Gold Price Today: ಚಿನ್ನದ ಬೆಲೆ ಇಂದು 430 ರೂ. ಕುಸಿತ; ಬೆಂಗಳೂರು ಸೇರಿ ಹಲವೆಡೆ ಬೆಳ್ಳಿ ದರ 800 ರೂ. ಇಳಿಕೆ

Silver Price Today: ಬೆಳ್ಳಿ ಬೆಲೆ ಇಂದು 800 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,200 ರೂ. ಇದ್ದುದು ಇಂದು 57,400 ರೂ. ಆಗಿದೆ.

Gold Price Today: ಚಿನ್ನದ ಬೆಲೆ ಇಂದು 430 ರೂ. ಕುಸಿತ; ಬೆಂಗಳೂರು ಸೇರಿ ಹಲವೆಡೆ ಬೆಳ್ಳಿ ದರ 800 ರೂ. ಇಳಿಕೆ
ಚಿನ್ನದ ಬೆಲೆ
TV9kannada Web Team

| Edited By: Sushma Chakre

Aug 07, 2022 | 5:53 AM

Gold Price on 7 August 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ (Gold Rate) ಏರಿಕೆಯಾಗಿತ್ತು. ಆದರೆ, ಇಂದು ಚಿನ್ನದ ದರ 430 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 800 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು 47,250 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇದ್ದುದು 51,550 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,450 ರೂ. ಮುಂಬೈ- 47,450 ರೂ, ದೆಹಲಿ- 47,400 ರೂ, ಕೊಲ್ಕತ್ತಾ- 47,450 ರೂ, ಬೆಂಗಳೂರು- 47,300 ರೂ, ಹೈದರಾಬಾದ್- 47,450 ರೂ, ಕೇರಳ- 47,450 ರೂ, ಪುಣೆ- 47,330 ರೂ, ಮಂಗಳೂರು- 47,300 ರೂ, ಮೈಸೂರು- 47,300 ರೂ. ಇದೆ.

ಇದನ್ನೂ ಓದಿ: Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ ಕೊಂಚ ಹೆಚ್ಚಳ; ಬೆಳ್ಳಿ ದರ 500 ರೂ. ಏರಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,850 ರೂ, ಮುಂಬೈ- 51,550 ರೂ, ದೆಹಲಿ- 51,710 ರೂ, ಕೊಲ್ಕತ್ತಾ- 51,550 ರೂ, ಬೆಂಗಳೂರು- 51,600 ರೂ, ಹೈದರಾಬಾದ್- 51,550 ರೂ, ಕೇರಳ- 51,550 ರೂ, ಪುಣೆ- 51,580 ರೂ, ಮಂಗಳೂರು- 51,600 ರೂ, ಮೈಸೂರು- 51,600 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು 800 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 58,200 ರೂ. ಇದ್ದುದು ಇಂದು 57,400 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,000 ರೂ, ಮೈಸೂರು- 63,000 ರೂ., ಮಂಗಳೂರು- 63,000 ರೂ., ಮುಂಬೈ- 57,400 ರೂ, ಚೆನ್ನೈ- 63,000 ರೂ, ದೆಹಲಿ- 57,400 ರೂ, ಹೈದರಾಬಾದ್- 63,000 ರೂ, ಕೊಲ್ಕತ್ತಾ- 57,400 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada