AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿ.ಟೆಕ್​​ ಚಾಯ್​ವಾಲಿ’ ಬಿಹಾರ ವಿದ್ಯಾರ್ಥಿನಿಯ ಈ ಸ್ಟಾರ್ಟ್​ಅಪ್​; ನೆಟ್ಟಿಗರಿಂದ ಶಭಾಷ್

Startup : ‘ಬಿ.ಟೆಕ್ ಪದವಿ ಮುಗಿಸಲು ನಾಲ್ಕು ವರ್ಷ ಕಾಯಬೇಕು. ಹಾಗಾಗಿ ಈಗಿನಿಂದಲೇ ನನ್ನ ಓದಿನ ಜೊತೆಗೆ ಈ ಸ್ಟಾರ್ಟ್​ಅಪ್​ ಶುರುಮಾಡಿದ್ದೇನೆ. ಭಾರತದಾದ್ಯಂತ ನನ್ನ ಉದ್ಯಮ ವಿಸ್ತರಿಸಬೇಕು, ನಾನು ಜನಕ್ಕೆ ಉದ್ಯೋಗ ನೀಡುವಂತಾಗಬೇಕು.’

‘ಬಿ.ಟೆಕ್​​ ಚಾಯ್​ವಾಲಿ’ ಬಿಹಾರ ವಿದ್ಯಾರ್ಥಿನಿಯ ಈ ಸ್ಟಾರ್ಟ್​ಅಪ್​; ನೆಟ್ಟಿಗರಿಂದ ಶಭಾಷ್
This Bihar Student Starts Her Tea Startup In Faridabad As BTech Chaiwali
TV9 Web
| Updated By: ಶ್ರೀದೇವಿ ಕಳಸದ|

Updated on:Oct 14, 2022 | 1:32 PM

Share

Viral Video : ಕಲಿಕೆಯೊಂದಿಗೆ ಗಳಿಕೆ ಎಂಬ ಪರಿಕಲ್ಪನೆಯ ಬಗ್ಗೆ ನಿಮಗೆ ತಿಳಿದೇ ಇದೆ. ನಿಮ್ಮ ಸುತ್ತಮುತ್ತಲೂ ಸಾಕಷ್ಟು ಯುವಕ-ಯುವತಿಯರು ವಿದ್ಯಾಭ್ಯಾಸದೊಂದಿಗೆ ಪಾರ್ಟ್​ ಟೈಮ್​ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಾರಣ, ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯೆಂದೋ ಅಥವಾ ಸ್ವಂತ ಖರ್ಚಿಗೆ ಹಣ ಬೇಕೆಂದೋ. ಒಟ್ಟಾರೆ ಜೀವನ ಸಾಗಲು ಹೀಗೊಂದು ಸ್ವಾವಲಂಬಿ ಉಪಾಯ. ಆದರೆ ಇದೀಗ ಕಾಲ ಬದಲಾಗುತ್ತಿದೆ. ಯುವಕ-ಯವತಿಯರು ಜೀವನ ನಿರ್ವಹಣೆಯ ಬಗ್ಗೆ ಮಾತ್ರ ಯೋಚಿಸದೆ ದೊಡ್ಡ ದೊಡ್ಡ ಕನಸುಗಳನ್ನು ಕಾಣಲಾರಂಭಿಸಿದ್ದಾರೆ. ಅವುಗಳನ್ನು ನನಸಾಗಿಸಿಕೊಳ್ಳಲು ವಿದ್ಯಾರ್ಥಿ ಜೀವನದಿಂದಲೇ ವೇದಿಕೆಯನ್ನು ರೂಪಿಸಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಉದಾಹರಣೆ ಬಿ.ಟೆಕ್ ಓದುತ್ತಿರುವ ಬಿಹಾರದ ವರ್ಟಿಕಾ ಸಿಂಗ್ ಎಂಬ ತರುಣಿ. ಫರೀದಾಬಾದ್​ನಲ್ಲಿ ಈಕೆ ‘ಬಿ.ಟೆಕ್ ಚಾಯ್​ವಾಲಿ’ ಎಂಬ ಸ್ಟಾರ್ಟ್​ಅಪ್​ ಆರಂಭಿಸಿ ಜನರ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Swag Se Doctor (@swagsedoctorofficial)

ಹರಿಯಾಣಾದ ಫರೀದಾಬಾದ್​ನ ಗ್ರೀನ್​ ಫೀಲ್ಡ್​ ಬಳಿ ಇವರ ಚಹಾದ ಅಂಗಡಿ ಇದೆ. ಸಂಜೆ 5.30ರಿಂದ ರಾತ್ರಿ 9ರತನಕ ಮಾತ್ರ ಅಂಗಡಿ ತೆರೆದಿರುತ್ತದೆ. ಮಸಾಲಾ ಮತ್ತು ಲೆಮನ್​ ಚಹಾಕ್ಕೆ ತಲಾ ರೂ. 20. ಸಾದಾ ಚಹಾಕ್ಕೆ ರೂ. 10. ‘ಪದವಿಯನ್ನು ಮುಗಿಸಲು ನಾಲ್ಕು ವರ್ಷಗಳು ಬೇಕಾಗುತ್ತವೆ. ಅಷ್ಟು ವರ್ಷ ಯಾಕೆ ಸಮಯವನ್ನು ವ್ಯಯಿಸಬೇಕು? ನನ್ನ ಕನಸಿನ ಪುಟ್ಟಪುಟ್ಟ ಹೆಜ್ಜೆಗಳನ್ನು ಈಗಿನಿಂದಲೇ ಶುರುಮಾಡೋಣವೆನ್ನಿಸಿತು. ಸಂಜೆತನಕ ಕಾಲೇಜು. ನಂತರ ಚಹಾದಂಗಡಿ. ನನ್ನ ಚಹಾದ ಅಂಗಡಿ ಮಳಿಗೆಗಳು ಭಾರತದಾದ್ಯಂತ ತೆರೆಯುವಂತಾಗಬೇಕು, ನಾನು ಇನ್ನೊಬ್ಬರಿಗೆ ಕೆಲಸ ಕೊಡುವಂತಾಗಬೇಕು.’ ಎನ್ನುತ್ತಾರೆ ವರ್ಟಿಕಾ.

ಇದನ್ನೂ ಓದಿ : ‘ಬಿಕಾಂ ಇಡ್ಲಿವಾಲೆ’ ಫರೀದಾಬಾದ್​ನಲ್ಲಿ ಹೀಗೊಂದು ಬೈಕ್​ಕ್ಯಾಂಟೀನ್

swagsedoctorofficial ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ವಿಡಿಯೋ ಸುಮಾರು 56,000 ಜನರನ್ನು ತಲುಪಿದೆ. ಈ ವಿದ್ಯಾರ್ಥಿನಿಯ ಪ್ರಯತ್ನವನ್ನು ಮತ್ತು ಆಶಯವನ್ನು ನೆಟ್ಟಿಗರು ಪ್ರಶಂಸಿದ್ದಾರೆ. ‘ನಿಮ್ಮ ಮಾತು ಮತ್ತು ನಗುವಿನೊಳಗಿನ ಆತ್ಮವಿಶ್ವಾಸ ನನ್ನನ್ನು ಸೆಳೆದಿದೆ, ನಿಮ್ಮ ಒಳ್ಳೆಯದಕ್ಕಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ಒಬ್ಬರು ಹಾರೈಸಿದ್ದಾರೆ. ‘ಹೀಗೇ ಮುಂದುವರಿಯಿರಿ. ಇನ್ನೊಂದು ವರ್ಷದಲ್ಲಿ ನೀವು ನಿಮ್ಮ ಬ್ರ್ಯಾಂಡ್​ ಅನ್ನು ಚಾಲ್ತಿಗೆ ತರುತ್ತೀರಿ’ ಎಂದಿದ್ಧಾರೆ ಮತ್ತೊಬ್ಬರು. ‘ನಿಮ್ಮ ಧೈರ್ಯವನ್ನು ಅಪಾರವಾಗಿ ಗೌರವಿಸುತ್ತೇನೆ’ ಎಂದಿದ್ದಾರೆ ಮಗದೊಬ್ಬರು.

ಯಾವ ಕೆಲಸವೂ ಮೇಲುಕೀಳಲ್ಲ. ಕೆಲಸ ಎನ್ನವುದು ಈವತ್ತು ಕೌಶಲವಾಗಿ ಪರಿವರ್ತನೆಗೊಂಡಿದೆ. ಹಾಗಾಗಿ ಯಾರೂ ಯಾವ ಕೆಲಸವನ್ನೂ ಮಾಡಲು ಅವಕಾಶವಿದೆ. ಹೀಗೆ ಕನಸಿನೊಂದಿಗೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗುತ್ತಿರುವ ಇಂಥ ಯುವಪೀಳಿಗೆಯ ಬಗ್ಗೆ ಪೋಷಕರು ಮತ್ತು ಸಮಾಜ ಹೆಮ್ಮೆ ಪಡಬೇಕಲ್ಲವೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:24 pm, Fri, 14 October 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!