Kannada News National Viral Video: People entered the police station and beat up the head constable
Viral Video: ಪೊಲೀಸ್ ಠಾಣೆಯೊಳಗೆ ನುಗ್ಗಿ ಹೆಡ್ ಕಾನ್‌ಸ್ಟೆಬಲ್‌ಗೆ ಥಳಿಸಿದ ಜನ
ಠಾಣೆಯೊಳಗೆ ಗುಂಪೊಂದು ನುಗ್ಗಿ ದೆಹಲಿ ಪೊಲೀಸರನ್ನು ನಿರ್ದಯವಾಗಿ ಥಳಿಸಿದೆ. ಘಟನೆಯ ವಿಡಿಯೋವನ್ನು ಮತ್ತೊಬ್ಬ ಪೋಲೀಸರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ದೆಹಲಿ: ಪೊಲೀಸ್ ಠಾಣೆಯೊಳಗೆ ಗುಂಪೊಂದು ನುಗ್ಗಿ ದೆಹಲಿ ಪೊಲೀಸರನ್ನು ನಿರ್ದಯವಾಗಿ ಥಳಿಸಿದೆ. ಘಟನೆಯ ವಿಡಿಯೋವನ್ನು ಮತ್ತೊಬ್ಬ ಪೋಲೀಸರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ವೀಡಿಯೋದಲ್ಲಿ 10-12 ಜನರ ಗುಂಪೊಂದು ಪೊಲೀಸರನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಬಹಳಷ್ಟು ಜನ ತಮ್ಮ ಫೋನ್‌ಗಳಲ್ಲಿ ಈ ದೃಶ್ಯವನ್ನು ಮತ್ತು ವೀಡಿಯೊಗಳನ್ನು ಚಿತ್ರೀಕರಿಸುವುದನ್ನು ನೋಡಬಹುದಾದರೂ, ಯಾರೂ ದಾಳಿಕೋರರನ್ನು ತಡೆಯಲು ಪ್ರಯತ್ನಿಸುವುದಿಲ್ಲ. ಆನಂದ್ ವಿಹಾರ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗೆ ಥಳಿಸಿದ್ದಾರೆ.
Viral video shows constable beaten by mob inside police station
ಇದನ್ನೂ ಓದಿ
One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್ ಹೋಗಿ
World Milk Day 2022: ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಹೇಗೆ ಇಲ್ಲಿದೆ ಓದಿ
World No Tobacco Day 2022: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ; ವಿಶ್ವ ಧೂಮಪಾನ ರಹಿತ ದಿನವನ್ನು ಏಕೆ ಆಚರಿಸುತ್ತಾರೆ ಇಲ್ಲಿದೆ ಓದಿ
Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!
ಪೊಲೀಸರಿಗೆ ಏಕೆ ಥಳಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಆಗಸ್ಟ್ 3 ರಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನ್‌ಸ್ಟೆಬಲ್ ಕ್ಷಮೆ ಕೇಳುತ್ತಲೇ ಇದ್ದಾನೆ, ಆದರೆ ಆತನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಪೊಲೀಸ್ಗೆ ಯಾರು ಥಳಿಸಿದರು ಎಂದು ಪತ್ತೆಯಾಗಿಲ್ಲ.
ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಹಿಡಿಯಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.