Viral Video: ‘ತಲ್ಲುಮಾಲ’ ಸಿನೆಮಾ ಪ್ರಚಾರ ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮ

TV9 Digital Desk

| Edited By: ಶ್ರೀದೇವಿ ಕಳಸದ

Updated on: Aug 11, 2022 | 12:16 PM

Thallumala : ತಮ್ಮ ನೆಚ್ಚಿನ ನಾಯಕ ನಟನಟಿಯರನ್ನು ನೋಡಲು ನೆರೆದ ಈ ಜನಸ್ತೋಮದಿಂದಾಗಿ ಸಿನೆಮಾದ ಪ್ರಚಾರ ಕಾರ್ಯಕ್ರಮವೇ ರದ್ದಾಯಿತು.

Viral Video: ‘ತಲ್ಲುಮಾಲ' ಸಿನೆಮಾ ಪ್ರಚಾರ ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮ
ಕೋಝಿಕೋಡ್​ನ ಹೈಲೈಟ್ ಮಾಲ್​ನಲ್ಲಿ ನೆರೆದ ಜನಜಂಗುಳಿ

Thallumala : ತಲ್ಲುಮಾಲ ಸಿನೆಮಾದ ಪ್ರೊಮೋಷನಲ್ ಇವೆಂಟ್​ ಕೇರಳದ ಕೋಝಿಕ್ಕೋಡ್​ನ ಹೈಲೈಟ್ ಮಾಲ್​ನಲ್ಲಿ ಏರ್ಪಾಡಾಗಿತ್ತು. ಅಲ್ಲಿ ನೆರೆದಿದ್ದ ಜನಸ್ತೋಮದ ವಿಡಿಯೋ ನೋಡಿದ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಖಲೀದ್​ ರೆಹಮಾನ್​ ನಿರ್ದೇಶನದ ಈ ಸಿನೆಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಚಿತ್ರನಟರನ್ನು ನೋಡಲು ಜನರು ಈ ಪರಿಯಲ್ಲಿ ಮುಗಿಬಿದ್ದಿದ್ದರು. ಇಲ್ಲಿ ಕಿಕ್ಕಿರಿದಿರುವ ಜನರ ಸುರಕ್ಷತೆಯ ಬಗ್ಗೆ ಆತಂಕ ಯಾರಿಗಾದರೂ ಉಂಟಾಗುವುದು ಸಹಜ. ಕೊನೆಗೆ ಸಂಘಟಕರು ಮಾಲ್​ನಲ್ಲಿ ಕಾರ್ಯಕ್ರಮವನ್ನೇ ರದ್ದುಗೊಳಿಸಬೇಕಾಯಿತು ಎಂದು ವರದಿ ತಿಳಿಸಿದೆ.

ಮಾಲ್​ನಲ್ಲಿ ಇಂಚು ಜಾಗವನ್ನೂ ಬಿಡದೆ ಜನರು ತುಂಬಿತುಳುಕಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಎ.ಬಿ. ಜಾರ್ಜ್​ ಎಂಬ ಟ್ವಿಟ್​ರ್ ಖಾತೆದಾರರು, ‘ಮಾಲ್​ನಲ್ಲಿ ಇಂಥ ದೊಡ್ಡ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ  ಇವೆಂಟ್​ ಮ್ಯಾನೇಜರುಗಳು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ದೊಡ್ಡ ದುರಂತಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಈ ವಿಡಿಯೋ ಅತ್ಯಂತ ಭಯಾನಕವಾಗಿದೆ’ ಎಂದಿದ್ದಾರೆ. ​

ಇದನ್ನೂ ಓದಿ

ಜುಲೈನಲ್ಲಿ ತಿರುವನಂತಪುರದ ಲುಲು ಮಾಲ್​ನಲ್ಲಿಯೂ ಇಂಥದೇ ಸಂದರ್ಭ ಸೃಷ್ಟಿಯಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಪ್ರಚಾರ ಕಾರ್ಯಗಳನ್ನು ಇಂಥ ಮಾಲ್​ನಲ್ಲಿ ಹಮ್ಮಿಕೊಂಡಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ. ಸಹಜವಾಗಿ ಅಂಗಡಿಗಳಲ್ಲಿ ಖರೀದಿಗೆ ಮುಂದಾಗುತ್ತಾರೆ. ಜುಲೈ 6ರ ಆ ದಿನ ರಾತ್ರಿ ಕಾರ್ಯಕ್ರಮವಿದ್ದುದರಿಂದ ಹೀಗೆಯೇ ಜನರು ನೆರೆದರು. 11.59ರಿಂದ ಮಾರನೇ ದಿನದ ಮುಂಜಾನೆವರೆಗೂ ಜನರೆಲ್ಲ ಖರೀದಿಯಲ್ಲಿ ನಿರತರಾಗಿದ್ದರು.

Viḍiyō: Īveṇṭ‌gāgi nūrāru jana kēraḷa

ಹಾಗಾಗಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಆಯೋಜಿಸಬೇಕು. ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇನ್ನಷ್ಟು ಇಂಥ ವೈರಲ್ ಸುದ್ದಿಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada