ವೃತ್ತಿಯಿಂದ ಕಳ್ಳನಾದರೂ ಇವನ ಧಾರ್ಮಿಕ ಶ್ರದ್ಧೆ ಪ್ರಶ್ನಾತೀತವಾದದ್ದು!
ದೇಹವನ್ನು ಬಾಗಿಸಿ ದೇವಿಗೆ ನಮಸ್ಕರಿಸಿದ ನಂತರ ಅವನು ಕಾಣಿಕೆ ಪೆಟ್ಟಿಗೆ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯಲು ಮುಂದಾಗುತ್ತಾನೆ. ಸದರಿ ಘಟನೆಯು ಆಗಸ್ಟ್ 5 ರಂದು ನಡೆದಿದ್ದು ಕಳ್ಳನನ್ನು ಸೆರೆ ಹಿಡಿಯಲು ಪೊಲೀಸರು ಸಿಸಿಟಿವಿ ಫುಟೇಜನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರ (Jabalpur) ಜಿಲ್ಲೆಯ ಸುಖಾ ಹೆಸರಿನ ಗ್ರಾಮದಲ್ಲಿ ಕಳ್ಳನೊಬ್ಬ ದೇವಸ್ಥಾನದ ಒಳಭಾಗದಲ್ಲಿರುವ ಗರ್ಭಗುಡಿಯನ್ನು ಪ್ರವೇಶಿಸಿ ಅಲ್ಲಿದ್ದ ಹುಂಡಿ ಪೆಟ್ಟಿಗೆಯನ್ನು (offering box) ಹೊತ್ತೊಯ್ಯುವ ಮುನ್ನ ಅಲ್ಲಿರುವ ದೇವಿಯ (Goddess) ಮೂರ್ತಿಗೆ ಶ್ರದ್ಧೆಯಿಂದ ಕೈಮುಗಿಯುವುದು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ ಮತ್ತು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳ್ಳನ ನಡಾವಳಿ ನೆಟ್ಟಿಗರ ಗಮನ ಸೆಳೆಯುತ್ತಿದ್ದು ಸಾಕಷ್ಟು ಚರ್ಚೆಗೂ ಗ್ರಾಸವಾಗಿ ಸಾವಿರಾರು ವ್ಯೂಗಳನ್ನು ಕಲೆಹಾಕಿಕೊಂಡಿದೆ.
ವಿಡಿಯೋದಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡಿರುವ ಕಳ್ಳ ಪರದೆಯನ್ನು ಸರಿಸಿ ಗರ್ಭಗುಡಿಯನ್ನು ಪ್ರವೇಶಿಸುತ್ತಾನೆ ಅದರೆ ದೇವಿಯ ದೊಡ್ಡ ವಿಗ್ರಹವನ್ನು ಕಂಡು ಅವನು ಸ್ತಂಭೀಭೂತನಾಗುತ್ತಾನೆ.
Viral Video: A shirtless thief before stealing 2 donation boxes and bells, Bows down to Maa Laxmi in a temple in Jabalpur, MP. ????
One more Video ? pic.twitter.com/1qzJdqSoJj
— Naren Mukherjee ?? (@narendra52) August 10, 2022
ದೇಹವನ್ನು ಬಾಗಿಸಿ ದೇವಿಗೆ ನಮಸ್ಕರಿಸಿದ ನಂತರ ಅವನು ಕಾಣಿಕೆ ಪೆಟ್ಟಿಗೆ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯಲು ಮುಂದಾಗುತ್ತಾನೆ. ಸದರಿ ಘಟನೆಯು ಆಗಸ್ಟ್ 5 ರಂದು ನಡೆದಿದ್ದು ಕಳ್ಳನನ್ನು ಸೆರೆ ಹಿಡಿಯಲು ಪೊಲೀಸರು ಸಿಸಿಟಿವಿ ಫುಟೇಜನ್ನು ಪರಿಶೀಲನೆ ಮಾಡುತ್ತಿದ್ದಾರೆ.
ದೇವಸ್ಥಾನದ ಎರಡು ಗಂಟೆಗಳು ಮತ್ತು ಸ್ಥಳೀಯರು ದೇವಿಗೆ ಕಾಣಿಕೆಯಾಗಿ ಅರ್ಪಸಿದ ಬೆಲೆಬಾಳುವ ವಸ್ತುಗಳನ್ನು ಸಹ ಕಳ್ಳ ಕದ್ದಿರುವನೆಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ಟ್ವಿಟರ್ ನಲ್ಲಿ ಪೋಸ್ಟ್ ಆದಾಗಿನಿಂದ ಅದನ್ನು ನೋಡಿರುವ ಜನ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
‘ಭಕ್ತನೊಬ್ಬ ದೇವರ ಸನ್ನಿಧಾನದಿಂದ ಏನನ್ನಾದರೂ ಕಳುವು ಮಾಡಿದರೆ ಅದು ಕಳ್ಳತನವೆನಿಸಿಕೊಳ್ಳುವುದಿಲ್ಲ. ತನ್ನ ಕಷ್ಟದ ಸಮಯದಲ್ಲಿ ಒಬ್ಬ ಭಕ್ತ ದೇವರಿಂದ ಸಹಾಯ ಯಾಚಿಸುತ್ತಾನೆ!’ ಅಂತ ಒಬ್ಬರು ಟ್ಟೀಟ್ ಮಾಡಿದ್ದಾರೆ.