Video Viral : ಬಲೂನು ಮಾರುವ ಹುಡುಗರ ನಾಯಿಪ್ರೀತಿ
Dog Love : ಇವರುಗಳೆಲ್ಲ ಮತ್ತೆ ಯಾವಾಗ ಭೇಟಿಯಾಗಬಹುದೋ ಗೊತ್ತಿಲ್ಲ. ಆದರೆ ಕ್ಷಣದಲ್ಲೇ ಮನಸ್ಸು ಅರಳಿ ಮುದ್ದಾಡಿರುವ ಕ್ಷಣಗಳನ್ನು ನೋಡಿ...
Viral : ಬಲೂನು ಮಾರುವ ಹುಡುಗನೊಬ್ಬ ಕಾರಿನೆಡೆ ಬರುತ್ತಾನೆ. ಹಿಂಬದಿ ಸೀಟಿನಲ್ಲಿ ಕುಳಿತ ನಾಯಿಯೊಂದಿಗೆ ಆಟವಾಡುತ್ತಾ ಮೈಮರೆಯುತ್ತಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೃದಯ್ಪರ್ಶಿಯಾದ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟರ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹುಡುಗನೊಂದಿಗೆ ಇರುವ ಇನ್ನೊಬ್ಬ ಪುಟ್ಟ ಬಾಲಕನೂ ನಾಯಿಯೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾನೆ. ಇಬ್ಬರೂ ಸೇರಿ ನಾಯಿಯನ್ನು ಮುದ್ದಾಡುವುದು, ಶೇಕ್ ಹ್ಯಾಂಡ್ ಮಾಡುವುದು, ಮಾತನಾಡಿಸುವುದನ್ನು ನೋಡಿದ ಯಾರಿಗೂ ಮನಸ್ಸು ಮೃದುವಾಗದೇ ಇರದು.
प्रेम ही हम सभी का आधार है, ऊँच-नीच, भेद-भाव, आदि तो सिखा दिया जाता है… pic.twitter.com/hdUgZHSb6A
— Dipanshu Kabra (@ipskabra) August 9, 2022
ಈ ವಿಡಿಯೋ 45,000 ಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಈ ಹುಡುಗರು ಯಾರೋ ಎಂತೋ, ಈ ನಾಯಿ ಕಿಟಕಿಯಿಂದ ಜಗತ್ತನ್ನು ನೋಡುತ್ತಾ ತನ್ನ ಪಾಡಿಗೆ ತಾನು ಕಾರಲ್ಲಿರಬಹುದಿತ್ತಲ್ಲವಾ? ಆದರೆ ಹಾಗೆ ಮಾಡದೆ ಅಪರಿಚಿತ ಹುಡುಗರ ಮನಸ್ಸನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಹೀಗೆ ಆಪ್ತವಾಗಿ ಒಡನಾಡಿದೆ. ಸ್ನೇಹ ಪ್ರೀತಿ ಎನ್ನುವುದು ಎಂದಿಗೂ ಪರಸ್ಪರ.
ಇನ್ನಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:00 pm, Thu, 11 August 22