Viral Video: 10, 20, 30, 40 …ಕೂಕ್? ನಾಯಿಯೊಂದಿಗೆ ಕಣ್ಣುಮುಚ್ಚಾಲೆಯಾಟ
Hide and Seek : ಆಟವಾಡುವಾಗ ಇರುವ ಸಹಕಾರ ಮನೋಭಾವ ಇದೆಯಲ್ಲ, ಅದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಾಯಿಯ ಎಕ್ಸ್ಪ್ರೆಷನ್ ನಿಮ್ಮ ಮನಸ್ಸನ್ನು ಕದಿಯದಿದ್ದರೆ ಹೇಳಿ.
Viral : ಸಾಕುಪ್ರಾಣಿಗಳೊಂದಿಗೆ ಮಕ್ಕಳು ಆಡುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನೋಡುತ್ತಲೇ ಇರುತ್ತೀರಿ. ಆದರೆ ಇಲ್ಲಿರುವ ವಿಡಿಯೋ ಮಾತ್ರ ಬಹಳ ವಿಶಿಷ್ಟವಾಗಿದೆ. ಇಲ್ಲಿರುವ ಪುಟ್ಟ ಹುಡುಗಿ ತನ್ನ ನಾಯಿಯೊಂದಿಗೆ ಮನೆಯ ಒಳಾಂಗಣದಲ್ಲಿ ಕಣ್ಣುಮುಚ್ಚಾಲೆಯಾಟ ಆಡುತ್ತಿದ್ದಾಳೆ. ಆಟದಲ್ಲಿ ಅವಳು ಹೇಳುವ ಮಾತುಗಳನ್ನು ಕೇಳಿಸಿಕೊಂಡು ತಕ್ಷಣವೇ ಅದನ್ನು ಪಾಲಿಸುತ್ತದೆ ಈ ಮುದ್ದಾದ ನಾಯಿ. ಗೋಡೆ ಎಂದರೆ ಗೋಡೆಗೆ ಹೋಗಿ ಮುಖ ಅವಿತಿಟ್ಟುಕೊಳ್ಳುವುದು, ಕೋಣೆ ಎಂದರೆ ಕೋಣೆಗೆ ಹೋಗಿ ಅಡಗುವುದು. ಹೀಗೆ…
ತನ್ಸು ವೆಗೆನ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿ
The best friend to play ‘hide and seek’ game…
— Tansu YEĞEN (@TansuYegen) August 9, 2022
ಅವಳ ಕರೆಯನ್ನೇ ಕಾಯುತ್ತ ತನ್ನ ಮುಖವನ್ನು ಗೋಡೆಗೆ ಅವಿತಿಟ್ಟುಕೊಂಡ ನಾಯಿ ಮಧ್ಯೆ ಒಮ್ಮೆ ಹೊರಳಿ ಅವಳನ್ನು ನೋಡುತ್ತದೆ. ಮತ್ತೆ ಅವಳ ಕರೆ ಬರುವ ತನಕ ಗೋಡೆಗೆ ಮುಖ ಅವಿತುಕೊಂಡು ನಿಲ್ಲುತ್ತದೆ. ಎಂಥ ಮುದ್ದಾದ ವಿಡಿಯೋ ಅಲ್ಲವಾ ಇದು? ಈ ಮಧ್ಯಾಹ್ನದಲ್ಲಿ ನಿಮ್ಮ ನಿದ್ದೆ ಹಾರಿಹೋಗುವುದು ಗ್ಯಾರಂಟಿ!
1.8 ಮಿಲಿಯನ್ ವೀಕ್ಷಣೆ, ಸುಮಾರು 52 ಸಾವಿರ ಲೈಕ್ಸ್ ಹೊಂದುವ ಮೂಲಕ ನೆಟ್ಟಿಗರ ಮನ ಕದ್ದಿದೆ. ಆಡುವಾಗ ಅನುಸರಿಸುವ ಸಹಕಾರ ಮನೋಭಾವ ಇದೆಯಲ್ಲ. ಅದನ್ನು ಬಹಳ ನೆಟ್ಟಿಗರು ಮೆಚ್ಚಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:15 pm, Thu, 11 August 22