AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೈಟ್ ಕ್ಲಬ್​ಗೆ ಬಂದಿದ್ದ ಮಹಿಳೆಯ ಮೈ ಮುಟ್ಟಿದ ಬೌನ್ಸರ್​​ನ ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗ ಥಳಿತ; ವಿಡಿಯೋ ವೈರಲ್

ಬೌನ್ಸರ್‌ಗಳು ತಮ್ಮ ಕ್ಲಬ್​ಗೆ ಬಂದಿದ್ದವರನ್ನು ರಸ್ತೆಯಲ್ಲೇ ಎಳೆದುಕೊಂಡು ಹೋಗಿ, ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ನೈಟ್ ಕ್ಲಬ್​ಗೆ ಬಂದಿದ್ದ ಮಹಿಳೆಯ ಮೈ ಮುಟ್ಟಿದ ಬೌನ್ಸರ್​​ನ ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗ ಥಳಿತ; ವಿಡಿಯೋ ವೈರಲ್
ನೈಟ್​ಕ್ಲಬ್​ನಲ್ಲಿ ಬೌನ್ಸರ್​​ಗಳಿಂದ ಹಿಗ್ಗಾಮುಗ್ಗ ಥಳಿತ
TV9 Web
| Updated By: ಸುಷ್ಮಾ ಚಕ್ರೆ|

Updated on:Aug 11, 2022 | 10:54 AM

Share

ಗುರಗಾಂವ್: ನೈಟ್ ಕ್ಲಬ್‌ಗೆ ಬಂದಿದ್ದ ಮಹಿಳೆಯರು ಮತ್ತು ಪುರುಷರ ಗುಂಪಿನ ಮೇಲೆ ಹಲ್ಲೆ (Attack) ನಡೆಸಿದ ಬೌನ್ಸರ್​​ಗಳು ಅವರನ್ನು ಥಳಿಸಿರುವ ವಿಡಿಯೋ ವೈರಲ್ (Video Viral) ಆಗಿದೆ. ನೈಟ್​ಕ್ಲಬ್​ನ 6 ಬೌನ್ಸರ್​​ಗಳು ಮತ್ತು ಮ್ಯಾನೇಜರ್ ಸೇರಿಕೊಂಡು ಈ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬೌನ್ಸರ್​​ಗಳು ಪುರುಷರನ್ನು ಎಳೆದುಕೊಂಡು ಹೋಗಿ, ಥಳಿಸುತ್ತಿರುವುದನ್ನು ನೋಡಬಹುದು. ಐಟಿ ಉದ್ಯೋಗಿಗಳು ನೈಟ್​ಕ್ಲಬ್​ಗೆ ಬಂದಿದ್ದು, ಅವರ ಜೊತೆಗಿದ್ದ ಮಹಿಳೆಯ ಜೊತೆ ಬೌನ್ಸರ್​ ಅಸಭ್ಯವಾಗಿ ವರ್ತಿಸಿದ್ದರಿಂದ ಗಲಾಟೆ ಶುರುವಾಗಿದೆ. ನಂತರ ಆ ಬೌನ್ಸರ್​ಗಳು ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಬೌನ್ಸರ್‌ಗಳು ತಮ್ಮ ಕ್ಲಬ್​ಗೆ ಬಂದಿದ್ದವರನ್ನು ರಸ್ತೆಯಲ್ಲೇ ಎಳೆದುಕೊಂಡು ಹೋಗಿ, ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಪುರುಷರನ್ನು ರಕ್ಷಿಸಲು ಬಂದ ಮಹಿಳೆಯರ ಮೇಲೂ ಬೌನ್ಸರ್​​ಗಳು ಹಲ್ಲೆ ನಡೆಸಿದ್ದಾರೆ. ಈ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ಮಹಿಳೆಯೊಬ್ಬರು “ರಕ್ತ ಬರುತ್ತಿದೆ, ದಯವಿಟ್ಟು ಹೊಡೆಯುವುದನ್ನು ನಿಲ್ಲಿಸಿ,” ಎಂದು ಕಿರುಚುತ್ತಾ ಅಳುತ್ತಿದ್ದಾರೆ. ಆದರೆ, ಅದನ್ನು ಕೇಳದ ಬೌನ್ಸರ್‌ಗಳು ಮತ್ತೆ ಆ ಪುರುಷರ ಕಪಾಲಕ್ಕೆ ಹೊಡೆದು, ಥಳಿಸಿದ್ದಾರೆ.

ಇದನ್ನೂ ಓದಿ: Viral Video: ಶಾಸಕರೆದುರೇ ರಸ್ತೆ ಗುಂಡಿಯಲ್ಲಿ ಕುಳಿತು ಯೋಗ, ಸ್ನಾನ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

ಇದನ್ನೂ ಓದಿ
Image
ವೃತ್ತಿಯಿಂದ ಕಳ್ಳನಾದರೂ ಇವನ ಧಾರ್ಮಿಕ ಶ್ರದ್ಧೆ ಪ್ರಶ್ನಾತೀತವಾದದ್ದು!
Image
ವೈರಲ್ ವಿಡಿಯೋ; ಕೇರಳ ಯುವತಿ ಮದುವೆಯಾಗಿರುವ ಆಫ್ರಿಕನ್-ಅಮೇರಿಕನ್ ತನ್ನತ್ತೆ ಮಲೆಯಾಳಂನಲ್ಲಿ ಮಾತಾಡಿದ್ದನ್ನು ಅರ್ಥಮಾಡಿಕೊಂಡ
Image
Viral Video: ಶಾಸಕರೆದುರೇ ರಸ್ತೆ ಗುಂಡಿಯಲ್ಲಿ ಕುಳಿತು ಯೋಗ, ಸ್ನಾನ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

ಗುರುಗಾಂವ್ ನಗರದ ಉದ್ಯೋಗ್ ವಿಹಾರ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಬೌನ್ಸರ್‌ಗಳು ಸೇರಿದಂತೆ ಕ್ಲಬ್ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಎಫ್‌ಐಆರ್‌ನಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳಲ್ಲಿ ಒಬ್ಬರಾದ ಐಟಿ ಕಂಪನಿ ಉದ್ಯೋಗಿ ನೈಟ್ ಕ್ಲಬ್‌ಗೆ ಹೋದಾಗ ಬೌನ್ಸರ್ ಒಬ್ಬ ಆತನ ಜೊತೆ ಬಂದಿದ್ದ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದ. ಅದಕ್ಕೆ ಕೋಪಗೊಂಡ ಆ ವ್ಯಕ್ತಿ ಬೌನ್ಸರ್​ ಮೇಲೆ ಕಿರುಚಾಡಿದರು. ಆಗ ಅಲ್ಲಿಗೆ ಬಂದ ಕ್ಲಬ್ ಮ್ಯಾನೇಜರ್ ಬೌನ್ಸರ್‌ಗಳಿಗೆ “ಅವರನ್ನು ಹೊಡೆದು ಓಡಿಹೋಗಿ” ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಇದಾದ ನಂತರ ಕ್ಲಬ್​​ಗೆ ಬಂದಿದ್ದ ಗುಂಪು ಮತ್ತು ಬೌನ್ಸರ್​​ಗಳ ನಡುವೆ ಜಗಳ ಹೆಚ್ಚಾಗಿದೆ. ಆ ಗುಂಪಿನಲ್ಲಿದ್ದವರಿಗೆ ಹೊಡೆದಿದ್ದಷ್ಟೇ ಅಲ್ಲದೆ ಅವರ ಬಳಿಯಿದ್ದ ವಾಚ್ ಮತ್ತು ಸುಮಾರು 10,000 ರೂ. ಹಣವನ್ನು ಕಿತ್ತುಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Thu, 11 August 22

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ