Trending : ಅಳುವ ಸೆಲ್ಫಿ ಹಾಕಿದ ಸಿಇಒ, ಮೊಸಳೆ ಕಣ್ಣೀರೆಂದು ಟೀಕಿಸಿದ ನೆಟ್ಟಿಗರು
Selfie : ತನ್ನ ಕಂಪೆನಿಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ನಂತರ ಲಿಂಕ್ಡಿನ್ನಲ್ಲಿ ಅಳುತ್ತಿರುವ ಸೆಲ್ಫಿ ಹಾಕಿರುವ ಸಿಇಒ
Trending News : ತನ್ನ ಕಂಪೆನಿಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ನಂತರ ಸಿಇಒ ಅಳುತ್ತಿರುವ ತಮ್ಮ ಸೆಲ್ಫಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಅಮೆರಿಕದ ಓಹಿಯೋ ಮೂಲದ ಹೈಪರ್‌ಸ್ಪೇಸ್‌ನ ಕಂಪೆನಿಯ ಸಿಇಒ ಬ್ರಾಡೆನ್ ವಾಲೇಕ್ ಅವರ ಈ ಪೋಸ್ಟ್ ಕುರಿತು ನೆಟ್ಟಿಗರು ಸಾಕಷ್ಟು ಚರ್ಚೆ ಮಾಡಿದ್ದಾರೆ. ಅಳುತ್ತಿರುವ ಸೆಲ್ಫಿ ಹಾಕಿದ್ದಕ್ಕೆ ನಿಂದಿಸಿ, ಟೀಕಿಸಿದ್ಧಾರೆ. ಕಂಪೆನಿಗಳು ಇತ್ತೀಚೆಗೆ ಹುಟ್ಟುಹಾಕುತ್ತಿರುವ ಕೆಲಸದ ಸಂಸ್ಕೃತಿಯ ಬಗ್ಗೆ ಅನೇಕರು ಚರ್ಚಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಾಡೆನ್ ಲಿಂಕ್ಡಿನ್ನಲ್ಲಿ ಹಂಚಿಕೊಂಡ ಈ ಪೋಸ್ಟ್ 23, 000ಕ್ಕೂ ಹೆಚ್ಚು ಲೈಕ್ಸ್ ಮತ್ತು 6,000ಕ್ಕೂ ಹೆಚ್ಚು ಪ್ರತಿಕ್ರಿಯೆಯನ್ನು ಹೊಂದಿದೆ.
ಬ್ರಾಡೆನ್ ಅವರ ಪೋಸ್ಟಿಗೆ ಮೊಸಳೆ ಕಣ್ಣೀರು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ‘ಜನರು ಇದನ್ನು ನೋಡಲೆಂದೇ ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದೇನೆ. ಇಲ್ಲಿರುವ ಸಾವಿರಾರು ಸಿಇಒಗಳೆಲ್ಲರೂ ನಿರ್ದಯಿಯಾಗಿರುವುದಿಲ್ಲ. ನನ್ನಂತೆ ಯೋಚಿಸುವವರೂ ಇಲ್ಲಿರುತ್ತಾರೆ. ಸಾಮಾನ್ಯವಾಗಿ ವಜಾಗೊಳಿಸುವುದಾದರೆ ಒಬ್ಬರು, ಇಬ್ಬರು ಬಹಳವೆಂದರೆ ಮೂರು ಜನರನ್ನು ವಜಾಗೊಳಿಸಲಾಗುತ್ತದೆ. ಎಂದೂ 50ರಿಂದ 500, 5000 ವರೆಗೆ ವಜಾಗೊಳಿಸಲಾಗದು. ನನ್ನ ಉದ್ಯೋಗಿಗಳೆಲ್ಲರಿಗೂ ಗೊತ್ತಿದೆ ನಾನು ಅವರನ್ನು ಎಷ್ಟು ಪ್ರೀತಿಸುತ್ತಿದ್ದೆ ಎನ್ನುವುದು’ ಎಂದು ಬ್ರಾಡೆನ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಉದ್ಯೋಗದ ಬಗ್ಗೆ ಕಂಪೆನಿಗಳಲ್ಲಿ ಉಂಟಾಗುತ್ತಿರುವ ಅನಿಶ್ಚಿತೆ ಮತ್ತು ಕಂಪೆನಿಗಳ ಕಾರ್ಯನಿರ್ವಹಣೆಯ ಬಗೆಗಿನ ವೈಫಲ್ಯಗಳ ಬಗ್ಗೆ ಅನೇಕರು ತಮ್ಮ ಅಭಿಪ್ರಾಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರಂತೂ ವಾಲೆಕ್ರನ್ನು ನಾರ್ಸಿಸಿಸ್ಟ್ ಎಂದೂ ಟೀಕಿಸಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ