ಬಿಹಾರದ ಮಧುಬನಿಯ ವಿಶೇಷ ಮಾರುಕಟ್ಟೆಯಲ್ಲಿ ವರನೂ ಲಭ್ಯ, ಮದುವೆಗೆ ಗಂಡು ಹುಡುಕುವುದು ಇಲ್ಲಿ ಸುಲಭ!
ಪ್ರತಿಯೊಂದು ವರನ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಬೆಲೆ ನಿಗದಿಪಡಿಸಲಾಗುತ್ತದೆ. ವರನನ್ನು ಆಯ್ಕೆ ಮಾಡುವ ಮೊದಲು, ಕುಟುಂಬಗಳು ವರನ ಅರ್ಹತೆ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ
ಮಾರುಕಟ್ಟೆಯಲ್ಲಿ ವರನನ್ನು ಹುಡುಕುವುದು ರೋಮ್ಯಾಂಟಿಕ್ ಸಿನಿಮಾ ಸ್ಕ್ರಿಪ್ಟ್‌ನಂತೆ ಕಾಣಿಸಬಹುದು. ಆದರೆ ಮಾರುಕಟ್ಟೆಯಲ್ಲಿ ವರನನ್ನು ಖರೀದಿಸುವುದು ? ಒಂಥರಾ ವಿಚಿತ್ರವಾಗಿಲ್ಲವೇ? ಇದು ಸಿನಿಮಾ ಕತೆಯಲ್ಲ. ಬಿಹಾರದ (Bihar) ಮಧುಬನಿ ಜಿಲ್ಲೆಯಲ್ಲಿ ವರನ ಮಾರಾಟಕ್ಕೆಂದೇ ಮಾರುಕಟ್ಟೆ ಇದೆ. ಮಾರುಕಟ್ಟೆ ಪ್ರದೇಶದಲ್ಲಿ ಅರಳಿ ಮರಗಳ ಅಡಿಯಲ್ಲಿ 9 ದಿನಗಳ ಕಾಲ ಈ ಮಾರಾಟ ನಡೆಯುತ್ತದೆ. ಅಂದಹಾಗೆ ಇದೇನೂ ಹೊಸತಲ್ಲ. ಈ ಸಂಪ್ರದಾಯ 700 ವರ್ಷಗಳಿಂದಲೂ ಇದೆ. ಸ್ಥಳೀಯವಾಗಿ “ಸೌರತ್ ಸಭಾ” ಎಂದು ಕರೆಯಲ್ಪಡುವ ಮೈಥಿಲ್ ಬ್ರಾಹ್ಮಣ ಸಮುದಾಯದ ಜನರು ಜಿಲ್ಲೆಯಾದ್ಯಂತ ತಮ್ಮ ಹೆಣ್ಣುಮಕ್ಕಳೊಂದಿಗೆ ವರನನ್ನು ಆಯ್ಕೆ ಮಾಡಲು ಮಾರುಕಟ್ಟೆಗೆ ಬರುತ್ತಾರೆ. ಸಾಂಪ್ರದಾಯಿಕ ಕಡುಗೆಂಪು ಬಣ್ಣದ ಧೋತಿ ಮತ್ತು ಕುರ್ತಾ ಅಥವಾ ಜೀನ್ಸ್ ಮತ್ತು ಶರ್ಟ್‌ಗಳನ್ನು ಧರಿಸಿ ಮಾರುಕಟ್ಟೆಯಲ್ಲಿ ಸಾವಿರಾರು ವರಗಳು ತಮ್ಮ ಪೋಷಕರೊಂದಿಗೆ ಹಾಜರಿರುತ್ತಾರೆ. ಪ್ರತಿಯೊಂದು ವರನ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಬೆಲೆ ನಿಗದಿಪಡಿಸಲಾಗುತ್ತದೆ. ವರನನ್ನು ಆಯ್ಕೆ ಮಾಡುವ ಮೊದಲು, ಕುಟುಂಬಗಳು ವರನ ಅರ್ಹತೆ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಜನನ ಪ್ರಮಾಣಪತ್ರಗಳು, ಶಾಲಾ ಪ್ರಮಾಣಪತ್ರಗಳು, ಇತ್ಯಾದಿ ಪುರಾವೆಗಳನ್ನು ಸಹ ಕೇಳಲಾಗುತ್ತದೆ. ವಧು ವರನನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪ್ರಕ್ರಿಯೆಗಳಿಗಾಗಿ ಕುಟುಂಬಗಳ ನಡುವೆ ಸಂಭಾಷಣೆಯನ್ನು ಪ್ರಾರಂಭಿಸಲಾಗುತ್ತದೆ. ವರನ ಆಯ್ಕೆಯಾದ ತಕ್ಷಣ ಹುಡುಗಿಯ ಮನೆಯವರು ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಾರೆ.
Groom market’
In this unique 700-year-old tradition, the aspiring husbands stand in public display,
Village famous for its ” annual “groom market” in India’s Bihar state -in Madhubani district
Dowry though illegal in India, is prevalent and has a high social acceptance pic.twitter.com/G5428fE2Kz
— Elmi Farah Boodhari (@BoodhariFarah) August 4, 2022
ಸ್ಥಳೀಯ ಜನರ ನಂಬಿಕೆಗಳ ಪ್ರಕಾರ, ಈ ಆಚರಣೆಯು ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವಿಭಿನ್ನ “ಗೋತ್ರಗಳ” ಜನರ ನಡುವಿನ ವಿವಾಹಗಳನ್ನು ಸುಲಭಗೊಳಿಸಲು ರಾಜಾ ಹರಿ ಸಿಂಗ್ ಇದನ್ನು ಪ್ರಾರಂಭಿಸಿದರು. ಮದುವೆಗಳನ್ನು ವರದಕ್ಷಿಣೆ ರಹಿತವಾಗಿ ಮಾಡುವುದು ಇನ್ನೊಂದು ಉದ್ದೇಶವಾಗಿತ್ತು. ಆದರೆ, ಇಂದು ಈ ಮದುವೆಗಳಲ್ಲಿ ವರದಕ್ಷಿಣೆ ಕೊಡುವ ಮತ್ತು ತೆಗೆದುಕೊಳ್ಳುವ ಪರಿಪಾಠ ಬಹಳ ಪ್ರಚಲಿತದಲ್ಲಿದೆ ಎಂದು ವರದಿಗಳು ಹೇಳುತ್ತವೆ.
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Wed, 10 August 22