ನೇಣು ಬಿಗಿದುಕೊಂಡು ಸ್ವಾಮೀಜಿ ಆತ್ಮಹತ್ಯೆ; ಬಿಜೆಪಿ ಶಾಸಕನೇ ಸಾವಿಗೆ ಕಾರಣವೆಂದು ಸೂಸೈಡ್ ನೋಟ್ನಲ್ಲಿ ಆರೋಪ
ರವಿನಾಥ್ ಅವರ ಸೂಸೈಡ್ ನೋಟ್ನಲ್ಲಿ ಜಮೀನು ವಿವಾದದಿಂದ ಈ ರೀತಿ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತನ್ನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದಂತೆ ಆಡಳಿತಕ್ಕೆ ಸೂಸೈಡ್ ನೋಟ್ನಲ್ಲಿ ಮನವಿ ಮಾಡಿದ್ದಾರೆ.
ಜೈಪುರ: ಜಮೀನು ವಿವಾದದ ಹಿನ್ನೆಲೆಯಲ್ಲಿ ರವಿನಾಥ್ ಎಂಬ 60 ವರ್ಷದ ಸ್ವಾಮೀಜಿ ಗುರುವಾರ ರಾತ್ರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಭಿನ್ಮಾಲ್ ಶಾಸಕ ಪೂರ ರಾಮ್ ಚೌಧರಿ (Poora Ram Choudhary) ಅವರಿಂದಲೇ ಆ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರವಿನಾಥ್ (Ravinath) ಅವರಿದ್ದ ಆಶ್ರಮದ ದರ್ಶಕರು ಆರೋಪಿಸಿದ್ದಾರೆ. ನನ್ನ ಆತ್ಮಹತ್ಯೆಗೆ ಬಿಜೆಪಿ ಶಾಸಕ ಪೂರ ರಾಮ್ ಚೌಧರಿ ಅವರೇ ಕಾರಣ ಎಂದು ರವಿನಾಥ್ ಸೂಸೈಡ್ ನೋಟ್ ಬರೆದಿಟ್ಟಿದ್ದಾರೆ.
ರವಿನಾಥ್ ಅವರ ಸೂಸೈಡ್ ನೋಟ್ನಲ್ಲಿ ಜಮೀನು ವಿವಾದದಿಂದ ಈ ರೀತಿ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. ತನ್ನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದಂತೆ ಆಡಳಿತಕ್ಕೆ ಸೂಸೈಡ್ ನೋಟ್ನಲ್ಲಿ ಮನವಿ ಮಾಡಿದ್ದಾರೆ.
ರಾಜಪುರ ಗ್ರಾಮದ ಸುಂಧಾ ಮಾತಾ ದೇವಸ್ಥಾನದ ತಪ್ಪಲಿನಲ್ಲಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸನ್ಯಾಸಿಯ ಶವ ಪತ್ತೆಯಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಆಶ್ರಮದ ಬಳಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಇದನ್ನೂ ಓದಿ: Crime News: ಬೆನ್ನು ನೋವಿನಿಂದ ಬೇಸತ್ತು ಎಎಸ್ಐ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ತನ್ನ ಮೇಲಿನ ಆರೋಪಗಳಿಗೆ ಉತ್ತರಿಸಿದ ಶಾಸಕ ಪೂರ ರಾಮ್ ಚೌಧರಿ, 30 ವರ್ಷಗಳ ಹಿಂದೆ ತಾನು ಖರೀದಿಸಿದ ಆಶ್ರಮದ ಹಿಂದೆ ಕಮರ್ಷಿಯಲ್ ಭೂಮಿ ಇದೆ. ನಾನು ಅದರಲ್ಲಿ ರೆಸಾರ್ಟ್ ನಿರ್ಮಿಸಲು ಯೋಚಿಸಿದ್ದೆ. ಗುರುವಾರ ತಹಸೀಲ್ದಾರ್ ಅವರಿಂದ ಅನುಮತಿ ಪಡೆದು, ಸರ್ಕಾರಿ ಅಧಿಕಾರಿಯಿಂದ ಜಮೀನು ಅಳತೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ನೋಡುಗರು ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ನಮ್ಮ ನಡುವೆ ಯಾವುದೇ ವಿವಾದ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.