Viral Video: ಈ ಊಟವನ್ನು ಪ್ರಾಣಿಗಳೂ ತಿನ್ನೋದಿಲ್ಲ; ಪೊಲೀಸ್ ಮೆಸ್ ಊಟವನ್ನು ಹಿಡಿದು ಅಳುತ್ತಾ ನಿಂತ ಕಾನ್ಸ್ಟೆಬಲ್
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಮೆಸ್‌ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ರಸ್ತೆಯ ಮೇಲೆ ನಿಂತು ಅಳುತ್ತಾ ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಫಿರೋಜಾಬಾದ್: ಈ ರೀತಿಯ ಊಟವನ್ನು ಪ್ರಾಣಿಗಳು ಕೂಡ ತಿನ್ನಲು ಸಾಧ್ಯವಿಲ್ಲ. ಈ ವಿಷಯದ ಬಗ್ಗೆ ಗಲಾಟೆ ಮಾಡಿದರೆ ನನ್ನನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ನಮಗೆ ಸರಿಯಾದ ಊಟ ಸಿಗದಿದ್ದರೆ ನಾವು ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಉತ್ತರ ಪ್ರದೇಶದ (Uttar Pradesh) ಪೊಲೀಸ್ ರಸ್ತೆಯಲ್ಲಿ ನಿಂತು ಜೋರಾಗಿ ಅಳುತ್ತಾ, ತನಗೆ ನೀಡಲಾದ ಊಟವನ್ನು ಎಲ್ಲರಿಗೂ ತೋರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಪೊಲೀಸ್ ಮೆಸ್‌ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ರಸ್ತೆಯ ಮೇಲೆ ನಿಂತು ಪೊಲೀಸ್ ಒಬ್ಬರು ಅಳುತ್ತಾ ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
Here is an example… words of UP Police constable Manoj Kumar in Firozabad pic.twitter.com/YkzzJSOyBJ
— The Fact Finder (@TheFactFindr) August 10, 2022
ಪೊಲೀಸ್ ಕಾನ್‌ಸ್ಟೇಬಲ್ ಮನೋಜ್ ಕುಮಾರ್ ತಮಗೆ ಪೊಲೀಸ್ ಮೆಸ್‌ನಲ್ಲಿ ಪ್ರತಿದಿನ ನೀಡಲಾಗುವ ರೊಟ್ಟಿ, ದಾಲ್ ಮತ್ತು ಅನ್ನದ ತಟ್ಟೆಯನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಅಳುತ್ತಾ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಮತ್ತೆ ಪೊಲೀಸ್ ಠಾಣೆಯೊಳಗೆ ಕರೆದೊಯ್ಯುವ ಪ್ರಯತ್ನ ಮಾಡಿ, ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: Viral Video: ಶಾಸಕರೆದುರೇ ರಸ್ತೆ ಗುಂಡಿಯಲ್ಲಿ ಕುಳಿತು ಯೋಗ, ಸ್ನಾನ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್
A UP police constable posted in Firozabad district protests against the quality of food served at the mess in police lines. He was later whisked away. A probe has been ordered. pic.twitter.com/nxspEONdNN
— Piyush Rai (@Benarasiyaa) August 10, 2022
ಅಷ್ಟರಲ್ಲಿ ರಸ್ತೆಯಲ್ಲಿ ಹೋಗುತ್ತಿರುವವರೆಲ್ಲ ಮನೋಜ್ ಕುಮಾರ್ ಕೈಯಲ್ಲಿದ್ದ ಆಹಾರದ ತಟ್ಟೆಯನ್ನು ನೋಡುತ್ತಾ ಅಲ್ಲೇ ನಿಂತಿದ್ದಾರೆ. ನಮಗೆ ತೀರಾ ಕಳಪೆ ಗುಣಮಟ್ಟದ ಊಟ ಕೊಡಲಾಗುತ್ತಿದೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನೋಜ್ ಹೇಳಿದ್ದಾರೆ. ಒಳ್ಳೆಯ ಊಟ ಕೊಡಿ ಎಂದಿದ್ದಕ್ಕೆ ನನ್ನನ್ನು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದರು. ಆದರೆ, ಸುದೀರ್ಘ ಅವಧಿಯ ಕರ್ತವ್ಯ ನಿರ್ವಹಿಸಿದರೂ ನಮಗೆ ಸಿಗುವ ಊಟ ಈ ರೀತಿಯದ್ದು. ಇದನ್ನು ಪ್ರಾಣಿಗಳು ಕೂಡ ತಿನ್ನುವುದಿಲ್ಲ ಎಂದು ಮನೋಜ್ ಕುಮಾರ್ ಆರೋಪಿಸಿದ್ದಾರೆ.
मैस के खाने की गुणवत्ता से सम्बन्धित शिकायती ट्वीट प्रकरण में खाने की गुणवत्ता सम्बन्धी जांच सीओ सिटी कर रहे है।
उल्लेखनीय है कि उक्त शिकायतकर्ता आरक्षी को आदतन अनुशासनहीनता, गैरहाजिरी व लापरवाही से सम्बन्धित 15 दण्ड विगत वर्षो में दिये गये है । @Uppolice @dgpup @adgzoneagra
— Firozabad Police (@firozabadpolice) August 10, 2022
ನಮಗೆ ಸರಿಯಾದ ಆಹಾರ ಸಿಗದಿದ್ದರೆ ಪೊಲೀಸರು ಹೇಗೆ ಕೆಲಸ ಮಾಡಲು ಸಾಧ್ಯ? ಎಂದು ಮನೋಜ್ ಕುಮಾರ್ ಪ್ರಶ್ನಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಫಿರೋಜಾಬಾದ್ ಪೊಲೀಸರು, ಕಾನ್ಸ್ಟೆಬಲ್ ಮನೋಜ್ ಕುಮಾರ್ ಅವರಿಗೆ ಶಿಸ್ತಿಲ್ಲ. ಈಗಾಗಲೇ ಅವರು ಶಿಸ್ತಿನ ಕೊರತೆಯಿಂದ ಈ ಹಿಂದೆ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:13 pm, Thu, 11 August 22