನಾಣ್ಯ ನೋಡಲು ಒಂದೇ ತೆರನಾಗಿ ಇರುವುದರಿಂದ ಹೀಗೆ ಆಗಿರುವ ಸಾಧ್ಯತೆ ನಿಚ್ಚಳವಾಗಿದೆ. ಆ ಯುವತಿ ಇದೀಗ ಫೋಟೋ ಟ್ವೀಟ್ ಮಾಡಿದ್ದು ವೈರಲ್ ಆಗುತ್ತಿದೆ. ನಿನ್ನೆ ಮಾಡಿದ ಈ ಟ್ವೀಟ್​ ಅನ್ನು ಈತನಕ 2.5 ಲಕ್ಷ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ಈ ಪೋಸ್ಟ್ ಇಷ್ಟಪಟ್ಟಿದ್ದಾರೆ. 150ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸಾಕಷ್ಟು ಜನರು ಪ್ರತಿಕ್ರಿಯಿಸುತ್ತಲೇ ಇದ್ದಾರೆ.

ಇದು ವಿಶ್ವಗುರು ಮೂ​ಮೆಂಟ್​! ಎಂದಿದ್ದಾರೆ ಒಬ್ಬರು. ನೀವು ಈ ನಾಣ್ಯವನ್ನು ನಿಮ್ಮ ಆಪ್ತಮಿತ್ರನಿಗೆ ಗಿಫ್ಟ್​ ಕೊಡಬಹುದು ಎಂದಿದ್ದಾರೆ ಮತ್ತೊಬ್ಬರು. ಈ ಆಟೋವಾಲಾ, ಪಾನವಾಡಿ ಘಾಟ್​ನಲ್ಲಿ ಒಂದು ಬೀಡಿಕಟ್ಟಿಗೆ 100 ಡಾಲರ್ ನೋಟನ್ನು ಕೊಡುತ್ತಿದ್ದುದನ್ನು ನೋಡಿದೆ! ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು. ಅಯ್ಯೋ ನಾನು ಇಂಡಿಯಾ ಪ್ರವಾಸದಲ್ಲಿದ್ಧಾಗ ಒಂದು ಯೂರೋ ನಾಣ್ಯ ಕಳೆದುಕೊಂಡಿದ್ದೆ. ಅದೇ ಇರಬೇಕು ಇದು ಎಂದು ಇನ್ನೂ ಒಬ್ಬರು ತಮಾಷೆ ಮಾಡಿದ್ದಾರೆ. ನಿಮಗೆ ಆ ನಾಣ್ಯ ಬೇಡವಾದರೆ ನನಗೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ ಒಬ್ಬರು.

ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್

ರೂ.20 ಆಟೋ ರೈಡ್​ಗೆ ರೂ. 88 ಮರಳಿ ಪಡೆಯುವುದೆಂದರೆ ಚಾನ್ಸ್​! ಎಂದಿದ್ದಾರೆ ಮತ್ತೊಬ್ಬರು. ನೀವು ಆ ಹಣವನ್ನು ಯಾಕೆ ತೆಗೆದುಕೊಂಡಿರಿ? ವಾಪಸ್ ಕೊಡಬೇಕಿತ್ತು, ಟ್ವಿಟರ್​ನಲ್ಲಿ ತೋರಿಸುವುದಕ್ಕಾ ತೆಗೆದುಕೊಂಡಿದ್ದು?​ ಎಂದು ಕೇಳಿದ್ದಾರೆ ಮಗದೊಬ್ಬರು. ಎರಡು ದಿನಗಳ ಹಿಂದೆ ನಾನು ಬಸ್​ ಕಂಡಕ್ಟರ್​ನೊಬ್ಬ ರೂ. 10 ಬದಲಿಗೆ ರೂ. 10 ಥಾಯ್​ ಬಾತ್ ಪಡೆದಿದ್ದೇನೆ ಎಂದಿದ್ದಾರೆ ಒಬ್ಬರು.

ನಿಮಗೂ ಇಂಥ ಅನುಭವಗಳು ಆಗಿವೆಯೇ?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ