Viral Video: ಪುಟ್ಟ ಕರಾಟೆ ಚಾಂಪಿಯನ್ ವಿಡಿಯೋ ನೋಡಿ
Karate : ಸಾಮಾಜಿಕ ಜಾಲತಾಣದಲ್ಲಿ 1 ಮಿಲಿಯನ್ಗೂ ಹೆಚ್ಚು ವೀಕ್ಷಣೆಗೆ ಒಳಪಟ್ಟ ಈ ಮುದ್ದಾದ ವಿಡಿಯೋ ನೋಡಿ. ಪುಟ್ಟ ಹುಡುಗಿಯ ಆತ್ಮವಿಶ್ವಾಸವಂತೂ...
Viral : ಅನೇಕ ಕರಾಟೆ ವಿಡಿಯೋಗಳನ್ನು ನೋಡಿರುತ್ತೀರಿ. ಅದರಲ್ಲೂ ಪುಟ್ಟಮಕ್ಕಳ ವಿಡಿಯೋಗಳಂತೂ ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಹುಚ್ಚು ಹಿಡಿಸುತ್ತಿರುತ್ತವೆ. ಇಲ್ಲೊಂದು ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ತನ್ನ ಕರಾಟೆ ಮಾಸ್ಟರ್ನೊಂದಿಗೆ ಫೈಟ್ ಮಾಡುತ್ತಿರುವ ದೃಶ್ಯವಿದೆ. ಇದನ್ನು ನೋಡಿದ ಯಾರಿಗೂ ಮುದ್ದು ಉಕ್ಕಿ ಬರುತ್ತದೆ. ಫನ್ನಿಮ್ಯಾನ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. 1 ಮಿಲಿಯನ್ಗೂ ಹೆಚ್ಚು ವೀಕ್ಷಣೆಯನ್ನು ಇದು ಹೊಂದಿದೆ. ಗುಲಾಬಿ ಬಣ್ಣದ ಕರಾಟೆ ಯೂನಿಫಾರ್ಮ್ನಲ್ಲಿರುವ ಈ ಬಾಲಕಿ ತನ್ನ ತರಬೇತುದಾರರೊಂದಿಗೆ ಅಭ್ಯಾಸ ಮಾಡುತ್ತಿರುವಾಗಿನ ವಿಡಿಯೋ ಇದಾಗಿದೆ.
aww so cute!! pic.twitter.com/m4XDUthafF
ಇದನ್ನೂ ಓದಿ— Funnyman (@fun4laugh) August 9, 2022
ಈ ವಯಸ್ಸಿನಲ್ಲಿ ವೃತ್ತಿಪರ ಆಟಗಾರರಂತೆ ಆಕೆ ಸ್ಟ್ರೋಕ್ ಕೊಡುವ ರೀತಿ ನಿಜಕ್ಕೂ ಶ್ಲಾಘನೀಯ. ಈಕೆಯ ಭವಿಷ್ಯ ಉಜ್ವಲವಾಗಿರುತ್ತದೆ. ಆತ್ಮವಿಶ್ವಾಸ ಅವಳ ಈ ನಡೆ ಭರವಸೆಯನ್ನು ಮೂಡಿಸುತ್ತಿದೆ. ಅಲ್ಲದೆ ಶಾಲೆಯಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಹಿಂಸೆಗೆ ಒಳಗಾಗುವ ಭಯ ಈಕೆಗಿರುವುದಿಲ್ಲ. ಬಾಲ್ಯದಲ್ಲಿ ಎಲ್ಲರೂ ಇಂಥ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಎಂದು ನೆಟ್ಟಿಗರು ಆಕೆಯನ್ನು ತರಬೇತುಗೊಳಿಸಿದ ತರಬೇತುದಾರರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಎಂದು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 12:37 pm, Thu, 11 August 22