Viral Video: ಬಾವಿಯಲ್ಲಿ ಬಿದ್ದ ಹಾವನ್ನು ರಕ್ಷಿಸಿದ ಈ ಮಹಿಳೆ
Snake Viral : ಹಾವನ್ನು ಕೊಂದರೆ ದೂರ ಓಡಿಹೋಗುತ್ತಾರೆ ಅಥವಾ ಕೊಲ್ಲುತ್ತಾರೆ. ಈ ಮಹಿಳೆಯ ಸಾಹಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Viral Python : ಹಾವು ಎಂದರೆ ಯಾರಿಗೆ ಭಯವಿಲ್ಲ? ಎಲ್ಲೋ ಅಪರೂಪಕ್ಕೆ ಸಾಹಸಿಗರಿಗೆ ಹಾವೆಂದರೆ ಭಯವಿರಲಿಕ್ಕಿಲ್ಲ. ಉಳಿದಂತೆ ಯಾರೂ ಹಾವೆಂದರೆ ದೂರ ಉಳಿಯುವವರೇ. ಇಂಥ ಅಪರೂಪದ ಸಾಹಸಿ ಹೆಣ್ಣುಮಗಳೊಬ್ಬರು ಬಾವಿಯಲ್ಲಿ ಬಿದ್ದ ಹಾವನ್ನು ರಕ್ಷಿಸಿದ ವಿಡಿಯೋ ಈಗ ವೈರಲ್ ಆಗಿದೆ. ಯೂಟ್ಯೂಬ್ನಲ್ಲಿ ಈ ವಿಡಿಯೋ ನೋಡಬಹುದಾಗಿದೆ. ಮೊದಲು ಕೋಲಿಗೆ ತಂತಿಯನ್ನು ಸುದ್ದಿ ಬಾವಿಯೊಳಗೆ ಇಳಿಸುತ್ತಾರೆ. ಹಾವಿಗೆ ಸೂಚನೆ ಸಿಕ್ಕು ಆ ಕೋಲಿಗೆ ಸುತ್ತಿಕೊಳ್ಳುತ್ತದೆ. ಕ್ರಮೇಣ ಮಹಿಳೆ ಅದನ್ನು ಬಾವಿಯಿಂದ ಎತ್ತುತ್ತಾರೆ. ಸದ್ಯ ಬಾವಿಗೆ ಬಿದ್ದ ಹಾವು ಜೀವ ಉಳಿಸಿಕೊಳ್ಳುತ್ತದೆ. ನಂತರ ಈ ಹಾವನ್ನು ಬಾಟಲಿಯಲ್ಲಿ ಹಾಕಿ ಕಾಡಿನಲ್ಲಿ ಅದನ್ನು ಬಿಟ್ಟು ಬರುತ್ತಾರೆ.
ಈ ವಿಡಿಯೋ ಸ್ನೇಕ್ ಗರ್ಲ್ ಪ್ರತಿಭಾ ಠಾಕ್ರೆ ಎಂಬ ಯೂಟ್ಯೂಬ್ ಚಾನೆಲ್ಲಿನಲ್ಲಿ ಅಪ್‌ಲೋಡ್ ಆಗಿದೆ. ಸುಮಾರು 6,000 ಕ್ಕೂ ಹೆಚ್ಚು ವೀಕ್ಷಣೆಗೆ ಈ ವಿಡಿಯೋ ಒಳಪಟ್ಟಿದೆ. ಅನೇಕರು ಈ ಮಹಿಳೆಯ ಧೈರ್ಯ ಮತ್ತು ವನ್ಯಜೀವಿಗಳ ಬಗ್ಗೆ ಇರುವ ಪ್ರೀತಿಯನ್ನು ಶ್ಲಾಘಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ