One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ

One Day Trip: ಒತ್ತಡದ ಜೀವನದಲ್ಲಿ ಒಂದಿಷ್ಟು ಖುಷಿ ಬೇಕು ಎನಿಸುತ್ತಿದೆಯೇ ಹಾಗಾದರೆ ಬೆಂಗಳೂರಿನಿಂದ ಒಂದು ದಿನದ ಟ್ರಿಪ್ ಹೋಗಿ ಮೂಡ್ ಫ್ರೆಶ್ ಮಾಡಿಕೊಳ್ಳಿ.ಬೆಂಗಳೂರಿನಲ್ಲಿ ವಾಸಿಸುವವರು ಹೆಚ್ಚಿನವರು ಹೊರಗಿನಿಂದ ಬಂದವರಾಗಿದ್ದಾರೆ.

One Day Trip:ಒತ್ತಡ ಬದಿಗಿಟ್ಟು, ಬೆಂಗಳೂರಿನಿಂದ ಈ ಸ್ಥಳಗಳಿಗೆ ಒಂದು ದಿನದ ಟ್ರಿಪ್​ ಹೋಗಿ
Savanadurga
Follow us
TV9 Web
| Updated By: ನಯನಾ ರಾಜೀವ್

Updated on:Jun 04, 2022 | 12:29 PM

ಒತ್ತಡದ ಜೀವನದಲ್ಲಿ ಒಂದಿಷ್ಟು ಖುಷಿ ಬೇಕು ಎನಿಸುತ್ತಿದೆಯೇ ಹಾಗಾದರೆ ಬೆಂಗಳೂರಿನಿಂದ ಒಂದು ದಿನದ ಟ್ರಿಪ್ ಹೋಗಿ ಮೂಡ್ ಫ್ರೆಶ್ ಮಾಡಿಕೊಳ್ಳಿ.ಬೆಂಗಳೂರಿನಲ್ಲಿ ವಾಸಿಸುವವರು ಹೆಚ್ಚಿನವರು ಹೊರಗಿನಿಂದ ಬಂದವರಾಗಿದ್ದಾರೆ. ಕೆಲಸವನ್ನು ಅರಸಿ ದೂರದ ಊರುಗಳಿಂದ ಬೆಂಗಳೂರಿಗೆ ಬಂದಿರುತ್ತಾರೆ.

ಸಾಮಾನ್ಯವಾಗಿ ರಜೆ ದಿನಗಳು ಬಂದ್ರೆ ಸಾಕು ಒಂದು ದಿನದ ಮತ್ತೆಗೆ ಆದ್ರೂ ಟ್ರಿಪ್ ಹೋಗಿ ಬರಬೇಕು ಅನ್ನೋ ಅಸೆ ಇದ್ದೆ ಇರುತ್ತದೆ, ಕೆಲವರು ತಮ್ಮ ಫ್ರೆಂಡ್ಸ್ ಜೊತೆ ಹೋದ್ರೆ ಇನ್ನು ಕೆಲವರು ತಮ್ಮ ಫ್ಯಾಮಿಲಿ ಜೊತೆ ಹೋಗುವ ಅಸೆ ಇರುತ್ತದೆ ಒಂದು ದಿನದ ಮಟ್ಟಿಗೆ ಯಾವ ಸ್ಥಳಕ್ಕೆ ಹೋಗಿ ಬರಬಹುದು ಅನ್ನೋ ಗೊಂದಲ ಕೆಲವರಲ್ಲಿ ಇದ್ದೆ ಇರುತ್ತದೆ, ನೀವು ಬೆಂಗಳೂರು ಅಥವಾ ತುಮಕೂರಿನ ಅಸು ಪಾಸಿನಲ್ಲಿ ಇದ್ದರೆ ನಿಮಗೆ ಈ ಸ್ಥಳ ಒಂದು ದಿನದ ಟ್ರಿಪ್​ಗೆ ಅನುಕೂಲವಾಗುತ್ತದೆ.

ಮಂಚನಬೆಲೆ ಡ್ಯಾಮ್: ಸಾವನದುರ್ಗಾ ಬೆಟ್ಟದ ಸ್ವಲ್ಪ ಹಿಂದೆಯೇ ಮಂಚನ​ಬೆಲೆ ತಾಣ ಸಿಗುತ್ತವೆ. ಭವ್ಯವಾದ ನೈಸರ್ಗಿಕ ಸೌದಂರ್ಯ ಪ್ರವಾಸಿಗರ ಮನ ಗೆಲ್ಲುತ್ತದೆ. ಈ ಸ್ಥಳದಲ್ಲಿ ರಿವರ್​ ರಾಫ್ಟಿಂಗ್​, ನೀರಿನ ಆಟವನ್ನು ಆಡಬಹುದು. ಒಂದು ದಿನ ಆರಾಮವಾಗಿ ಈ ಸ್ಥಳದಲ್ಲಿ ಸಮಯ ಕಳೆಯಬಹುದು. ಬೆಂಗಳೂರಿನಿಂದ ಕೇಲವ 60 ಕಿ.ಮೀ ದೂರದಲ್ಲಿದೆ ಈ ಸ್ಥಳ.

ಸ್ಕಂದಗಿರಿ: ಟ್ರೆಕ್ಕಿಂಗ್ ಪ್ರೇಮಿಗಳಿಗೆ ಈ ಸ್ಕಂದ ಗಿರಿ ಸೂಕ್ತವಾದ ತಾಣ ಎಂದೇ ಹೇಳಬಹುದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಈ ಸ್ಕಂದಗಿರಿಯನ್ನು ನಿಮ್ಮ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಮಾಡಲು ಆಯ್ಕೆ ಮಾಡಿಕೊಳ್ಳಬಹುದು.

ಇಲ್ಲಿ ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಟ್ರೆಕ್ಕಿಂಗ್ ಮಾಡುತ್ತಾರೆ. ರಾತ್ರಿಯಲ್ಲಿ ಬೆಟ್ಟಗಳನ್ನು ಅನ್ವೇಷಿಸಲು ಮತ್ತು ಚಾರಣ ಮಾಡಲು ಈ ತಾಣವು ನಿಮಗೆ ಅವಕಾಶ ಮಾಡಿಕೊಡುತ್ತದೆ. ಸಮುದ್ರ ಮಟ್ಟದಿಂದ ಸುಮಾರು 1450 ಮೀಟರ್ ಎತ್ತರದಲ್ಲಿರುವ ಈ ಸ್ಕಂದ ಗಿರಿಯಲ್ಲಿ ಪುರಾತನವಾದ ಕೋಟೆಯನ್ನು ಹೊಂದಿದೆ.

ಪೂರ್ವದ ನಯಾಗರ ಫಾಲ್ಸ್ ಎಂದೇ ಕರೆಯಲಾಗುವ ಹೊಗೇನಕಲ್ ಫಾಲ್ಸ್ ಒಂದು ಸುಂದರ ವೀಕೆಂಡ್ ತಾಣವಾಗಿದೆ. ಇಲ್ಲಿ ನೀವು ತೆಪ್ಪದಲ್ಲಿ ಕೂತು ಸುತ್ತಾಡಬಹುದು. ಹೊಗೇನಕಲ್‌ ಎನ್ನುವುದು ತಮಿಳುನಾಡಿನ ಒಂದು ಸಣ್ಣ ಹಳ್ಳಿಯಾಗಿದೆ. ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿರುವ ಹೊಗೇನಕಲ್ ಫಾಲ್ಸ್‌ಗೆ ಒಂದು ದಿನದಲ್ಲಿ ಆರಾಮದಲ್ಲಿ ಹೋಗಿ ಬರಬಹುದು. ಕಾವೇರಿ ನದಿಯು ಇಬ್ಭಾಗವಾಗಿ ಇಲ್ಲಿ ಜಲಪಾತವಾಗಿ ಹರಿಯುತ್ತದೆ

ಶಿವನಸಮುದ್ರ :ಬೆಂಗಳೂರಿಂದ ಸುಮಾರು 135 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ನೀವು ಜಲಪಾತಕ್ಕೆ ಭೇಟಿ ನೀಡಬೇಕೆಂದಿದದ್ದರೆ ಶಿವನ ಸಮುದ್ರವು ನಿಮಗೆ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೆ ಒಂದು ದಿನ ಕಳೆಯಲು ಬೆಸ್ಟ್ ತಾಣವಾಗಿದೆ. ಇಲ್ಲಿ ನೀವು ಟ್ರೆಕ್ಕಿಂಗ್‌ನ್ನು ಅನುಭವಿಸಬಹುದು ಜೊತೆಗೆ ಸಾಕಷ್ಟು ಫೋಟೋ ಶೂಟ್‌ ಮಾಡಿಸಿಕೊಳ್ಳಬಹುದು. ಜಲಪಾತದ ಜೊತೆಗೆ ಇಲ್ಲಿರುವ ದೇವಾಲಯವು ನಿಜಕ್ಕೂ ಅಲ್ಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ನೀವು ಬೈಕ್ ಮೂಲಕ ಶಿವನ ಸಮುದ್ರಕ್ಕೆ ಲಾಂಗ್ ಡ್ರೈವ್ ಹೋಗಬಹುದು.

ಛೋಟಾ ಲಡಾಖ್: ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ದೊಡ್ಡ ಆಯುರ್ ರಾಕ್ ಕ್ವಾರಿಯು ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾಗಿದೆ, ಏಕೆಂದರೆ ಇದು ನಗರದಿಂದ ಕೇವಲ 60 ಕಿಮೀ ದೂರದಲ್ಲಿದೆ. ದೊಡ್ಡ ಆಯೂರು ಗ್ರಾಮವು ಗಣಿಗಾರಿಕೆ ಕೇಂದ್ರವಾಗಿತ್ತು ಮತ್ತು ಅಲ್ಲಿಯ ಆಳವಾದ ಕ್ವಾರಿ ಸತತ ಮಳೆಗಾಲದಲ್ಲಿ ನೀರಿನಿಂದ ತುಂಬಿದೆ. ಬಿಳಿಯ ಕಲ್ಲು ಇರುವುದರಿಂದ ಇದನ್ನು ‘ಛೋಟಾ ಲಡಾಖ್’ ಎಂದು ಕರೆಯಲಾಗುತ್ತದೆ ಮತ್ತು ಈ ನೀರು ಲಡಾಖ್‌ನಲ್ಲಿರುವ ಪ್ರಸಿದ್ಧ ಪಾಂಗಾಂಗ್ ಸರೋವರವನ್ನು ಹೋಲುತ್ತದೆ. ದಾರಿಯುದ್ದಕ್ಕೂ, ಸೊಂಪಾದ ಕೃಷಿಭೂಮಿಗಳು ಮತ್ತು ಬೆಟ್ಟಗಳ ವೀಕ್ಷಣೆಗಳನ್ನು ಆನಂದಿಸಬಹುದು.

ಸಾವನದುರ್ಗಾ:ಸಾವನದುರ್ಗ ಬೆಟ್ಟ ಏಷ್ಯಾದ ಅತಿ ದೊಡ್ಡ ಏಕಶಿಲೆಗಳಲ್ಲಿ ಒಂದಾದ ಸಾವನದುರ್ಗ ಬೆಟ್ಟ ನೋಡಲು ಅತ್ಯಾಕರ್ಷಕವಾಗಿದೆ. ಬೆಂಗಳೂರಿನಿಂದ ಕೇವಲ 50 ಕಿ.ಮೀ ಮಾತ್ರ ದೂರದಲ್ಲಿದೆ. ಒಂದು ತಾಸಿನೊಳಗೆ ಆರಾಮವಾಗಿ ಸ್ಥಳ ತಲುಪಬಹುದು. ಒಂದು ದಿನ ಇಲ್ಲಿ ನಿರಾಳವಾಗಿ ಸಮಯ ಕಳೆಯಲು ಅದ್ಭುತ ಸ್ಥಳವಿದು.

ನಂದಿ ಹಿಲ್ಸ್:ನಂದಿ ಬೆಟ್ಟ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಪ್ರವಾಸಿ ಸ್ಥಳಗಳಲ್ಲಿ ಒಂದು. ಸಾಮಾನ್ಯವಾಗಿ ಸೂರ್ಯೋದಯವನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಬೆಟ್ಟದ ಮೇಲೆ ನಿಂತು ಸೂರ್ಯನ ಉದಯ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್: ನೀವು ವನ್ಯಜೀವಿಗಳ ಜೀವನವನ್ನು ಕಂಡು ಆನಂದಿಸಲು ಈ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಸೂಕ್ತವಾದ ತಾಣವಾಗಿದೆ. ಬೆಂಗಳೂರಿನಿಂದ ಕೇವಲ ೨೨ ಕಿ.ಮೀ ದೂರದಲ್ಲಿರುವ ಈ ತಾಣಕ್ಕೆ ನಿಮ್ಮ ಮಕ್ಕಳೊಂದಿಗೆ ಕಾಲಕಳೆಯಲು ಬೆಸ್ಟ್ ಪ್ಲೇಸ್ ಇದಾಗಿದೆ.

ಸುಮಾರು 104.27 ಚ.ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ ಈ ಬೃಹತ್ ಪ್ರದೇಶದಲ್ಲಿ ಚಿಟ್ಟೆ ಉದ್ಯಾನವನ, ಮೃಗಾಲಯ, ಅಕ್ವೇರಿಯಂ, ಮಕ್ಕಳ ಉದ್ಯಾನವನ ಮತ್ತು ವಸ್ತು ಸಂಗಹಾಲಯವಿದೆ. ಇದನ್ನು ಹೊರತು ಪಡಿಸಿ ನೀವು ಜಂಗಲ್ ಸಫಾರಿ ಕೈಗೊಳ್ಳಬಹುದು.

ಮೈಸೂರು:ಮೈಸೂರು ಬೆಂಗಳೂರಿನಿಂದ ಸುಮಾರು 140 ಕಿ.ಮೀ ದೂರದಲ್ಲಿ ಮೈಸೂರನ್ನು ತಲುಪಬಹುದು. ಐತಿಹಾಸಿಕ ಪರಫರೆಗೆ ಹೆಸರುವಾಸಿಯಾಗಿದೆ. ಅತ್ಯಾಕರ್ಷಕ ಕೋಟೆಗಳು, ಅದ್ಧೂರಿಯಾದ ಅರೆಮನೆಯನ್ನು ನೋಡುವುದೇ ಮನಸ್ಸಿಗೆ ಖುಷಿ.

ವಂಡರ್​ಲಾ:ವಂಡರ್ ಲಾ ನಿಮ್ಮ ವಾರಾಂತ್ಯಕ್ಕೆ ಬೆಸ್ಟ್ ಪ್ಲೇಸ್ ಎಂದೇ ಹೇಳಬಹುದು. ಮೋಜು, ಮಸ್ತಿ, ರೋಮಾಂಚಕ ಅನುಭೂತಿ, ಸಾಹಸವನ್ನು ಆನಂದಿಸುವವರು ವಂಡರ್ ಲಾಗೆ ಭೇಟಿ ನೀಡಿ. ನೀರಿನ ಚಟುವಟಿಕೆಗಳು ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಬೆಂಗಳೂರಿನ ಮಂದಿಗೆ ಈ ಫನ್ ವಲ್ಡ್ ಅತ್ಯುತ್ತಮವಾದ ಏಂಜಾಯ್ ತಾಣವಾಗಿದೆ.

ಬೆಂಗಳೂರಿನಿಂದ ಸುಮಾರು 28 ಕಿ.ಮೀ ದೂರದಲ್ಲಿರುವ ಈ ಮನರಂಜನಾ ಸ್ಥಳಕ್ಕೆ ಕುಟುಂಬ ಸಮೇತ ಅಥವಾ ಸ್ನೇಹಿತರೊಂದಿಗೆ ಭೇಟಿ ನೀಡಬಹುದು.

ಮುತ್ಯಾಲ ಮಡುವು: ನೀವು ಪ್ರಕೃತಿಯ ಮಡಲಿನಲ್ಲಿ ಕೆಲವು ಸಮಯ ಕಾಲ ಕಳೆಯಲು ಮುತ್ಯಾಲ ಮಡುವು ಬೆಸ್ಟ್ ಪ್ಲೇಸ್ ಆಗಿದೆ. ಇದೊಂದು ವಾರಾಂತ್ಯದ ವಿಹಾರ ತಾಣವಾಗಿದ್ದು, ಸುಂದರವಾದ ಸೌಂದರ್ಯ, ದಟ್ಟವಾದ ಕಾಡುಗಳು, ಮೋಡಿ ಮಾಡುವ ಜಲಪಾತಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಬೆಂಗಳೂರಿನಿಂದ ಕೇವಲ 40 ಕಿ.ಮೀ ದೂರದಲ್ಲಿರುವ ಈ ಪ್ರವಾಸಿ ತಾಣಕ್ಕೆ ಬೆಂಗಳೂರಿನಿಂದ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ದೇವರಾಯನದುರ್ಗಾ:ಬೆಂಗಳೂರಿನಿಂದ ಸುಮಾರು 70ಕಿ.ಮೀ ದೂರದಲ್ಲಿರುವ ಈ ಪ್ರವಾಸಿ ತಾಣಕ್ಕೆ ಸಾಕಷ್ಟು ಮಂದಿ ತಮ್ಮ ವಾರಾಂತ್ಯದ ಸಮಯದಲ್ಲಿ ಭೇಟಿ ನೀಡುತ್ತಿರುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದಲ್ಲಿರುವ ದೇವರಾಯನ ದುರ್ಗವು ಹಚ್ಚ ಹಸಿರಿನ ಮರಗಳ ಮಧ್ಯೆ ವಿಹಾರ ಮಾಡಲು ಸೂಕ್ತವಾದ ಸ್ಥಳವಾಗಿದೆ.

ಈ ತಾಣವು ತನ್ನದೇ ಆದ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಪ್ರಶಾಂತವಾದ ಗಿರಿಧಾಮಗಳಲ್ಲಿ ಕಾಲ ಕಳೆಯಲು ನೀವು ಬಯಸಿದರೆ ದೇವರಾಯನದುರ್ಗಕ್ಕೆ ಭೇಟಿ ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Sat, 4 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ