AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Goa: 18 ತಿಂಗಳ ಮಗುವನ್ನು ಕೊಂದು, ನದಿಗೆ ಹಾರಿದ ಮಹಿಳೆ

ಮಹಿಳೆಯೊಬ್ಬರು ತನ್ನ 18 ತಿಂಗಳ ಮಗಳನ್ನು ಕೊಂದು, ನಂತರ ತಾನು ಜೀವ ಕಳೆದುಕೊಳ್ಳಲು, ನದಿಗೆ ಹಾರಿದ್ದಾಳೆ, ಆದರೆ ಕೆಲವು ಕಟ್ಟಡ ಕಾರ್ಮಿಕರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Goa: 18 ತಿಂಗಳ ಮಗುವನ್ನು ಕೊಂದು, ನದಿಗೆ ಹಾರಿದ ಮಹಿಳೆ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 06, 2022 | 5:13 PM

Share

ಪಣಜಿ: ಶನಿವಾರ ಮುಂಜಾನೆ ಗೋವಾದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ತನ್ನ 18 ತಿಂಗಳ ಮಗಳನ್ನು ಕೊಂದು, ನಂತರ ತಾನು ಜೀವ ಕಳೆದುಕೊಳ್ಳಲು, ನದಿಗೆ ಹಾರಿದ್ದಾಳೆ, ಆದರೆ ಕೆಲವು ಕಟ್ಟಡ ಕಾರ್ಮಿಕರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. 34 ವರ್ಷದ ಮಹಿಳೆ ಜರ್ಮನಿಯಲ್ಲಿ ಹಲವಾರು ವರ್ಷಗಳಿಂದ ನೆಲೆ ನಿಂತಿದ್ದರು. ನಂತರ ದಕ್ಷಿಣ ಗೋವಾದ ಚಿಕಾಲಿಮ್‌ನಲ್ಲಿರುವ ತನ್ನ ಪೋಷಕರ ಮನೆಗೆ ಕಳೆದ ವಾರ ಬಂದಿದ್ದಳು, ಆಕೆಯ ಪತಿ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯನ್ನು ನಿಮಿಷಾ ವಲ್ಸನ್ ಎಂದು ಗುರುತಿಸಲಾಗಿದ್ದು, ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತನ್ನ 18 ತಿಂಗಳ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಅವಳು ತನ್ನ ಮನೆಯವರ ಬಳಿ ಕಾರಿನ ಕೀಯನ್ನು ಕೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ನಂತರ ಸುಮಾರು ಐದು ಕಿಲೋಮೀಟರ್ ದೂರ ಕಾರನ್ನು ಓಡಿಸಿಕೊಂಡು ಸೇತುವೆಯೊಂದಕ್ಕೆ ನಿಲ್ಲಿಸಿ, ನಂತರ ಸೇತುವೆಯಿಂದ ಜುವಾರಿ ನದಿಗೆ ಹಾರಿದ್ದಾಳೆ. ಆದರೆ, ಸೇತುವೆ ದುರಸ್ಥಿ ಮಾಡುತ್ತಿದ್ದ ಕೆಲವು ಕಾರ್ಮಿಕರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯನ್ನು ಬಂಬೋಲಿಮ್‌ನಲ್ಲಿರುವ ಸರ್ಕಾರಿ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ದಾಖಲು ಮಾಡಲಾಗಿದೆ. ಈಗ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅವರು ಹೇಳಿದರು. ಆರೋಪಿ ಮಹಿಳೆ ಜರ್ಮನಿಯಲ್ಲಿ ಹಲವಾರು ವರ್ಷಗಳ ನಂತರ ಗೋವಾಕ್ಕೆ ಮರಳಿದ್ದಳು, ಅಲ್ಲಿ ಅವಳ ಪತಿ ಕೆಲಸ ಮಾಡುತ್ತಿದ್ದಾನೆ ಎಂದು ಶ್ರೀನಾಯಕ್ ಹೇಳಿದರು. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ
Image
Rape: 3 ವರ್ಷದ ಬಳಿಕ ಉತ್ತರ ಪ್ರದೇಶದ ಬಿಎಸ್​ಪಿ ಸಂಸದ ಅತುಲ್ ರೈ ಅತ್ಯಾಚಾರ ಆರೋಪದಿಂದ ಖುಲಾಸೆ
Image
Ramanagara: ಮಗುವಿನ ಸಾವಿನಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಂಪತಿ
Image
ನೇಣು ಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ; ಬಿಜೆಪಿ ಶಾಸಕನೇ ಸಾವಿಗೆ ಕಾರಣವೆಂದು ಸೂಸೈಡ್ ನೋಟ್​​ನಲ್ಲಿ ಆರೋಪ
Image
ಕಟ್ಟಡದಿಂದ ಎಸೆದು ಮಗುವಿನ ಹತ್ಯೆ ಪ್ರಕರಣ: ಮಗುವಿನ ತಂದೆ ಕಣ್ಣೀರಿಡುತ್ತಾ ಹೇಳಿದ್ದೇನು?

Published On - 5:12 pm, Sat, 6 August 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ